ಲಯನ್​ ವಿಮಾನ ದುರಂತದಲ್ಲಿ 189 ಜನ ಜಲ ಸಮಾಧಿಯಾದರೂ ಒಬ್ಬ ಬದುಕುಳಿದಿದ್ದೇಗೆ?

ಜಕಾರ್ತ: ವಾಹನಗಳ ದಟ್ಟಣೆಯಿಂದ ಉಂಟಾಗುವ ಟ್ರಾಫಿಕ್​ ಜಾಮ್​ನಿಂದ ತೊಂದರೆಗೀಡಾದ ಮಂದಿ ಒಮ್ಮೆ ಹಿಡಿಶಾಪ ಹಾಕದೇ ಇರಲಾರರು. ಆದರೆ, ಅದೇ ಟ್ರಾಫಿಕ್​ ಜಾಮ್​ ಒಬ್ಬರ ಪ್ರಾಣವನ್ನು ಉಳಿಸಿದೆ ಎಂಬುದನ್ನು ನಾವು ನಂಬಲೇಬೇಕು.

ಸೋಮವಾರ ಬೆಳಗ್ಗೆ ಇಡೀ ವಿಶ್ವವೇ ಬೆಚ್ಚಿಬೀಳುವಂತಹ ಲಯನ್​ ಏರ್​ ವಿಮಾನ ದುರಂತ ನಡದೇ ಹೋಯಿತು. ಇಂಡೋನೇಷ್ಯಾದ ರಾಜಧಾನಿ ಜಕಾರ್ತದಿಂದ ಹಾರಿ ಬ್ಯಾಂಗ್ಕಾ ದ್ವೀಪದ ಪ್ರಮುಖ ನಗರ ಪಂಗ್ಕಲ್ ಪಿನಾಂಗ್ ತಲುಪಬೇಕಿದ್ದ ವಿಮಾನ ಟೇಕ್​ ಆಫ್​​ ಆದ 13 ನಿಮಿಷಗಳಲ್ಲಿ ಸಮುದ್ರದಲ್ಲಿ ಪತನವಾಗಿ 189 ಪ್ರಯಾಣಿಕರು ಜಲ ಸಮಾಧಿಯಾದರು. ಆದರೆ, ಅದೇ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಇಂಡೋನೇಷ್ಯಾದ ಸೋನಿ ಸೆಟ್ಯಾವಾನ್ ಎಂಬಾತ ಮಾತ್ರ ಬದುಕುಳಿದಿದ್ದಾರೆ. ಅದಕ್ಕೆ ಕಾರಣ ಟ್ರಾಫಿಕ್​ ಜಾಮ್​.

ಹೌದು, ಇಂಡೋನೇಷ್ಯಾದ ಹಣಕಾಸು ಸಚಿವಾಲಯದ ಅಧಿಕಾರಿಯಾಗಿದ್ದ ಸೆಟ್ಯಾವಾನ್, ವಾರಕ್ಕೊಮ್ಮೆ ತನ್ನ ಸಹೋದ್ಯೋಗಿಗಳೊಂದಿಗೆ ಪಂಗ್ಕಲ್ ಪಿನಾಂಗ್​ಗೆ ತೆರಳುತ್ತಿದ್ದ. ಎಂದಿನಂತೆ ಈ ಬಾರಿಯು ಜೆಟಿ 610 ಲಯನ್​ ವಿಮಾನವನ್ನು ಆತ ಬುಕ್​​ ಮಾಡಿದ್ದ. ಆದರೆ, ಸೊಕೆರ್ನೋ-ಹಟ್ಟಾ ವಿಮಾನ ನಿಲ್ದಾಣದ ದಾರಿಯಲ್ಲಿ ಭಾರಿ ಟ್ರಾಫಿಕ್ ಇದ್ದುದ್ದರಿಂದ​ ತಡವಾಗಿ ಬಂದ ಆತನಿಗೆ ವಿಮಾನ ಸಿಗದೇ ಬೇರೊಂದು ವಿಮಾನದಲ್ಲಿ ಪ್ರಯಾಣಿಸಿದ್ದ.

ತಾನು ಪ್ರಯಾಣಿಸಿದ ವಿಮಾನ ಲ್ಯಾಂಡ್​ ಆಗುತ್ತಿದ್ದಂತೆ ಲಯನ್​ ವಿಮಾನ ಪತನವಾಗಿದೆ ಎಂಬ ಸುದ್ದಿ ಕೇಳಿದ ಸೆಟ್ಯಾವಾನ್​ಗೆ ಒಮ್ಮೆ ಆಘಾತವಾಗಿದೆ. ಪತನಗೊಂಡ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸ್ನೇಹಿತರನ್ನು ನೆನೆದು ಕಣ್ಣೀರು ಹಾಕಿದ್ದಾನೆ. ಅಲ್ಲದೆ, ವಿಮಾನ ಪತಗೊಂಡ ವಿಷಯ ತಿಳಿದು ಗಾಬರಿಗೊಂಡಿದ್ದ ಕುಟುಂಬಸ್ಥರಿಗೆ ಕರೆ ಮಾಡಿ ನನಗೇನು ಆಗಿಲ್ಲ ಎಂದು ನಡೆದ ಘಟನೆಯನ್ನು ವಿವರಿಸಿದ್ದಾನೆ. (ಏಜೆನ್ಸೀಸ್​)

ಜಕಾರ್ತದಿಂದ ಟೇಕ್​ ಆಫ್​ ಆದ ಕೆಲವೇ ನಿಮಿಷಗಳಲ್ಲಿ ಲಯನ್​ ವಿಮಾನ ನಾಪತ್ತೆ: ಸಮುದ್ರದಲ್ಲಿ ಪತನ

ಲಯನ್​​ ಏರ್​ ಪತನ: ವಿಮಾನದಲ್ಲಿ ಕ್ಯಾಪ್ಟನ್ ಆಗಿದ್ದ ಭಾರತೀಯನ​ ದುರಂತ ಸಾವು

ವಿಮಾನ ದುರಂತ: 189 ಜನ ಜಲ ಸಮಾಧಿ