ಸರ್ಜಾಪುರದಲ್ಲಿ ಸರಣಿ ಕಳ್ಳತನ

ಚಿನ್ನಾಭರಣ, ನಗದು ದೋಚಿ ಪರಾರಿ

ಲಿಂಗಸುಗೂರು: ಸಮೀಪದ ಸರ್ಜಾಪುರ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಸರಣಿ ಮನೆ ಕಳ್ಳತನವಾಗಿದೆ. ಗ್ರಾಮದ ತಿಪ್ಪಣ್ಣ ಎಂಬುವವರ ಮನೆಗೆ ನುಗ್ಗಿದ ಕಳ್ಳರು, ಅಲ್ಮೆರಾ ಬೀಗ ಮುರಿದು 22 ತೊಲ ಚಿನ್ನ, 40 ಸಾವಿರ ರೂ.ನಗದು, ಮಹಾದೇವಪ್ಪ ಎಂಬುವವರ ಮನೆಯಲ್ಲಿ ಅರ್ಧ ತೊಲ ಚಿನ್ನ, 15 ಸಾವಿರ ರೂ. ನಗದು ಹಾಗೂ ಹನುಮಂತಪ್ಪ ಶೇಷನಾಳ ಎನ್ನುವವರ ಮನೆಯಲ್ಲಿ 1 ತೊಲ ಚಿನ್ನ, 4 ಸಾವಿರ ರೂ. ದೋಚಿ ಪರಾರಿಯಾಗಿದ್ದಾರೆ.

ಬೇಸಿಗೆ ಹಿನ್ನೆಲೆಯಲ್ಲಿ ಮೂರು ಮನೆಗಳ ಸದಸ್ಯರು ಮಾಳಿಗೆ ಮೇಲೆ ಮಲಗಿದ್ದ ಸಮಯದಲ್ಲಿ ಕಳ್ಳತನವಾಗಿದೆ. ಸ್ಥಳಕ್ಕೆ ಎಎಸ್ಪಿ ಶ್ರೀಹರಿ ಬಾಬು, ಸಿಪಿಐ ಯಶವಂತ ಬಿಸನಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಮತ್ತು ಶ್ವಾನದಳದಿಂದ ಶೋಧ ಕಾರ್ಯ ನಡೆಸಿದ್ದು, ತನಿಖೆ ಮುಂದುವರಿದಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.