ಇಂಡಿ: ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದಿಂದ 2ಎ ಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿದ್ದ ಪಂಚಮಸಾಲಿ ಸಮಾಜ ಬಾಂಧವರ ಮೇಲೆ ಲಾಠಿ ಪ್ರಹಾರ ನಡೆಸಿದ್ದನ್ನು ವಿರೋಧಿಸಿ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಗುರುವಾರ ವಿವಿಧೆಡೆ ಟಯರ್‌ಗೆ ಬೆಂಕಿಹಚ್ಚಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಸಮಾಜ ಬಾಂಧವರು ಸಿದ್ದರಾಮಯ್ಯ ಅವರ ಭಾವಚಿತ್ರ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜದ ಇಂಡಿ ತಾಲೂಕ ಘಟಕದ ಅಧ್ಯಕ್ಷ ತಾಲೂಕು ವಿ.ಎಚ್. ಬಿರಾದಾರ ಮಾತನಾಡಿ, ದಶಕಗಳಿಂದ ಮೀಸಲಾತಿ ಹೋರಾಟ ನಡೆಯುತ್ತಿದೆ. ಯಾವ ಸರ್ಕಾರವೂ ನಮ್ಮ ಹೋರಾಟವನ್ನು ಇಷ್ಟು ಕಡೆಗಣನೆ ಮಾಡಿರಲಿಲ್ಲ. ಈ ಸರ್ಕಾರ ಲಾಠಿ ಪ್ರಹಾರ ನಡೆಸಿ ಹೋರಾಟ ಹತ್ತಿಕ್ಕುವ ಕಾರ್ಯ ಮಾಡಿದ್ದರೂ ಸಹಿತ ಕಾಂಗ್ರೆಸ್ ಪಕ್ಷದಲ್ಲಿನ ಲಿಂಗಾಯತ ಶಾಸಕರು ಸುಮ್ಮನಿರುವುದು ನಮ್ಮ ದುರಾದೃಷ್ಟವಾಗಿದೆ. ಸಮಾಜದ ವಿರೋಧಿಯಾದ ಈ ಸರ್ಕಾರಕ್ಕೆ ಹಾಗೂ ಧ್ವನಿ ಮೊಳಗಿಸದ ಶಾಸಕ, ಸಚಿವರಿಗೆ ಮುಂಬರುವ ದಿನಗಳಲ್ಲಿ ಸಮಾಜ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದರು.
ಮಾಜಿ ಶಾಸಕ ರವಿಕಾಂತ ಪಾಟೀಲ, ಭೀಮನಗೌಡ ಪಾಟೀಲ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಅಯೂಬ ನಾಟೀಕಾರ, ಡಾ. ರಮೇಶ ರಾಠೋಡ, ಬಾಳು ಮುಳಜಿ, ಸೋಮಶೇಖರ ದೇವರ, ಅನೀಲಗೌಡ ಬಿರಾದಾರ, ನಿಂಗನಗೌಡ ಬಿರಾದಾರ ಮಾತನಾಡಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಬಿ.ಎಸ್. ಕಡಕಭಾವಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು.
ಶ್ರೀಕಾಂತ ದೇವರ, ಪಾಪು ಕಿತ್ತಲಿ, ಶಿವಾನಂದ ಚಾಳೀಕಾರ, ರವಿಗೌಡ ಪಾಟೀಲ, ಭೀಮರಾಯ ಬಿರಾದಾರ, ಪ್ರಶಾಂತ ಲಾಳಸಂಗಿ, ಸುನೀಲಗೌಡ ಬಿರಾದಾರ, ಅಶೋಕ ಅಕಲಾದಿ, ದಯಾನಂದ ಪಾಟೀಲ, ಅನೀಲಪ್ರಸಾದ ಏಳಗಿ, ಪ್ರಭು ಹೊಸಮನಿ, ಅರವಿಂದ ಪಾಟೀಲ, ಮಹಾದೇವ ಗುಡ್ಡೊಡಗಿ, ಭೀಮರಾಯ ಮದರಖಂಡಿ, ವೀರೇಂದ್ರ ಪಾಟೀಲ, ಗಂಗಾಧರ ಪಾಟೀಲ, ಎಸ್.ಆರ್. ಬಿರಾದಾರ, ಡಿ.ಜಿ. ಜೋತಗೊಂಡ, ಬಿ.ಬಿ. ಬಿರಾದಾರ, ಭೀಮನಗೌಡ ಪಾಟೀಲ, ಶಿವಾನಂದ ದೇವರ, ಸಂತೋಶ ಪಾಟೀಲ, ಪ್ರವೀಣ ಸಲಗರ, ಸಂಜು ನಾಯ್ಕೋಡಿ, ಜೀತಪ್ಪ ಕಲ್ಯಾಣಿ, ದುಂಡಪ್ಪ ಹ್ಯಾಳದ, ಶಿವಾನಂದ ಬೋಳಗೊಂಡ, ಸೋಮನಾಥ ಶಿವೂರ, ಭೀಮರಾಯ ಪಡಶೆಟ್ಟಿ, ಅಶೋಕಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಪ್ರಶಾಂತ ಬಿರಾದಾರ, ಶಿವಾನಂದ ಕಾಮಗೊಂಡ, ಪ್ರತೀಕ ಬಿರಾದಾರ, ಸಂಗಣ್ಣ ಹೊಸೂರ, ಶಿವಾನಂದ ಬಿರಾದಾರ, ನೀಲಕಂಠ ಬಿರಾದಾರ, ಸಾಹೇಬಗೌಡ ಪಾಟೀಲ, ದಾದಾಗೌಡ ಪಾಟೀಲ, ಮಲ್ಲು ಚಾಕುಂಡಿ, ಭೀಮ ಪ್ರಚಂಡಿ, ಅಂಬಣ್ಣ ಕವಟಗಿ ಸೇರಿದಂತೆ ಐದು ನೂರಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸಿದ್ದರು.