ಸಿಡಿಲು ಬಡಿದು 6 ಜಾನುವಾರು ಸಾವು

ಲಿಂಗಸುಗೂರು: ತಾಲೂಕಾದ್ಯಂತ ಮಂಗಳವಾರ ರಾತ್ರಿ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದು ಒಟ್ಟು 6 ಜಾನುವಾರು ಸತ್ತಿವೆ.

ಗೋನವಾಟ್ಲ ಗ್ರಾಮದಲ್ಲಿ ಅಯ್ಯನಗೌಡಗೆ ಸೇರಿದ 2 ಎತ್ತು, 1 ಹೋರಿ ಸಿಡಿಲಿಗೆ ಬಲಿಯಾಗಿವೆ. ಕಳ್ಳಿಲಿಂಗಸುಗೂರು ಗ್ರಾಮದ ನರಸಮ್ಮಗೆ ಸೇರಿದ 1 ಎಮ್ಮೆ, ರಾಂಪುರ (ಭೂಪುರ) ಗ್ರಾಮದ ರಂಗಮ್ಮ ಹಾಗೂ ನಿರುಪಾದಿಗೆ ಸೇರಿದ 2 ಆಕಳುಗಳು ಸಿಡಿಲು ಬಡಿದು ಸತ್ತಿವೆ. ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಚಪ್ಪ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.

Leave a Reply

Your email address will not be published. Required fields are marked *