ಲಿಂಗಸುಗೂರು: ತಾಲೂಕಿನ ಹಟ್ಟಿಚಿನ್ನದಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ಮಂಜುಳಾ ಅನುಮಾನಾಸ್ಪದ ಸಾವಿನ ಕುರಿತು ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಎಸಿ ಅವಿನಾಶ ಶಿಂಧೆಗೆ ಗುರುವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ವೈದ್ಯರ ಸೋಗಿನಲ್ಲಿ ರೋಗಿಗಳಿಗೆ ಚಿಕಿತ್ಸೆ: ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಲ್ಯಾಬ್ ಟೆಕ್ನಿಷಿಯನ್
ತಾಲೂಕಿನ ಸರ್ಕಾರಿ ನೌರರ ಮೇಲೆ ಕೊಲೆ, ಹಲ್ಲೆ, ದೌರ್ಜನ್ಯ ಮತ್ತು ಸುಳ್ಳು ಜಾತಿ ನಿಂದನೆ ಪ್ರಕರಣಗಳು ಮೇಲಿಂದ ಮೇಲೆ ಜರುಗುತ್ತಿದ್ದು, ಇದರಿಂದ ಸರ್ಕಾರಿ ನೌಕರರು ಭಯದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ.
ಸರ್ಕಾರಿ ನೌಕರರ ಮೇಲೆ ಜಾತಿ ನಿಂದನೆ ಪ್ರಕರಣದ ದೂರು ದಾಖಲಿಸುವ ಪೂರ್ವದಲ್ಲಿ ವಸ್ತುನಿಷ್ಟ ತನಿಖೆ ನಡೆಸಿ ಸತ್ಯಾಸತ್ಯತೆಯ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಸರ್ಕಾರಿ ನೌಕರರು ಮುಕ್ತ ಮತ್ತು ನಿರ್ಭಯವಾಗಿ ಸಾರ್ವಜನಿಕ ಸೇವೆ ಸಲ್ಲಿಸಲು ಕ್ರಮ ಕೈಗೊಂಡು ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರಮುಖರಾದ ಪ್ರಾಣೇಶ ಜೋಷಿ, ಗುರುರಾಜ, ರಮೇಶ ಸಾಲಗುಂದಿ, ಚಾರ್ಲಿಸ್ ಕೋಮರ್, ಲಕ್ಷ್ಮೀ, ಚಂದ್ರಕಲಾ, ವಿಜಯಲಕ್ಷ್ಮೀ, ಜಯಶ್ರೀ, ಉಮಾದೇವಿ, ರೇಣುಕಾ, ಬಸಮ್ಮ, ಜ್ಯೋತಿ, ಅಮರಮ್ಮ, ಶಾಂತಾ, ಮಂಜುಳಾ, ದೇವಮ್ಮ ಇತರರಿದ್ದರು.