ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಪರಿಷ್ಕರಿಸಿ – ಶಿಕ್ಷಕರ ಮನವಿ

ಲಿಂಗಸುಗೂರು: ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಶಿಕ್ಷಕರು ಬಿಇಒ ಕಚೇರಿ ಸಿಬ್ಬಂದಿಗೆ ಶುಕ್ರವಾರ ಮನವಿ ಸಲ್ಲಿಸಿದರು.

2002ರಲ್ಲಿ ನೇಮಕ ಹೊಂದಿದ ಶಿಕ್ಷಕರ 6ನೇ ವೇತನ ಆಯೋಗದ ವೇತನ ಪರಿಷ್ಕರಣೆ ವೇಳೆ ಮಾರ್ಪಡಿಸಬೇಕಾದ ವೇತನಕ್ಕಿಂತ ಪ್ರಸ್ತುತ ಸಂಬಳ ಕಡಿಮೆ ಬರುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ವೇತನ ತಾರತಮ್ಯ ಪರಿಷ್ಕರಣೆ ಮಾಡಿ ಹೊಸ ಕ್ರಮ ಜಾರಿಗೆ ತರಬೇಕೆಂದು ಆಗ್ರಹಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಕರಡಿ, ಉಪಾಧ್ಯಕ್ಷ ಮಾನಪ್ಪ, ಪ್ರಧಾನ ಕಾರ್ಯದರ್ಶಿ ನಾಗಪ್ಪ, ಶಿಕ್ಷಕರಾದ ಕೃಷ್ಣಮೂರ್ತಿ, ರೆಡ್ಡೆಪ್ಪ, ಮಲ್ಲೇಶಿ, ಚಂದ್ರು, ಶರಷ್ಚಂದ್ರ, ಗದ್ದೆಪ್ಪ ಇತರರಿದ್ದರು.

Leave a Reply

Your email address will not be published. Required fields are marked *