ಲಿಂಗಸುಗೂರು: ಪಿಐ ಹೊಸಗೇರಪ್ಪ ವರ್ಗಾವಣೆ ಮಾಡುವ ಷಡ್ಯಂತ್ರ ವಿರೋಧಿಸಿ ಸಾರ್ವಜನಿಕರು ಎಸಿ ಕಚೇರಿ ಎಫ್‌ಡಿಸಿ ಆದಪ್ಪಗೆ ಶನಿವಾರ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಅಕ್ರಮ ಚಟುವಟಿಕೆಗಳ ಹಾವಳಿಯನ್ನು ಪಿಐ ತಡೆದಿದ್ದಾರೆ. ಎರಡು ವರ್ಷದಲ್ಲಿ 280 ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದಾರೆ. ದಕ್ಷ ಅಧಿಕಾರಿ ಹೊಸಗೇರಪ್ಪ ಅವರು ಗ್ರಾಮೀಣ ಭಾಗದ ಕುಟುಂಬಗಳ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ.
ಮಟ್ಖಾ ಬುಕ್ಕಿಗಳು, ಇಸ್ಪೀಟ್ ದಂಧೆ ಕೋರರು ಭಯಹುಟ್ಟಿಸಿರುವ ಪಿಐ ಹೊಸಗೇರಪ್ಪ ಅವರನ್ನು ವರ್ಗಾವಣೆ ಮಾಡಬಾರದು. ವರ್ಗಾವಣೆ ಮಾಡಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.