ಗೌರವಧನ ಬಿಡುಗಡೆಗೆ ಒತ್ತಾಯ

ಎಸಿ ಕಚೇರಿ ಮುಂದೆ ಅಂಗನವಾಡಿ ನೌಕರರ ಪ್ರತಿಭಟನೆ

ಲಿಂಗಸುಗೂರು: ಕೇಂದ್ರ ಸರ್ಕಾರ ಹೆಚ್ಚಿಸಿರುವ ಗೌರವಧನ ಬಿಡುಗಡೆ, ನಿವೃತ್ತಿ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಕಾರ್ಯಕರ್ತೆಯರು, ಸಹಾಯಕಿಯರು ಎಸಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ನೌಕರರು, ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲಾಖೆಯಿಂದಲೇ ಕೇಂದ್ರಗಳಿಗೆ ಮೊಟ್ಟೆಗಳನ್ನು ಪೂರೈಕೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಆಹಾರ ಧಾನ್ಯ ವಿತರಿಸಬೇಕು. ಮಾರ್ಚ್, ಏಪ್ರಿಲ್ ಗೌರವಧನ ಬಿಡುಗಡೆ ಮಾಡಬೇಕು. ಕೇಂದ್ರಗಳಿಗೆ ಹಾಜರಾತಿ ಬುಕ್, ಟೇಬಲ್, ಕುರ್ಚಿ, ಕುಡಿವ ನೀರು ಸೇರಿ ಮೂಲ ಸೌಕರ್ಯ ಕಲ್ಪಿಸಬೇಕು. ನೌಕರರ ಗೌರವಧನ ವಿನಾಕಾರಣ ಕಡಿತಗೊಳಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಳಿಕ ಕಚೇರಿ ಸ್ಥಾನಿಕ ಅಧಿಕಾರಿ ಪಾರ್ವತಿ ಹಿರೇಮಠಗೆ ಮನವಿ ಸಲ್ಲಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶೇಕ್ಷಾ ಖಾದ್ರಿ, ಎಂ.ಸಿ.ಲಿಂಗಪ್ಪ, ನೌಕರರಾದ ಲಕ್ಷ್ಮಿ ನಗನೂರು, ರೇಣುಕಮ್ಮ, ಮುದುಕಮ್ಮ, ನಾಗರತ್ನ, ಶರಣಮ್ಮ, ಬಸಮ್ಮ ಇತರರಿದ್ದರು.