More

    ಲಿಂ.ಸಿದ್ಧಲಿಂಗ ಶ್ರೀಗಳ ಬದುಕೇ ಒಂದು ಪವಾಡ, ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯರ ಹೇಳಿಕೆ

    ಬಳ್ಳಾರಿ: ಲಿಂ.ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರರು ಲೋಕದ ಹಿತಕ್ಕಾಗಿ ಜನ್ಮತಾಳಿದವರು. ಅವರ ಬದುಕೇ ಪವಾಡ, ನಿತ್ಯ ಜೀವನವೇ ಒಂದು ಚರಿತ್ರೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

    ಇಲ್ಲಿನ ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದಲ್ಲಿ ಶ್ರೀ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸೇವಾ ಸಮಿತಿ ಭಾನುವಾರ ಆಯೋಜಿಸಿದ್ದ ಲಿಂ.ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯರ 84ನೇ ಪುಣ್ಯಾರಾಧನೆ ಮಹಾಮಂಗಲ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಲಿಂ.ಸಿದ್ಧಲಿಂಗ ಶ್ರೀಗಳು ವ್ಯಕ್ತಿಯಲ್ಲ, ಶಕ್ತಿ. ಅವರು ಬದುಕಿದ್ದು 46 ವರ್ಷವಾಗಿದ್ದರೂ ಅನೇಕ ಸಾಮಾಜಿಕ ಕ್ರಾಂತಿ ಕೈಗೊಂಡರು. 16ನೇ ವಯಸ್ಸಿಗೆ ಉಜ್ಜಯಿನಿ ಪೀಠಾಧಿಕಾರ ಸ್ವೀಕಾರ ಮಾಡಿ ಇಡೀ ಭಾರತ ಸಂಚರಿಸಿದರು. ಅಲ್ಲದೆ ಶ್ರೀ ಸಿದ್ಧಾಂತ ಶಿಖಾಮಣಿ ಎಂಬ ಗ್ರಂಥ ಬರೆದು ಖ್ಯಾತಿ ಗಳಿಸಿದರು. ಅವರ ಪುಣ್ಯಾರಾಧನೆ ಪ್ರತಿ ವರ್ಷ ಜಿಲ್ಲೆಯಲ್ಲಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.

    ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಶ್ರೀ ಸಂಗನಬಸವ ಸ್ವಾಮೀಜಿ, ಕಲ್ಯಾಣ ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಗುತ್ತಿಗೆದಾರ ಸಿದ್ದರಾಮನಗೌಡ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts