More

    ಮುಗಿಲ್ ಪೇಟೆ ಚಿತ್ರತಂಡದಿಂದ ಲಿಮ್ಕಾ ದಾಖಲೆ? ಒಂದೇ ಸಿನಿಮಾದಲ್ಲಿ ಸಾಧು ಕೋಕಿಲ 17 ಪಾತ್ರ

    ಬೆಂಗಳೂರು: ‘ಕ್ರೇಜಿಸ್ಟಾರ್’ ರವಿಚಂದ್ರನ್ ಪುತ್ರ ಮನುರಂಜನ್ ಅಭಿನಯದ ‘ಮುಗಿಲ್ ಪೇಟೆ’ ಸಿನಿಮಾ ಕ್ರೇಜಿನೆಸ್​ಗೂ ಹೆಸರಾಗುವ ಸಾಲಿನಲ್ಲಿದೆ. ಮಾತ್ರವಲ್ಲ, ಆ ಮೂಲಕ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ನಲ್ಲೂ ‘ಮುಗಿಲ್ ಪೇಟೆ’ ಹೆಸರು ದಾಖಲಾಗುವ ಸಾಧ್ಯತೆಯೂ ಇದೆ. ಅಂಥದ್ದೊಂದು ಸಾಹಸಕ್ಕೆ ಚಿತ್ರದ ನಿರ್ದೇಶಕ ಭರತ್ ನಾವುಂದ ಮುಂದಾಗಿದ್ದಾರೆ.

    ಅಂದಹಾಗೆ ಆ ಸಾಹಸದ ಸೂತ್ರದಾರ ಭರತ್ ಆದರೂ ಪಾತ್ರಧಾರಿ ಸಾಧು ಕೋಕಿಲ. ಅಂದರೆ, ನಟ-ನಿರ್ದೇಶಕ ಸಾಧು ಕೋಕಿಲ ಅವರನ್ನು 17 ವಿಭಿನ್ನ ಪಾತ್ರಗಳಲ್ಲಿ ತೋರಿಸುವ ಮೂಲಕ ‘ಮುಗಿಲ್ ಪೇಟೆ’ ತೆಕ್ಕೆಗೆ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ಹಾಕಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಭರತ್. ರಕ್ಷಾ ವಿಜಯ್ಕುಮಾರ್ ನಿರ್ವಣದ ‘ಮುಗಿಲ್ ಪೇಟೆ’ ಚಿತ್ರದಲ್ಲಿ ಮನುರಂಜನ್ ಹಾಗೂ ಖಯಾದು ಲೋಹರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ.

    ಈ ಮಧ್ಯೆ ಚಿತ್ರತಂಡದಿಂದ ಲಿಮ್ಕಾ ದಾಖಲೆ ಪ್ರಯತ್ನದ ಸುದ್ದಿ ಹೊರಬಿದ್ದಿದೆ. ಸಾಧು ಕೋಕಿಲ ಈ ಚಿತ್ರದಲ್ಲಿ 17 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ಆರಂಭ ಹಾಗೂ ಅಂತ್ಯ ಸಾಧು ಕೋಕಿಲ ಅವರಿಂದಲೇ ಆಗಲಿದೆ. ಆ ಮೂಲಕ ‘ಮುಗಿಲ್ ಪೇಟೆ’ಯ ಮುಡಿಗೆ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ಗರಿ ಏರುವ ಸಾಧ್ಯತೆ ಗಳು ನಿಚ್ಚಳವಾಗಿವೆ. ಆ ನಿಟ್ಟಿನಲ್ಲಿ ಸಾಧು ಕೋಕಿಲ ಪಾತ್ರಗಳನ್ನು ರೂಪಿಸುವಂತೆ ಚಿತ್ರಕಥೆ ಹೆಣೆದಿ ದ್ದಾರಂತೆ ನಿರ್ದೇಶಕ ಭರತ್ ನಾವುಂದ. ಈ ಪ್ರಯತ್ನದಲ್ಲಿ ’ಮುಗಿಲ್ ಪೇಟೆ’ ತಂಡ ಯಶಸ್ವಿ ಯಾದರೆ ಒಬ್ಬನೇ ಕಲಾವಿದ ಒಂದೇ ಸಿನಿಮಾದಲ್ಲಿ ಅತ್ಯಧಿಕ ಪಾತ್ರಗಳನ್ನು ಮಾಡಿದ ಬಗ್ಗೆ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸಾಧು ಹೆಸರು ದಾಖಲಾಗಲಿದ್ದು, ‘ಮುಗಿಲ್ ಪೇಟೆ’ ಚಿತ್ರತಂಡಕ್ಕೂ ಲಿಮ್ಕಾ ದಾಖಲೆ ಖ್ಯಾತಿ ಒಲಿಯಲಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಈ ದಾಖಲೆ ಸದ್ಯ ನಟ ಹರೀಶ್ ರಾಜ್ ಹೆಸರಿನಲ್ಲಿದೆ. ಹರೀಶ್ ರಾಜ್ ನಿರ್ದೇಶನ-ನಿರ್ಮಾಣಣದಲ್ಲಿ ಮೂಡಿಬಂದಿದ್ದ ‘ಶ್ರೀ ಸತ್ಯನಾರಾಯಣ’ ಸಿನಿಮಾದಲ್ಲಿ ಅವರು 16 ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದರು. ಆ ಮೂಲಕ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿದ್ದರು. ಇದೀಗ ಆ ದಾಖಲೆ ಮುರಿಯಲು ‘ಮುಗಿಲ್ ಪೇಟೆ’ ಚಿತ್ರತಂಡ ಸಜ್ಜಾಗುತ್ತಿದ್ದು, ಒಂದೇ ಚಿತ್ರದಲ್ಲಿ 17 ಪಾತ್ರಗಳಲ್ಲಿ ನಟಿಸುವ ಸಿದ್ಧತೆಯಲ್ಲಿದ್ದಾರಂತೆ ಸಾಧು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts