More

    ಮಿಂಚಿನ ನೋಂದಣಿಯಲ್ಲಿ ಪಾಲ್ಗೊಳ್ಳುವಂತೆ ಯುವಜನತೆಗೆ ತಹಸೀಲ್ದಾರ್ ಹುಲ್ಲುಮನಿ ಸಲಹೆ

    ಜಗಳೂರು: ಕಡ್ಡಾಯವಾಗಿ ಮತದಾರ ಪಟ್ಟಿಯಲ್ಲಿ ನೋಂದಣಿ ಮಾಡಿಸಿ ಹಕ್ಕು ಚಲಾಯಿಸಬೇಕು ಎಂದು ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಹೇಳಿದರು.

    ಇಲ್ಲಿನ ಹೋಚಿ ಬೋರಯ್ಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ತಾಲೂಕು ಪಂಚಾಯಿತಿಯಿಂದ ಆಯೋಜಿಸಿದ್ದ ಮತದಾನ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು.

    ಮತದಾನದ ಹಕ್ಕು ಪಡೆಯಲು ವಿದ್ಯಾರ್ಥಿ ಯುವಜನತೆ ನೋಂದಣಿ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ. ದೇಶಾದ್ಯಂತ ಚರ್ಚೆಗೆ ಆಸ್ಪದವಾಗಿರುವ ಸಿಎಎಗೆ ಮತದಾರರ ಗುರುತಿನ ಚೀಟಿ ಅವಶ್ಯ ದಾಖಲೆಯಾಗಿರುತ್ತದೆ. ಸರ್ಕಾರಿ ನೌಕರರು ಸಿಂಧುತ್ವ, ಸರ್ಕಾರಿ ಸೌಲಭ್ಯ ಪಡೆಯುವ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ಬೇಕಾಗಿದ್ದು, 18 ವರ್ಷ ಮೀರಿದ ವಯಸ್ಕರು ಗ್ರಾಮೀಣ ಹಾಗೂ ಪಟ್ಟಣದ ಬಿಎಲ್‌ಒಗಳ ಬಳಿ ಅರ್ಜಿ ಸಲ್ಲಿಸಿ, ತಮ್ಮ ಹೆಸರನ್ನು ನೋಂದಾಯಿಸಬಹುದು ಎಂದು ತಿಳಿಸಿದರು.

    ತಾಪಂ ಇಒ ಮಲ್ಲಾನಾಯ್ಕ ಮಾತನಾಡಿ, ಪ್ರತಿ ವರ್ಷ ಶೇ.100 ರಷ್ಟು ಮತದಾನ ನೋಂದಣಿ ಗುರಿಯಿಟ್ಟುಕೊಂಡು ನೋಂದಣಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಆದರೂ ಶೇ.50 ರಷ್ಟು ಮಾತ್ರ ಸಾಧನೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

    ತಾಲೂಕಿನ ಪ್ರತಿ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಾಗೂ ಗ್ರಾಮೀಣ ಭಾಗದಲ್ಲಿ ಪಿಡಿಒ, ಬಿಎಲ್‌ಒ ಗ್ರಾಪಂ ಸಿಬ್ಬಂದಿ ನೇತೃತ್ವದಲ್ಲಿ ಜಾಗೃತಿ ಮೂಡಿಸಿ, ಜ.6 ರಿಂದ 8 ರವರೆಗೆ ಮೂರು ದಿನಗಳ ಕಾಲ ನಡೆಸುವ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಸಮರ್ಪಕವಾಗಿ ತಲುಪಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts