ಹುಣಸೂರಲ್ಲಿ ಮಿಂಚಿನ ನೋಂದಣಿ ಕಾರ್ಯಕ್ರಮ

ಹುಣಸೂರು: ಯುವ ಮತದಾರರನ್ನು ಮತದಾನ ಕಡೆ ಸೆಳೆಯುವ ಉದ್ದೇಶದಿಂದ ಚುನಾವಣಾ ಆಯೋಗ ರೂಪಿಸಿರುವ ಮಿಂಚಿನ ನೋಂದಣಿ ಕುರಿತು ತಾಲೂಕಿನ ಮತಗಟ್ಟೆ ಅದಿಕಾರಿಗಳಿಗೆ ಮಾಹಿತಿ ಸಭೆ ನಡೆಸಲಾಯಿತು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಹಸೀಲ್ದಾರ್ ಬಸವರಾಜು ಮಾತನಾಡಿ, ಫೆ.23, 24 ಹಾಗೂ ಮಾರ್ಚ್ 2, 3ರಂದು ರಾಜ್ಯಾದ್ಯಂತ ಚುನಾವಣಾ ಆಯೋಗ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಅಂಂಗವಿಕಲರು, ವಯೋವೃದ್ಧರು ತಮ್ಮ ಗುರುತಿನ ಚೀಟಿಯಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗುವುದು. ಆಯಾ ಮತಗಟ್ಟೆಯಲ್ಲೇ ಅಧಿಕಾರಿಗಳು ಮತದಾರರಿಂದ ಅರ್ಜಿ ಸ್ವೀಕರಿಸಿ ಸಮಸ್ಯೆ ಪರಿಹರಿಸಲಿದ್ದಾರೆ ಎಂದರು.

ಚುನಾವಣಾ ಶಿರಸ್ತೇದಾರ್ ತಿಮ್ಮಯ್ಯ ಮಾತನಾಡಿ, ತಾಲೂಕಿನಲ್ಲಿ 274 ಮತಗಟ್ಟೆಯಿದ್ದು, ಎಲ್ಲ ಮತತಗಟ್ಟೆಯಲ್ಲೂ ಮಿಂಚಿನ ನೋಂದಣಿ ಕಾರ್ಯ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದೆ ಎಂದರು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ನಾಗರಾಜ್, ಚುನಾವಣಾ ವಿಭಾಗದ ವಿಷಯ ನಿರ್ವಾಹಕ ಗಣೇಶ್, ಉಪ ತಹಸೀಲ್ದಾರ್ ಲೋಕೇಶ್ ಮತ್ತಿತರರಿದ್ದರು.