ನವದೆಹಲಿ: ಇಟಲಿಯ ವಿಜ್ಞಾನಿಗಳು ಬೆಳಕನ್ನು ಘನೀಕರಿಸುವ (ಫ್ರೀಜ್) ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿದ್ದು, ಇದು ವಿಜ್ಞಾನ ಲೋಕದಲ್ಲಿ ಒಂದು ಮಹತ್ವದ ಬೆಳವಣಿಗೆಯಾಗಿದೆ.
ಬೆಳಕು ಕೂಡ ಸೂಪರ್ ಸಾಲಿಡ್ ಆಗಿ ವರ್ತಿಸಬಹುದೆಂಬುದನ್ನು ತೋರಿಸಿಕೊಟ್ಟಿರುವ ಈ ಆವಿಷ್ಕಾರ, ಕ್ವಾಂಟಂ ಕಂಪ್ಯೂಟಿಂಗ್ ಮತ್ತು ಆಪ್ಟಿಕಲ್ ತಂತ್ರಜ್ಞಾನ ಮುನ್ನಡೆಗೆ ದೊಡ್ಡ ಕೊಡುಗೆ ನೀಡಲಿದೆ. ಸೂಪರ್ಸಾಲಿಡ್ ಸ್ಥಿತಿಯು ವಸ್ತುವು ಘನದಂಥ ಸ್ವರೂಪ ಮತ್ತು ಘರ್ಷಣೆರಹಿತ ಹರಿಯುವಿಕೆ ಇವೆರಡೂ ಸ್ಥಿತಿಯನ್ನು ಪ್ರದರ್ಶಿಸುವ ಅಪರೂಪದ ಸ್ಥಿತಿಯಾಗಿದೆ. ‘ನೇಚರ್’ ಪತ್ರಿಕೆಯಲ್ಲಿ ಈ ಆವಿಷ್ಕಾರದ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಇದು ಕ್ವಾಂಟಂ ಭೌತಶಾಸ್ತ್ರದಲ್ಲಿ (ಕ್ವಾಂಟಂ ಫಿಸಿಕ್ಸ್) ಒಂದು ಮೈಲಿಗಲ್ಲಾಗಿದೆ ಹಾಗೂ ಕ್ವಾಂಟಂ ಕಂಪ್ಯೂಟಿಂಗ್ ಮತ್ತು ಆಪ್ಟಿಕಲ್ ತಂತ್ರಜ್ಞಾನಗಳಲ್ಲಿನ ಭವಿಷ್ಯದ ಅನ್ವಯತೆಗಳನ್ನು ಕ್ರಾಂತಿಕಾರಕಗೊಳಿಸಲಿದೆ.
ಇದುವರೆಗೆ ಸೂಪರ್ಸಾಲಿಡಿಟಿಯನ್ನು ಬೋಸ್-ಐನ್ಸ್ಟೀನ್ ಕಂಡೆನ್ಸೇಟ್ಗಳಲ್ಲಿ (ಬಿಇಸಿ) ಮಾತ್ರವೇ ಗಮನಿಸಲಾಗಿತ್ತು. ಆದರೆ, ಸ್ವತಃ ಬೆಳಕೇ ಈ ವಿಶಿಷ್ಟ ವರ್ತನೆಯನ್ನು ತೋರಿಸಬಹುದು ಎನ್ನುವುದನ್ನು ಆಂಟೋನಿಯೋ ಜಿಯಾನ್ಪೇಟ್ ನೇತೃತ್ವದ ವಿಜ್ಞಾನಿಗಳ ತಂಡ ಕಂಡು ಹಿಡಿದಿದೆ. ಅವರು ಪಾವಿಯಾ ವಿಶ್ವವಿದ್ಯಾನಿಲಯದ ಸಿಎನ್ಆರ್ ನ್ಯಾನೋಟೆಕ್ ಆಂಡ್ ಡೇವಿಡ್ ನಿಗ್ರೋ ಸಂಸ್ಥೆಯ ವಿಜ್ಞಾನಿಗಳಾಗಿದ್ದಾರೆ.
ಫ್ರೀಜ್ ಮಾಡಿದ್ದು ಹೇಗೆ?: ದ್ರವವನ್ನು ಘನವಾಗಿ ಪರಿವರ್ತಿಸಲು ಉಷ್ಣತೆಯನ್ನು ಕಡಿಮೆ ಮಾಡುವ ಸಾಂಪ್ರದಾಯಿಕ ವಿಧಾನದ ಬದಲು, ಬೆಳಕಿನಲ್ಲಿ ಸೂಪರ್ಸಾಲಿಡ್ ಸ್ಥಿತಿಯನ್ನು ಸೃಷ್ಟಿಸಲು ಸಂಶೋಧಕರು ಕ್ವಾಂಟಂ ತಂತ್ರಜ್ಞಾನವನ್ನು ಬಳಸಿದ್ದರು. ‘ನಿರಪೇಕ್ಷ ಶೂನ್ಯತೆಯ (ಅಬ್ಸಲ್ಯೂಟ್ ಝೀರೋ) ಸಮೀಪದ ತಾಪಮಾನದಲ್ಲಿ ಕ್ವಾಂಟಂ ಪರಿಣಾಮ ಉದ್ಭವಿಸುತ್ತದೆ’ ಎಂದು ಸಂಶೋಧಕರು ವಿವರಿಸಿದ್ದಾರೆ.
WTC ಫೈನಲ್‌ನಲ್ಲಿ ಭಾರತದ ಅನುಪಸ್ಥಿತಿ; ದೊಡ್ಡ ಮೊತ್ತದ ನಷ್ಟದ ಸುಳಿಗೆ ಸಿಲುಕಿದ ಆಯೋಜಕರು
6 ತಿಂಗಳ ಮಗುವಿನೊಂದಿಗೆ ವಿಮಾನ ಪ್ರಯಾಣ; ಸಹಪ್ರಯಾಣಿಕರಿಗೆ ದಂಪತಿ ಕೊಟ್ಟ ಪತ್ರ ವೈರಲ್