ರೇವಣಸಿದ್ದೇಶ್ವರ ಬೆಟ್ಟಕ್ಕೆ ಲಿಫ್ಟ್ ಕಾಮಗಾರಿ ಭರವಸೆ

ರಾಮನಗರ: ರೇವಣಸಿದ್ದೇಶ್ವರ ಬೆಟ್ಟಕ್ಕೆ ಲಿಫ್ಟ್ ನಿರ್ವಿುಸುವ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದ ದಾನಿಯೇ ಮತ್ತೆ ಕಾಮಗಾರಿ ಆರಂಭಿಸುವ ಭರವಸೆಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ.

ಅವ್ವೇರಹಳ್ಳಿಯಲ್ಲಿರುವ ರೇವಣಸಿದ್ದೇಶ್ವರ ಬೆಟ್ಟ ಅಂದಾಜು 156 ಅಡಿ ಎತ್ತರವಿದ್ದು, ಬಂಡೆ ಮೇಲೆ ನೆಲೆಸಿರುವ ದೇವರ ದರ್ಶನಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಬೆಟ್ಟಕ್ಕೆ ಲಿಫ್ಟ್ ನಿರ್ವಿುಸಿದರೆ ಭಕ್ತರ ಸಂಖ್ಯೆ ಹೆಚ್ಚುವುದರಿಂದ ಲಿಫ್ಟ್ ಹಾಕಲು ಜಿಲ್ಲಾಡಳಿತ ಚಿಂತಿಸಿತ್ತು. ಅಷ್ಟರಲ್ಲಿ ಬೆಂಗಳೂರಿನ ಕೆ.ಎಸ್. ವಿಶ್ವನಾಥ ಎಂಬುವರು ಲಿಫ್ಟ್ ನಿರ್ವಿುಸಿ, 5 ವರ್ಷ ನಿರ್ವಹಣೆ ಮಾಡುವುದಾಗಿ ಪರವಾನಗಿ ಪಡೆದಿದ್ದರು. 1.95 ಕೋಟಿ ರೂ. ಯೋಜನೆ ಸಿದ್ಧಪಡಿಸಿ, 2016ರಲ್ಲಿ ಕಾಮಗಾರಿ ಆರಂಭಿಸಿದ್ದರು. ಆಗ ನೋಟ್ ಬ್ಯಾನ್ ಆಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಕಳೆದ ತಿಂಗಳು ಯೋಜನೆಗೆ ಪ್ರವಾಸೋದ್ಯಮ ಇಲಾಖೆ ಮರುಜೀವ ನೀಡಲು ಮುಂದಾಗಿತ್ತು. ಈ ಬಗ್ಗೆ ವಿಜಯವಾಣಿ ಏ.26ರಂದು ಸಮಗ್ರ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ದಾನಿ ಜಿಲ್ಲಾಧಿಕಾರಿ ಭೇಟಿ ಮಾಡಿ, ಕಾಮಗಾರಿ ಪುನರಾರಂಭಿಸಲು ಅವಕಾಶ ಕೇಳಿದ್ದಾರೆ.

ಲಿಫ್ಟ್ ಕಾಮಗಾರಿ ಪುನರಾ ರಂಭಿಸುವ ಬಗ್ಗೆ ವಿಶ್ವನಾಥ್​ನನ್ನನ್ನು ಭೇಟಿ ಮಾಡಿದ್ದರು. ಲಿಫ್ಟ್ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಂಡು ಚರ್ಚೆ ನಡೆಸಿ, ಸೂಕ್ತ ನಿರ್ಣಯಕ್ಕೆ ಬರೋಣ ಎಂದು ತಿಳಿಸಿದ್ದೇನೆ. ಜಿಲ್ಲಾಡಳಿತದಿಂದ ಎಲ್ಲ ಸಹಕಾರ ನೀಡಲಾಗುವುದು.

| ಡಾ. ಕೆ. ರಾಜೇಂದ್ರ, ಜಿಲ್ಲಾಧಿಕಾರಿ

Leave a Reply

Your email address will not be published. Required fields are marked *