ಹುಬ್ಬಳ್ಳಿ: ಭಾರತೀಯ ವಾಸ್ತುಶಿಲ್ಪಿ ಸಂಸ್ಥೆ (ಐಐಎ) ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಮಾಡಿದ ಅದ್ವೀತಿಯ ಕಾರ್ಯಗಳಿಗೆ ನಗರದ ಮೂವರು ಸಾಧಕರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.
ನಗರದ ಖ್ಯಾತ ವಾಸ್ತುಶಿಲ್ಪಿಗಳಾದ ನಳಿನಿ ಕೆಂಭಾವಿ, ಪ್ರಾಧ್ಯಾಪಕ ಗುರುರಾಜ ಜೋಶಿ ಹಾಗೂ ಪ್ರೊ. ಮಮತಾ ಪಿ. ರಾಜ್ ಅವರಿಗೆ ಆರ್ಕಿಟೆಕ್ಚರ್ ಹಾಗೂ ಆರ್ಕಿಟೆಕ್ಚರಲ್ ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಈ ಗೌರವ ನೀಡಲಾಗಿದೆ.
ವಾಸ್ತುಶಿಲ್ಪದ ಅಭ್ಯಾಸದ ಮೇಲೆ ಇವರ ಮಹತ್ವದ ಪ್ರಭಾವ, ಭವಿಷ್ಯದ ಪೀಳಿಗೆಯ ವಾಸ್ತುಶಿಲ್ಪಿಗಳನ್ನು ರೂಪಿಸುವಲ್ಲಿ ಸಮರ್ಪಣ ಭಾವವನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.