ನವದೆಹಲಿ: ಲೈಫ್ ಬಾಯ್ ಹ್ಯಾಂಡ್ ವಾಶ್ ಜಾಹೀರಾತಿನಲ್ಲಿ “ಬಂಟಿ ನಿಮ್ಮ ಸೋಪು ಸ್ಲೋನಾ” ಅಂತ ಡೈಲಾಗ್ ಹೊಡೆದು ಜನಪ್ರಿಯತೆ ಪಡೆದ ಪುಟ್ಟ ಹುಡುಗಿ ನಿಮಗೆ ನೆನಪಿದೆಯೇ? ಈಗ ಬಾಲಿವುಡ್ ನಲ್ಲಿ ಕ್ರೇಜಿ ಹೀರೋಯಿನ್ ಆಗಿ ಬದಲಾಗಿದ್ದಾಳೆ.
ಅವನೀತ್ ಕೌರ್. ಅವರು ಲೈಫ್ ಬಾಯ್ ಜಾಹೀರಾತು ಮತ್ತು ಇತರ ಕೆಲವು ಜಾಹೀರಾತುಗಳಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ್ದಾರೆ. ಇದಲ್ಲದೆ.. ಅವರು ಅನೇಕ ಟಿವಿ ಶೋಗಳು ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಅನೇಕ ನೃತ್ಯ ಕಾರ್ಯಕ್ರಮಗಳಲ್ಲಿ ಅದ್ಭುತವಾದ ನೃತ್ಯ ಪ್ರದರ್ಶನಗಳನ್ನು ಮಾಡಿದ್ದಾರೆ. ಮ್ಯೂಸಿಕ್ ವೀಡಿಯೊಗಳ ಜೊತೆಗೆ, ಅವರು ಹಲವಾರು ಧಾರಾವಾಹಿಗಳಲ್ಲಿ ವಿಶೇಷ ಪಾತ್ರಗಳನ್ನು ಮಾಡಿದ್ದಾರೆ. ಈಗ ಈಕೆ ಹೇಗಿದ್ದಾಳೆ ಎನ್ನುವ ಕುತೂಹೊಲ ಇದ್ರೆ ಈ ಫೋಟೋ ನೋಡಿ..
‘ಮರ್ದಾನಿ’ ಸಿನಿಮಾದಲ್ಲಿ ಮೀರಾ ಪಾತ್ರದಲ್ಲಿ ನಟಿಸುವ ಮೂಲಕ ಪ್ರೇಕ್ಷಕರಿಗೆ ತುಂಬಾ ಹತ್ತಿರವಾದರು ಅವನೀತ್ ಕೌರ್. ‘ಟಿಕು ವೆಡ್ಸ್ ಶೇರು’ ಚಿತ್ರದ ಮೂಲಕ ಆಕೆಗೆ ಒಳ್ಳೆಯ ಕ್ರೇಜ್ ಸಿಕ್ಕಿತ್ತು. ಆ ನಂತರ ‘ಲವ್ ಕಿ ಅರೇಂಜ್ ಮ್ಯಾರೇಜ್’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯದಲ್ಲೇ ‘ಲವ್ ಇನ್ ವಿಯೆಟ್ನಾಂ’ ಎಂಬ ಸಿನಿಮಾ ಬರಲಿದೆ. ಅವರು ‘ಬಬ್ಬರ್ ಕಾ ತಬ್ಬರ್’ ಮತ್ತು ‘ಬಂದಿಶ್ ಬ್ಯಾಂಡಿಟ್ಸ್’ ಎಂಬ ಎರಡು ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ ಮತ್ತು ಅವರ ಅಭಿನಯಕ್ಕಾಗಿ ಉತ್ತಮ ಮೆಚ್ಚುಗೆಯನ್ನು ಪಡೆದಳು.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವನೀತ್ ಕೌರ್ ಆಗಾಗ ಗ್ಲಾಮರಸ್ ಫೋಟೋಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾಳೆ. ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಅವರು ಗ್ಲಾಮರ್ ಶೋಗೆ ಯಾವುದೇ ಮಿತಿಯಿಲ್ಲ ಎಂದು ಪೋಸ್ ನೀಡುತ್ತಿದ್ದಾರೆ. ಸದ್ಯ ಆಕೆಯ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.