Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ದುನಿಯಾ ದುಬಾರಿ-ಅಗ್ಗ

Sunday, 25.03.2018, 3:06 AM       No Comments

ಪ್ರಸಕ್ತ ವರ್ಷದ ಹಣಕಾಸು ಬಜೆಟ್​ನ ಪ್ರಸ್ತಾವನೆಗಳು ಏ.1ರಿಂದ ಜಾರಿಯಾಗಲಿದ್ದು, ಹಲವು ವಸ್ತುಗಳ ದರಗಳಲ್ಲಿ ವ್ಯತ್ಯಾಸವಾಗಲಿದೆ. 2018-19ರ ಮುಂಗಡಪತ್ರದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹಲವು ಆವಶ್ಯಕ ವಸ್ತುಗಳ ಸುಂಕ ಇಳಿಕೆ ಮಾಡಿದ್ದರು. ಜತೆಗೆ ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೆಲ ಆಮದು ವಸ್ತುಗಳ ಮೇಲೆ ಸುಂಕ ಹೇರಿದ್ದರು. ಮುಂದಿನ ವಾರದಿಂದಲೇ ಹೊಸ ದರ ಅನ್ವಯವಾಗಲಿದೆ. ಯಾವ ಸರಕು ಹಾಗೂ ಸೇವೆಗಳು ಅಗ್ಗ, ದುಬಾರಿಯಾಗಲಿವೆ ಎಂಬ ಕುರಿತು ಮಾಹಿತಿ ಇಲ್ಲಿದೆ.

ಯಾವುದು ಏರಿಕೆ?

# ಕಾರು, ದ್ವಿಚಕ್ರ ಮೋಟಾರು ವಾಹನಗಳು, ಟ್ರಕ್ ಮತ್ತು ಬಸ್​ಗಳ ರೇಡಿಯಲ್ ಟೈರ್​ಗಳ ದರ ಏರಿಕೆಯಾಗಲಿದೆ. ಆಮದು ಮೊಬೈಲ್ ಫೋನ್, ಸ್ಮಾರ್ಟ್ ಫೋನ್ ಬಿಡಿ ಭಾಗದ ಸೀಮಾ ಸುಂಕ ಶೇ. 15ರಿಂದ 20ಕ್ಕೆ ಏರಿಕೆಯಾಗುವ ಕಾರಣ ಇವು ದುಬಾರಿಯಾಗಲಿವೆ.

# ಎಲ್​ಸಿಡಿ/ಎಲ್​ಇಡಿ/ಒಎಲ್​ಡಿ ಪರದೆ ಇರುವ ಟಿವಿ/ಕಂಪ್ಯೂಟರ್​ಗಳ ದರ ಶೇ. 15 ಹೆಚ್ಚಳ

# ತಂಪು ಕನ್ನಡಕಗಳು, ಸುಗಂಧ ದ್ರವ್ಯ, ಡಿಯೋಡ್ರೆಂಟ್, ರೇಷ್ಮೆಜವಳಿ ಮತ್ತು ಚಪ್ಪಲಿ (ಶೇ. 20 ಸುಂಕ ಏರಿಕೆ), ಕೈಗಡಿಯಾರ, ಗೋಡೆ ಗಡಿಯಾರಗಳು, ಸಿಗರೇಟು, ಲೈಟರ್​ಗಳು, ಕ್ಯಾಂಡಲ್​ಗಳು, ಹವಾನಿಯಂತ್ರಣ ವ್ಯವಸ್ಥೆ ಇರುವ ಹೋಟೆಲ್ ಸೇವೆ, ಶೇವಿಂಗ್ ಪರಿಕರ, ಅಲ್ಯೂಮಿನಿಯಂ ಅದಿರು, ಅಲಂಕಾರಿಕ ವಸ್ತುಗಳು.

# ಸ್ಮಾರ್ಟ್ ವಾಚ್ ಮತ್ತು ಧರಿಸುವಂತಹ ಇಲೆಕ್ಟ್ರಾನಿಕ್ ಸಾಧನ.

# ಬಹು ವರ್ಣದ ಹರಳುಗಳು, ವಜ್ರದ ಖರೀದಿ ಹೊರೆಯಾಗಲಿದೆ.

# ಹಣ್ಣಿನ ಪೇಯ ಮತ್ತು ಖಾದ್ಯ ತೈಲಗಳ ದರ ಶೇ. 30 ಏರಿಕೆ ಆಗಲಿದೆ. ದಂತ ಸಂಬಂಧಿತ ಪರಿಕರಗಳೂ ದುಬಾರಿಯಾಗಲಿವೆ.

# ಪೀಠೋಪಕರಣಗಳು, ಲ್ಯಾಂಪ್, ಹಾಸಿಗೆ ದರದಲ್ಲಿ ಏರಿಕೆಯಾಗಲಿದೆ.

# ಮಕ್ಕಳ ಆಟಿಕೆ, ತ್ರಿಚಕ್ರ ಸೈಕಲ್, ಸ್ಕೂಟರ್, ಪೆಡಲ್ ಇರುವ ಕಾರು, ಗೊಂಬೆ, ಫಜಲ್ ಆಟಿಕೆಗಳು, ವಿಡಿಯೋ ಗೇಮ್್ಸ.

# ಹೊರಾಂಗಣ ಕ್ರೀಡೆಗೆ ಸಂಬಂಧಿಸಿದ ವಸ್ತುಗಳು, ಈಜುಕೊಳದಲ್ಲಿ ಬಳಸುವ ಪೆಡಲಿಂಗ್ ಫೂಲ್ಸ್ ದರ ಹೆಚ್ಚಾಗಲಿದೆ.

ಯಾವುದು ಇಳಿಕೆ?

# ಆಮದು ಮಾಡಿಕೊಳ್ಳುವ ಸೌರಫಲಕಗಳಿಗೆ ಬಳಸುವ ಗಾಜು (ಟೆಂಪರ್ಡ್ ಗ್ಲಾಸ್), ಅವುಗಳ ಬಿಡಿಭಾಗಗಳ ಮೇಲಿನ ಸೀಮಾ ಸುಂಕ ತಗ್ಗಿಸಿರುವ ಕಾರಣ ಈ ಪರಿಕರಗಳು ಕಡಿಮೆ ಬೆಲೆಗೆ ದೊರೆಯಲಿವೆ. ಶ್ರವಣ ಸಾಧನಗಳಲ್ಲಿ ಬಳಕೆ ಮಾಡುವ ಸಾಮಗ್ರಿಗಳು ಅಗ್ಗವಾಗಲಿವೆ.

# ನವೀಕೃತ ನೈಸರ್ಗಿಕ ಅನಿಲದ (ಎಲ್​ಎನ್​ಜಿ) ದರ ಶೇ. 2.5 ತಗ್ಗಲಿದೆ ಮತ್ತು ಕಚ್ಚಾ ಗೇರುಬೀಜದ ಮೇಲಿನ ಸೀಮಾ ಸುಂಕ ಶೇ. 5ರಿಂದ 2.5ಕ್ಕೆ ಇಳಿಯುವ ಕಾರಣ ಇದರ ಬೆಲೆಯೂ ತಗ್ಗಲಿದೆ.

# ಪಿಒಎಸ್ ಯಂತ್ರಗಳು, ಬೆರಳಚ್ಚು ಸ್ಕಾ್ಯನರ್​ಗಳು, ಉಪು್ಪ, ಜೀವರಕ್ಷಕ ಔಷಧ, ಎಚ್​ಐವಿ/ಏಡ್ಸ್​ಗೆ ಬಳಸುವ ಔಷಧ, ಚರ್ಮದ ಉತ್ಪನ್ನ ಬೆಲೆ ಇಳಿಕೆ

# ರೈಲ್ವೆ ಇ-ಟಿಕೆಟ್ ಮೇಲಿನ ಸೇವಾ ತೆರಿಗೆ ತಗ್ಗಿಸಿರುವ ಕಾರಣ, ಐಆರ್​ಸಿಟಿಸಿ ಮೂಲಕ ಮುಂಗಡ ಕಾಯ್ದಿರಿಸುವ ಟಿಕೆಟ್ ಅಗ್ಗವಾಗಲಿದೆ.

ರಿಯಾಯ್ತಿ ಏನೇನು?

# 250 ಕೋಟಿ ರೂ ವಾರ್ಷಿಕ ವಹಿವಾಟು ಹೊಂದಿರುವ ಕಂಪನಿಗಳ ಕಾರ್ಪೆರೇಟ್ ತೆರಿಗೆಯಲ್ಲಿ ಶೇ.25 ಕಡಿತ

# ಸಹಕಾರಿ ಸಂಘಗಳಿಗೆ ಶೇ.100 ತೆರಿಗೆ ವಿನಾಯಿತಿ, ವೈದ್ಯಕೀಯ ವೆಚ್ಚ ಮತ್ತು ಸಾರಿಗೆ ಭತ್ಯೆ ತೆರಿಗೆ ವಿನಾಯಿತಿ -ಠಿ; 40 ಸಾವಿರ ಹೆಚ್ಚಳ

# ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಹಿರಿಯ ನಾಗರಿಕರ ಠೇವಣಿ ಮೇಲಿನ ಬಡ್ಡಿಗೆ ತೆರಿಗೆ ಮಿತಿ -ಠಿ; 10 ಸಾವಿರ ದಿಂದ -ಠಿ; 50 ಸಾವಿರ ರೂ.ಗೆ ಹೆಚ್ಚಳ, ಕೃಷಿ ಉತ್ಪನ್ನ ಸಂಸ್ಥೆಗಳಿಗೆ ಮೊದಲ 5 ವರ್ಷ ಶೇ.100 ತೆರಿಗೆ ವಿನಾಯಿತಿ

ದೀರ್ಘಾವಧಿ ಲಾಭಾಂಶಕ್ಕೆ ತೆರಿಗೆ

ಷೇರು ಮಾರಾಟ ಮತ್ತು ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್​ನಂತಹ ದೀರ್ಘಾವಧಿ ಬಂಡವಾಳ ಲಾಭಾಂಶಕ್ಕೆ ತೆರಿಗೆ ವಿಧಿಸಲಾಗಿದೆ. ಇಂತಹ ಮೂಲದಿಂದ ಬರುವ -ಠಿ; 1 ಲಕ್ಷ ಮತ್ತು ಅದಕ್ಕೂ ಹೆಚ್ಚಿನ ಆದಾಯಕ್ಕೆ ಶೇ. 10ರಷ್ಟು ತೆರಿಗೆ ತೆರಬೇಕು.

Leave a Reply

Your email address will not be published. Required fields are marked *

Back To Top