ವಿಶೇಷ ಚೇತನನನ್ನು ಹತ್ಯೆಗೈದಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

blank

ಬೆಂಗಳೂರು : ವಿಶೇಷ ಚೇತನ ವ್ಯಕ್ತಿಯನ್ನು ಹತ್ಯೆಗೈದಿದ್ದ ಅಪರಾಧಿಗೆ ೬೮ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ಹಾಗೂ ೫೦ ಸಾವಿರ ರೂ. ದಂಡ ವಿಧಿಸಿದೆ.
ಮಡಿವಾಳದ ಅಮಾನುಲ್ಲಾ ಶಿಕ್ಷೆಗೊಳಗಾದವರು. ವಿಶೇಷ ಚೇತನ ಆಗಿರುವ ಮೊಹಮದ್ ನಾಸಿರುದ್ದೀನ್ ಮೊಬೈಲ್ ಶಾಪ್ ಹೊಂದಿದ್ದರು. ಅಮಾನುಲ್ಲಾ, ಹಲವು ಬಾರಿ ತನ್ನ ಮೊಬೈಲ್ ನಂಬರ್‌ಗೆ ಉಚಿತವಾಗಿ ಕರೆನ್ಸಿ ಹಾಕಿಸಿಕೊಂಡಿದ್ದ. ಆದರೂ ಪದೇ ಪದೇ ಅಂಗಡಿಗೆ ಬಂದು ಉಚಿತವಾಗಿ ಕರೆನ್ಸಿ ಹಾಕುವಂತೆ ಬೇಡಿಕೆ ಇಡುತ್ತಿದ್ದ. ಆದರೆ, ಇದಕ್ಕೆ ನಾಸೀರುದ್ದೀನ್ ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಅಮಾನುಲ್ಲಾ, ೨೦೧೬ರ ಮಾ. ೫ರಂದು ರಾತ್ರಿ ೧೦ ಗಂಟೆಗೆ ಒಬ್ಬಂಟಿಯಾಗಿದ್ದ ನಾಸಿರುದ್ದೀನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ತಲೆ, ಎದೆಭಾಗ ಸೇರಿ ದೇಹದ ಹಲವು ಭಾಗಗಳಿಗೆ ೨೪ ಬಾರಿ ಇರಿದು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದ.
ಈ ಪ್ರಕರಣ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಮಡಿವಾಳ ಪೊಲೀಸರು, ಆರೋಪಿ ಅಮಾನುಲ್ಲಾನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರಾದ ರಶ್ಮಿ.ಎಂ ಅವರು ಅಮಾನುಲ್ಲಾನನ್ನು ಅಪರಾಧಿ ಎಂದು ಘೋಷಿಸಿ, ಜೀವಾವಧಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ಆರ್.ವಿ. ಭಟ್ ವಾದಿಸಿದ್ದರು.
ಮಾನಸಿಕ ಅಸ್ವಸ್ಥನಂತೆ ನಟನೆ:
ಈ ಮಧ್ಯೆ ಅಮಾನುಲ್ಲಾ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಹುಚ್ಚನಂತೆ ನಟಿಸಲು ಯತ್ನಿಸಿದ್ದ. ತಾನು ಮಾನಸಿಕ ಅಸ್ವಸ್ಥ ಎಂದು ನ್ಯಾಯಾಲಯಕ್ಕೆ ತಿಳಿಸಿ ವಿಚಾರಣಾ ಪ್ರಕ್ರಿಯೆಗಳಿಗೂ ಅಡ್ಡಿಪಡಿಸುತ್ತಿದ್ದ. ಹೀಗಾಗಿ, ಆತನ ಮಾನಸಿಕ ಸ್ಥಿತಿಯ ಕುರಿತ ವೈದ್ಯಕೀಯ ವರದಿ ಸೇರಿ ಹಲವು ಅಂಶಗಳು ಸಂಗ್ರಹಿಸಿದಾಗ, ಆತ ಮಾನಸಿಕ ಅಸ್ವಸ್ಥನಲ್ಲ. ಉದ್ದೇಶಪೂರ್ವಕವಾಗಿಯೇ ಆ ರೀತಿ ನಟಿಸುತ್ತಿದ್ದಾನೆ ಎಂದು ಕೋರ್ಟ್‌ಗೆ ಪೊಲೀಸರು ಮತ್ತು ಸರ್ಕಾರಿ ಪರ ವಕೀಲರು ಮಾಹಿತಿ ನೀಡಿದರು. ಬಳಿಕ ನ್ಯಾಯಾಲಯ ಕೂಡ ಅಮಾನುಲ್ಲಾ ಹುಚ್ಚನಲ್ಲ ಎಂದು ಅಭಿಪ್ರಾಯಕ್ಕೆ ಬಂದು ಶಿಕ್ಷೆ ನೀಡಿದೆ.

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…