26.8 C
Bangalore
Friday, December 13, 2019

ಬೆಳಗಾವಿ: ಜೀವಕ್ಕೆ ಕುತ್ತು ತರುತ್ತಿರುವ ನಿರ್ಲಕ್ಷದ ಮೋಜು

Latest News

ಶಬರಿಮಲೆ ವಿಚಾರದಲ್ಲಿ ಸದ್ಯ ಯಾವುದೇ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​

ನವದೆಹಲಿ: ಪೊಲೀಸ್​ ರಕ್ಷಣೆಯೊಂದಿಗೆ ಶಬರಿಮಲೆ ಅಯ್ಯಪ್ಪನ ಸನ್ನಿಧಿಯನ್ನು ಮಹಿಳೆಯರು ಸುರಕ್ಷಿತವಾಗಿ ಪ್ರವೇಶಿಸಲು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಇಬ್ಬರು ಮಹಿಳಾ ಕಾರ್ಯಕರ್ತರು ಸಲ್ಲಿಸಿದ್ದ...

ತುಮಕೂರು ಸ್ಮಾರ್ಟ್‌ಸಿಟಿ ಜೆಎಂಡಿ ಎತ್ತಂಗಡಿ!

ತುಮಕೂರು: ಸ್ಮಾರ್ಟ್‌ಸಿಟಿ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್ ಅವರನ್ನು ಎತ್ತಂಗಡಿ ಮಾಡಲಾಗಿದೆ. 3 ತಿಂಗಳ ಹಿಂದೇ ಸ್ಮಾರ್ಟ್‌ಸಿಟಿ ಎಂಡಿ ಜವಾಬ್ದಾರಿ ಹೊಣೆ ಹೊತ್ತಿದ್ದ ಮಹಾನಗರ...

ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಜಾತ್ರೆಗೆ ಸಿಎಂ ಯಡಿಯೂರಪ್ಪ ಚಾಲನೆ

ಚಿಕ್ಕನಾಯಕನಹಳ್ಳಿ: ಸುಕ್ಷೇತ್ರ ಕುಪ್ಪೂರು ಶ್ರೀಮರುಳಸಿದ್ದೇಶ್ವರ ಗದ್ದುಗೆ ಜಾತ್ರೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಗುರುವಾರ ಚಾಲನೆ ನೀಡಿದ್ದು, ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಜಾತ್ರೆಗೆ ಬಂದಿದ್ದರು. ಶ್ರೀಮಠದ ಆವರಣದಲ್ಲಿ ಗುರುವಾರ...

ಬಲರಾಮ್ ಕುಣಿಗಲ್ ಬಿಜೆಪಿ ಅಧ್ಯಕ್ಷ

ಕುಣಿಗಲ್: ತಾಲೂಕು ಬಿಜೆಪಿ ನೂತನ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ಬಲರಾಮ್ ಗುರುವಾರ ಅವಿರೋಧ ಆಯ್ಕೆಯಾದರು. ಪಟ್ಟಣದ ದಿಶಾ ಪಾರ್ಟಿ ಹಾಲ್‌ನಲ್ಲಿ ರಾಜ್ಯ ಬಿಜೆಪಿ...

ಭಾರತದ ಪ್ರಗತಿಗೆ ಬೇಕು ವೈಜ್ಞಾನಿಕ ಶಿಕ್ಷಣ: ಡಾ.ಡಿ.ವಿ.ಗೋಪಿನಾಥ್

ದಾವಣಗೆರೆ: ಭಾರತದ ಪ್ರಗತಿಗೆ ವೈಜ್ಞಾನಿಕ ಶಿಕ್ಷಣ ಅತ್ಯವಶ್ಯ ಎಂದು ಮುಂಬೈನ ಭಾಭಾ ಅಣು ಸಂಶೋಧನಾ ಕೇಂದ್ರದ ಜೀವ ವೈದ್ಯಕೀಯ ವಿಭಾಗದ ನಿವೃತ್ತ ನಿರ್ದೇಶಕ ಡಾ.ಡಿ.ವಿ.ಗೋಪಿನಾಥ್ ಹೇಳಿದರು. ಪಾರ್ವತಮ್ಮ...

|ರವಿ ಗೋಸಾವಿ ಬೆಳಗಾವಿ

ಜಾತ್ರೆ, ಹಬ್ಬ ಸಂಭ್ರಮ ತರುವುದರ ಜತೆಗೆ ನಮ್ಮ ಪಾರಂಪರಿಕ ಸಂಸ್ಕೃತಿಯ ಪ್ರತೀಕವೂ ಆಗಿವೆ. ಸಾಮುದಾಯಿಕ ಸೌಹಾರ್ದ ಹಾಗೂ ಸಂಭ್ರಮಕ್ಕೆ ಹಬ್ಬ ಹರಿದಿನಗಳು ಕಾರಣವಾಗುತ್ತವೆ. ಆದರೆ ಹಬ್ಬದ ಸಂಭ್ರಮದಲ್ಲಿ ಈಚೆಗೆ ಹೆಚ್ಚುತ್ತಿರುವ ಅಪಾಯಕಾರಿ ಮೋಜು ಹಾಗೂ ನಿರ್ಲಕ್ಷ ಜನರ ಜೀವಕ್ಕೂ ಸಂಚಕಾರ ತರುತ್ತಿದೆ. ಬೆಳಗಾವಿ ನಗರದಲ್ಲೂ ಪ್ರತಿ ವರ್ಷ ನಡೆಯುವ ಗಣೇಶ ವಿಸರ್ಜನೆ ಮೆರವಣಿಗೆ ಕೆಲವೊಮ್ಮೆ ಅಂಥ ಅವಘಡಗಳಿಗೆ ಸಾಕ್ಷಿಯಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸುತ್ತಿದೆ.

ಸಾವು ತಂದ ಸೂತಕ: ಸಂಭ್ರಮದ ಮೆರವಣಿಗೆಯಲ್ಲಿ ವಾದ್ಯಮೇಳ ಹಾಗೂ ಸಂಗೀತಕ್ಕೆ ತಕ್ಕಂತೆ ಸಾವಿರಾರು ಯುವಕರು ಹೆಜ್ಜೆ ಹಾಕುತ್ತಾರೆ. ಆದರೆ ಕೆಲವೊಮ್ಮೆ ಮೈ ಮರೆತು ಅಪಾಯ ಆಹ್ವಾನಿಸಿಕೊಳ್ಳುತ್ತಾರೆ. ಅಂಥ ಅವಘಡಗಳಿಂದ ಜೀವ ಕಳೆದುಕೊಂಡು ಸಂಭ್ರಮದಲ್ಲೂ ಸೂತಕ ತಂದಿಡುತ್ತಾರೆ. ಗಣೇಶ ಚತುರ್ಥಿಯ 11ನೇ ದಿನ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಶುಕ್ರವಾರ ಕಾಮತ್ ಗಲ್ಲಿಯ ವ್ಯಕ್ತಿಯೊಬ್ಬ ಹುತಾತ್ಮ ಚೌಕ್ ಬಳಿ ಡಾಲ್ಬಿ ಸೌಂಡ್ ಬಾಕ್ಸ್ ಮೇಲಿಂದ ಆಯತಪ್ಪಿ ಕೆಳಗೆ ಬಿದ್ದು ಸಾವಿಗೀಡಾಗಿದ್ದಾನೆ. ಯಾವುದೇ ಸಣ್ಣ ಗಲಾಟೆಯೂ ಇಲ್ಲದೆ ಅತ್ಯಂತ ಶಾಂತಿಯಿಂದ ಸಂಪನ್ನಗೊಂಡ ಗಣೇಶ ಹಬ್ಬಕ್ಕೆ ವ್ಯಕ್ತಿಯ ಸಾವು ಸೂತಕದ ಛಾಯೆ ಆವರಿಸುವಂತೆ ಮಾಡಿತು.

ಇದೇ ಮೊದಲಲ್ಲ: ಶುಕ್ರವಾರ ಸೌಂಡ್ ಬಾಕ್ಸ್ ಮೇಲಿಂದ ಬಿದ್ದು ವ್ಯಕ್ತಿ ಮೃತಪಟ್ಟಿದ್ದೇ ಮೊದಲ ಘಟನೆ ಅಲ್ಲ. 2013ರಲ್ಲಿ ಇಲ್ಲಿನ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ಎತ್ತರದ ಮೂರ್ತಿಯನ್ನು ಟ್ರಾಕ್ಟರ್‌ನಲ್ಲಿಟ್ಟು ಸಾಗುವಾಗ ಶಾರ್ಟ್ ಸರ್ಕ್ಯೂಟ್ ಉಂಟಾಗಿತ್ತು. ಪರಿಣಾಮ ಬೆಂಕಿ ತಗುಲಿ ಗೀತಾ ಸಪ್ಲೆ (42), ಸೂಜನ್ ಸಪ್ಲೆ (10), ಪ್ರಜ್ವಾಳ ಮಾಳಿ (16) ಹಾಗೂ ಗಂಗಪ್ಪ ಮೊಡ್ಲಿ (52) ಸ್ಥಳದಲ್ಲೇ ಮೃತಪಟ್ಟರೆ ಐವರು ಗಂಭೀರವಾಗಿ ಗಾಯಗೊಂಡು ಇಂದಿಗೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟಾದರೂ ಯುವಜನತೆ ಜಾಗರೂಕತೆಯಿಂದ ಸಂಭ್ರಮಾಚರಣೆ ಮಾಡದೆ ಎತ್ತರದಲ್ಲಿರುವ ಡಾಲ್ಬಿ ಸೌಂಡ್ ಬಾಕ್ಸ್ ಹತ್ತಿ ಕುಣಿಯುವುದು, ಸೆಲ್ಪಿ ತೆಗೆಯುವುದನ್ನು ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. 2017ರಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಮೆರವಣಿಗೆಯ ಸಂದರ್ಭದಲ್ಲಿ ಡಾಲ್ಬಿ ಸೌಂಡ್ ಬಾಕ್ಸ್ ಮೇಲಿಂದ ಆಯತಪ್ಪಿ ಬಿದ್ದು ತಾಂಗಡಿ ಗಲ್ಲಿಯ ವೈಭವ ಬೋಸ್ಲೆ ಮೃತಪಟ್ಟಿದ್ದರು.

ಪೊಲೀಸರ ಕಳಕಳಿಯ ಮನವಿಗೆ ಬೆಲೆ ಇಲ್ಲವೇ?

ಬೆಳಗಾವಿ ನಗರದಲ್ಲಿ ಜರುಗುವ ಗಣೇಶೋತ್ಸವ, ಕರ್ನಾಟಕ ರಾಜ್ಯೋತ್ಸವ ಹಾಗೂ ಛತ್ರಪತಿ ಶಿವಾಜಿ ಜಯಂತಿ ಸಂಭ್ರಮ ಹಾಗೂ ವಿಶೇಷತೆಗೆ ಹೆಸರುವಾಸಿಯಾಗಿದೆ. ಅಂಥ ವಿಶೇಷ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ, ಆಯೋಜಕರು ಹಾಗೂ ಗಣೇಶ ಮಂಡಳಿಗಳು ಎಷ್ಟೇ ಜಾಗೃತಿ ವಹಿಸಿದರೂ ಒಂದಿಲ್ಲೊಂದು ಅವಾಂತರಗಳು ಸಂಭವಿಸುತ್ತಲೇ ಇವೆ. ಡಾಲ್ಬಿ ಬಾಕ್ಸ್ ಮೇಲೆ ಏರದಂತೆ ಪೊಲೀಸರು ತಾಕೀತು ಮಾಡಿಯೇ ಮೆರವಣಿಗೆಗೆ ಅನುಮತಿ ನೀಡುತ್ತಿದ್ದಾರೆ. ಈ ವರ್ಷವೂ ಹಾಗೆಯೇ ಸೂಚನೆ ನೀಡಲಾಗಿತ್ತಾದರೂ ಯುವಕರು ಹೀಗೆ ಅಜಾಗರೂಕತೆಯಿಂದ ನಡೆದುಕೊಂಡಿರುವುದು ಸ್ವತಃ ಗಣೇಶ ಮಂಡಳಿಗಳೇ ಅಸಮಾಧಾನ ವ್ಯಕ್ತಪಡಿಸಿವೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಲ್ಲ ಮಂಡಳಿಯವರಿಗೂ ಎಚ್ಚರ ವಹಿಸುವಂತೆ ಮನವಿ ಮಾಡಲಾಗಿದೆ.

ಮೆರವಣಿಗೆ ಹಾಗೂ ಪ್ರತಿಷ್ಠಾಪನೆಗೆ ಅನುಮತಿ ನೀಡುವಾಗಲೇ ಸೂಕ್ತ ಎಚ್ಚರಿಕೆ ನೀಡಲಾಗಿತ್ತು. ಆದರೂ ಕೆಲ ಯುವಕರು ಅಜಾಗರೂಕತೆಯಿಂದ ತೊಂದರೆಗೀಡಾಗಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು. ಮತ್ತೆ ಹೀಗಾಗದಂತೆ ಎಚ್ಚರ ವಹಿಸಲು ಆಯೋಜಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು.
|ಬಿ.ಎಸ್.ಲೋಕೇಶಕುಮಾರ್ ಮಹಾನಗರ ಪೊಲೀಸ್ ಆಯುಕ್ತ

Stay connected

278,748FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....