ಹುತಾತ್ಮ ಯೋಧ ಗುರು ಕುಟುಂಬಕ್ಕೆ ವಿಳಂಬ ಮಾಡದೆ ಜೀವ ವಿಮಾ ಹಣ ನೀಡಿದ ಎಲ್​ಐಸಿ

ಮಂಡ್ಯ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ಸಂಭವಿಸಿದ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮಂಡ್ಯದ ಗುಡಿಗೆರೆಯ ಗುರು ಅವರ ಕುಟುಂಬಕ್ಕೆ ವಿಮಾ ಹಣವನ್ನು ಎಲ್​ಐಸಿ ಅತ್ಯಂತ ಕ್ಷಿಪ್ರಗತಿಯಲ್ಲಿ ತಲುಪಿಸಿದೆ.

ಗುರು ಅವರಿಗೆ ಸಂಬಂಧಿಸಿದ ಯಾವ ದಾಖಲೆಗಳನ್ನೂ ಪರಿಶೀಲನೆ ನಡೆಸದೆ, ವಿಳಂಬ ಮಾಡದೇ ಅವರ ಕುಟುಂಬಕ್ಕೆ ಸೇರಬೇಕಾದ ಹಣವನ್ನು ಎಲ್​ಐಸಿ ಪಾವತಿಸಿದೆ.

ಹುತಾತ್ಮ ಯೋಧ ಗುರು ನಿವಾಸಕ್ಕೆ ತೆರಳಿದ ಮಂಡ್ಯದ ಎಲ್ಐಸಿ ವ್ಯವಸ್ಥಾಪಕ ನಾಗರಾಜ್ ರಾವ್, ಸಚಿವ ಡಿ.ಸಿ ತಮ್ಮಣ್ಣ ಅವರ ಸಮ್ಮುಖದಲ್ಲಿ ವಿಮಾ ಹಣದ ಚೆಕ್​ ಅನ್ನು ಹಸ್ತಾಂತರ‌ ಮಾಡಿದರು.

ಗುರು ಅವರ ವಿಮೆ ಮೊತ್ತ 3,82,000 ರೂಪಾಯಿಗಳ ಚೆಕ್ ಅನ್ನು ಗುರು ತಂದೆ ಹೊನ್ನಯ್ಯ ಅವರಿಗೆ ನೀಡಿದರು.