ಎಲ್‌ಐಸಿ ಮ್ಯೂಚುವಲ್ ಫಂಡ್ ಎರಡನೇ ಶಾಖೆ ಆರಂಭ

blank

ಮೈಸೂರು: ಎಲ್‌ಐಸಿ ಮ್ಯೂಚುವಲ್ ಫಂಡ್ (ಎಲ್‌ಐಸಿ ಎಂಎಫ್) ನಗರದಲ್ಲಿ ತನ್ನ ಎರಡನೇ ಶಾಖೆಯನ್ನು ಆರಂಭಿಸಿತು.
ಸರಸ್ವತಿಪುರಂನ 12ನೇ ಮುಖ್ಯರಸ್ತೆ, 5ನೇ ಕ್ರಾಸ್‌ನ ಜವರೇಗೌಡ ಉದ್ಯಾನದ ಬಳಿ ಆರಂಭಿಸಲಾದ ಶಾಖೆಗೆ ಎಲ್‌ಐಸಿ ಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್(ಆರ್.ಕೆ.) ಝಾ ಅವರು ಬುಧವಾರ ಚಾಲನೆ ನೀಡಿದರು.
ದೇಶದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಮ್ಯೂಚುವಲ್ ಫಂಡ್ ಉದ್ಯಮ ಅಭಿವೃದ್ಧಿ ಕಾಣುವ ನಿರೀಕ್ಷೆ ಇದೆ. ಹಾಗಾಗಿ ಮೈಸೂರಿನಲ್ಲಿ ನಾವು ನಮ್ಮ ವಹಿವಾಟನ್ನು ವಿಸ್ತರಿಸುತ್ತಿದ್ದೇವೆ. ಮೈಸೂರು ಜ್ಞಾನಾಧಾರಿತ ಉದ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳ ಕೇಂದ್ರವಾಗಿರುವುದರಿಂದ ಇದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದು ಹೇಳಿದರು.
ಸಾಂಸ್ಕೃತಿಕವಾಗಿಯೂ ನಗರ ಅಭಿವೃದ್ಧಿ ಹೊಂದಿದೆ. ಹೆಚ್ಚು ಆದಾಯದ ಜನರು ಮತ್ತು ವೃತ್ತಿಪರರು ವಾಸಸ್ಥಾನವಾಗಿ ಮೈಸೂರನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಎರಡನೇ ಶಾಖೆಯ ಆರಂಭದ ಮೂಲಕ ಇಲ್ಲಿಯ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ಉದ್ದೇಶ ನಮ್ಮದು ಎಂದರು.
ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ (ಎಎಂಎಫ್‌ಐ) ಸಂಸ್ಥೆಯ ಪ್ರಕಾರ ಮೈಸೂರು ಪ್ರಾಂತ್ಯದಲ್ಲಿ ಎಲ್‌ಐಸಿ ಕಂಪನಿಯ ನಿರ್ವಹಣೆಯಡಿ ಬರುವ ಸಂಪತ್ತಿನ ಮೌಲ್ಯ(ಎಯುಎಂ) 2024ರ ಡಿ.31ಕ್ಕೆ ಅನ್ವಯವಾಗುವಂತೆ 8 ಸಾವಿರ ಕೋಟಿ ರೂ. ಇದ್ದು, 2025ರ ಫೆಬ್ರವರಿ 28ಕ್ಕೆ ಅನ್ವಯವಾಗುವಂತೆ 36,209 ಕೋಟಿ ರೂ. ಆಗಿದೆ ಎಂದು ವಿವರಿಸಿದರು.
ಮ್ಯೂಚುವಲ್ ಫಂಡ್ ವಹಿವಾಟು ಅಭಿವೃದ್ಧಿಗೆ ಕರ್ನಾಟಕದಲ್ಲಿ ಅಪಾರವಾದ ಅವಕಾಶಗಳಾಗಿವೆ. ರಾಜ್ಯವಾರು ಮಾಸಿಕ ಎಯುಎಂ (ಎಎಯುಎಂ)ನಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. 2025ರ ಜನವರಿಯಲ್ಲಿ ರಾಜ್ಯದ ಎಎಯುಎಂ 4.72 ಲಕ್ಷ ಕೋಟಿ ರೂ. ಆಗಿದೆ. ದಕ್ಷಿಣದ ಐದು ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಎಯುಎಂ ಹೊಂದಿದೆ ಎಂದು ತಿಳಿಸಿದರು.
ಕಂಪನಿಯ ದಕ್ಷಿಣ ವಲಯದ ಮುಖ್ಯಸ್ಥ ವಾಸುದೇವನ್ ದೇಶಿಕಾಚಾರಿ, ಮಾಜಿ ಸಿಎಂಒ ಶ್ರೀಧರನ್, ಏರಿಯಾ ಮ್ಯಾನೇಜರ್ ರಾಜೇಶ್‌ಬಾಬು ಇತರರು ಇದ್ದರು.

Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…