ಮಂಡ್ಯ: ವಿಮೋಚನ ಮಹಿಳಾ ಹಕ್ಕುಗಳ ವೇದಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮೇ 14ರಂದು ‘ಒಡಲ ತುಡಿತಕ್ಕೆ ಕೇಡು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವೇದಿಕೆ ಸದಸ್ಯ ರಮಾನಂದ್ ಹೇಳಿದರು.
ನಗರದ ಡಿಎಚ್‌ಒ ಕಚೇರಿಯ ಜೆ.ಎಲ್.ಜವರೇಗೌಡ ಸಭಾಂಗಣದಲ್ಲಿ ಆಯೋಜಿಸಿರುವ ಸಮಾರಂಭವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸುವರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅಧ್ಯಕ್ಷತೆ ವಹಿಸಲಿದ್ದು, ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಪುಸ್ತಕ ಬಿಡುಗಡೆ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಕ್ಕಮಹಾದೇವಿ ಮಹಿಳಾ ವಿವಿಯ ವಿಶೇಷ ಅಧಿಕಾರಿ ಎಚ್.ಎಂ.ಹೇಮಲತಾ ಪುಸ್ತಕದ ಕುರಿತು ಮಾತನಾಡಲಿದ್ದು, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ವಿಮೋಚನ ಮಹಿಳಾ ಸಂಘಟನೆ ಕಾರ್ಯದರ್ಶಿ ಸಲಿನ್ ಸುಗುಣ, ಪುಸ್ತಕದ ಲೇಖಕ ಡಾ.ಮಂಜುನಾಥ ಅದ್ದೆ ಭಾಗವಹಿಸಲಿದ್ದಾರೆ ಎಂದರು.
ಸಲಿನ್ ಸುಗುಣ, ವಿನೋದಾ, ಪೂರ್ಣಿಮಾ, ಶಿಲ್ಪಾ, ಜನಾರ್ಧನ್, ಇಂಪನಾ ಇದ್ದರು.
