ಸದ್ಗುರು ಶ್ರೀ ಮಧುಸೂದನ ಸಾಯಿ ಅಭಿಮತ – ಮುದ್ದೇನಹಳ್ಳಿಯಲ್ಲಿ ದುರ್ಗಾಪೂಜೆ, ಮಹಾರುದ್ರ ಯಾಗ
ಚಿಕ್ಕಬಳ್ಳಾಪುರ: ಕಾಯಾ ವಾಚಾ ಮನಸಾ ನುಡಿದಂತೆ ನಡೆದು, ದಿವ್ಯತ್ವಕ್ಕೆ ಏರುವ ಸುವರ್ಣ ಅವಕಾಶದ ಬಗ್ಗೆ ಸನಾತನ ಸಂಸ್ಕೃತಿಯು ಮಾರ್ಗದರ್ಶನ ನೀಡುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.
ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಯಾಗ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಸರಾ ಮಹೋತ್ಸವ, ನವರಾತ್ರಿ ಹೋಮ, ದುರ್ಗಾ ಪೂಜೆ ಮತ್ತು ಮಹಾರುದ್ರ ಯಾಗದ ಸಾನಿಧ್ಯ ವಹಿಸಿ ವಾತನಾಡಿದರು.
ಜಗತ್ತಿನ ಬೇರೆ ಯಾವುದೇ ಸಂಸ್ಕೃತಿಯಲ್ಲಿ ಸರಳ ಸುಲಭ ಚಿಂತನೆಗಳಿದ್ದರೂ ಗೌಣವಾಗಿದೆ. ಆದರೆ, ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಬ್ಬರಿಗೂ ಜ್ಞಾನ ಲಭಿಸಿ, ಸದಾಚಾರ ಸಂಪನ್ನನಾಗಿ ಸಂತೃಪ್ತ ಜೀವನ ನಡೆಸುವ ಜ್ಞಾನ ಸಿಗುತ್ತದೆ. ಇದೇ ಅಂಶಗಳನ್ನು ದೇಶದ ಸಂತರು ಶರಣರು ದಿವ್ಯ ಬೋಧನೆಯಲ್ಲಿ ಸಾರಿದ್ದಾರೆ ಎಂದು ತಿಳಿಸಿದರು.
ಜನ್ಮತಃ ಎಲ್ಲರೂ ಜಂತುಗಳೇ. ಆದರೆ, ಸದಾಚಾರಗಳ ಅರಿವಿನಿಂದ ವಾನವರಾಗುತ್ತಾರೆ. ಎಂದಿಗೂ ತೋರಿಕೆಯ ಅನುಷ್ಠಾನದಿಂದ ಮುಕ್ತಿ ದೊರೆಯದು ಎಂದರು.
ಸತ್ಯಸಾಯಿ ವಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ, ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ, ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತಿತರರು ಇದ್ದರು.
ಸಹಿಷ್ಣುತೆಯ ಪಾಠ ಕಲಿಯಬೇಕು
ವರ್ತವಾನದಲ್ಲೂ ತಾರತಮ್ಯ ತೋರುವ ದೇಗುಲಗಳಲ್ಲಿ ದರ್ಶನ ಪಡೆಯುವ ಧಾರ್ಮಿಕ ಸ್ವಾತಂತ್ರ್ಯಗಳಿಗೆ ನಿರ್ಬಂಧವಿದೆ. ಆದರೆ, ಈ ಪಕ್ಷಪಾತದ ಧೋರಣೆ ಸನಾತನ ಸಂಸ್ಕೃತಿಯ ಭಾಗವಲ್ಲ. ಇಂತಹ ಅನಿಷ್ಟ ಪರಂಪರೆಯು ಸವಾಜದಿಂದ ಪ್ರತ್ಯೇಕವಾದರೆ ತಾರತಮ್ಯದ ಪ್ರಮೇಯವೇ ಉದ್ಭವಿಸುವುದಿಲ್ಲ. ಇದಕ್ಕೆ ಸಹಿಷ್ಣುತೆಯ ಪಾಠವನ್ನು ಎಲ್ಲರೂ ಕಲಿಯಬೇಕು. ಶ್ರದ್ಧಾ ಕೇಂದ್ರಗಳಲ್ಲಿ ಜಾತಿ ನೀತಿಗಳೆಂಬ ತಡೆಗೋಡೆ ಯಾರಿಗೂ ಅಡ್ಡಿಯಾಗಬಾರದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಕುಮಾರಿ ಪೂಜೆ
ನವರಾತ್ರಿಯ ಎಂಟನೇ ದಿನವಾದ ಗುರುವಾರ ದುರ್ಗಾವಾತೆಯ ಅಷ್ಟಮಿ ಅವತಾರದ ಅಂಗವಾಗಿ ಕುವಾರಿ ಪೂಜೆ ನಡೆಯಿತು. ದುರ್ಗಾರ್ಚಕರು ಮತ್ತು ಮುತ್ತೈದೆಯರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಪ್ರಸಿದ್ಧ ಹಿಂದುಸ್ತಾನಿ ಗಾಯಕ ಪಂಡಿತ್ ವೆಂಕಟೇಶ್ ಕುವಾರ್ ನೇತೃತ್ವದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ಮೆಚ್ಚುಗೆ ಪಡೆಯಿತು.