22.5 C
Bengaluru
Sunday, January 19, 2020

ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಿಎಂಗೆ ಪತ್ರ

Latest News

ವೇಮನ ಒಬ್ಬ ಸಮಾಜ ಸುಧಾರಕ

ವಿಜಯಪುರ : ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಮಹಾಯೋಗಿ ವೇಮನ ಅವರು ಒಬ್ಬ ಸಮಾಜ ಸುಧಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ನಗರದ ಕಂದಗಲ್...

ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ...

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ...

ಪೋಲಿಯೋ ಲಸಿಕಾ ಕಾರ್ಯಕ್ರಮ

ರಾಣೆಬೆನ್ನೂರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು...

ಇಬ್ಬರು ಮನೆಗಳ್ಳರು ಖಾಕಿ ಬಲೆಗೆ

ಗದಗ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೆಟ್ಲಮೆಂಟ್ ನಿವಾಸಿಗಳಾದ ಸುರೇಶ...

– ಭರತ್ ಶೆಟ್ಟಿಗಾರ್ ಮಂಗಳೂರು
ತಿಂಗಳ ಹಿಂದೆ ಕೊಡಗಿನಲ್ಲಿ ಘಟಿಸಿದ ದುರಂತ ಹಿನ್ನೆಲೆಯಲ್ಲಿ ಸುಸ್ಥಿರ ಮತ್ತು ಸುಭದ್ರ ಕರ್ನಾಟಕ ನಿರ್ಮಾಣ ಹಾಗೂ ಪಶ್ಚಿಮ ಘಟ್ಟಗಳ ಸ್ಥಾನಿಕ, ಜಾಗತಿಕ ಮಹತ್ವ ಗಮನದಲ್ಲಿಟ್ಟು ಪರಿಸರ ಹೋರಾಟಗಾರರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎಂಟು ಪುಟಗಳ ಪತ್ರ ಬರೆದಿದ್ದಾರೆ.
ನಾಡಿನ ಚಿಂತಕರು, ಸಾಹಿತಿಗಳು, ಪರಿಸರವಾದಿಗಳು, ವಿದ್ಯಾರ್ಥಿಗಳು, ರೈತರು, ವಿಜ್ಞಾನಿಗಳು, ಜೀವವಿಜ್ಞಾನಿಗಳು, ನಿವೃತ್ತ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಸಮಾಜದ ವಿವಿಧ ವರ್ಗದ ಸುಮಾರು 140 ಮಂದಿಯಿಂದ ಅಭಿಪ್ರಾಯ ಸಂಗ್ರಹಿಸಿ ಬರೆದಿರುವ ಪತ್ರವನ್ನು ಅ.17ರಂದು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಇ-ಮೇಲ್ ಮಾಡಲಾಗಿದೆ. ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳ್ಳಿ ಪತ್ರ ಸಿದ್ಧಪಡಿಸಿದ್ದು, ವಿದ್ಯುತ್ ನೀತಿ ವಿಶ್ಲೇಷಕ ಶಂಕರ್ ಶರ್ಮ, ಪಶ್ಚಿಮ ಘಟ್ಟ ರಕ್ಷಣಾ ವೇದಿಕೆಯ ಸಹದೇವ ಶಿವಪುರ, ಸಾಹಿತಿ ನಾ.ಡಿಸೋಜ, ಬೇಳೂರು ಸುದರ್ಶನ, ಶಾಸಕ ಸುರೇಶ್ ಕುಮಾರ್ ಸೇರಿದಂತೆ ಹಲವರ ಸಲಹೆ ಸೂಚನೆಗಳು ಪತ್ರದಲ್ಲಿವೆ.

ಪತ್ರದ ಪ್ರಮುಖಾಂಶ: ಇಂಟರ್ ಗವರ್ನಮೆಂಟಲ್ ಪ್ಯಾನೆಲ್ ಫಾರ್ ಕ್ಲೈಮೇಟ್ ಚೇಂಜ್(ಐಪಿಸಿಸಿ ಜಾಗತಿಕ ಸಂಸ್ಥೆ) ಅ.6ರಂದು ಬಿಡುಗಡೆ ಮಾಡಿರುವ ವರದಿ ಪ್ರಕಾರ 2030ರಿಂದ 2050ರ ವೇಳೆಗೆ ಜಾಗತಿಕ ತಾಪಮಾನ 1.5 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಏರಿಕೆಯಾಗುವ ಸಂಭವವಿದೆ. ಇದರಿಂದ ಹಲವು ರೀತಿಯ ನೈಸರ್ಗಿಕ ವಿಕೋಪ ಸಂಭವಿಸಬಹುದು. ಜಗತ್ತೇ ಇಂತಹ ವಿಷಮ ಪರಿಸ್ಥಿತಿಯಲ್ಲಿರುವಾಗ ನಮ್ಮ ಪಶ್ಚಿಮ ಘಟ್ಟಗಳಲ್ಲಿ 23 ಮೆಗಾ ಯೋಜನೆ ಜಾರಿಗೊಳಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಿರುವುದು ನಿಜಕ್ಕೂ ದುರಂತ. ವಿವಿಧ ಯೋಜನೆಗಳಿಗಾಗಿ 21 ಲಕ್ಷ ಬೃಹತ್ ಮರಗಳು ಬಲಿಯಾಗಲಿದ್ದು, ಇಡೀ ಮನುಕುಲದ ವಿರೋಧಿ ಕೃತ್ಯವಾಗಿ ಈ ಯೋಜನೆಗಳು ತೋರುತ್ತಿವೆ.
ಕಡಿದ ಮರಗಳಿಗೆ ಬದಲಾಗಿ ಕೋಟಿ ಸಸಿಗಳನ್ನು ನೆಡಬಹುದು ಎಂಬ ಸಲಹೆ ಅಧಿಕಾರಿಗಳದ್ದು. ಆದರೆ ಒಂದು ಬಲಿತ ಮರಕ್ಕೆ ಲಕ್ಷ ಸಸಿಗಳು ಸಾಟಿಯೇ ಅಲ್ಲ. ರಾಷ್ಟ್ರೀಯ ಅರಣ್ಯ ನೀತಿ(1985) ಪ್ರಕಾರ, ಒಂದು ದೇಶ ಸುಸ್ಥಿರವಾಗಿರಲು ಅಲ್ಲಿನ ಗುಡ್ಡಗಾಡುಗಳಲ್ಲಿ ಶೇ.66 ಹಾಗೂ ಉಳಿದ ಪ್ರದೇಶಗಳಲ್ಲಿ ಶೇ.33 ನೈಸರ್ಗಿಕ ಅರಣ್ಯ ಪ್ರದೇಶವಿರಬೇಕು. ನಮ್ಮಲ್ಲಿ ಈ ಪ್ರಮಾಣ ಶೇ.20ಕ್ಕಿಂತ ಕಡಿಮೆ, ಈ 20ರಲ್ಲೂ ಏಕಜಾತಿಯ ನೆಡುತೋಪುಗಳ ಪ್ರಮಾಣ ಅರ್ಧದಷ್ಟಿದೆ. ಪಶ್ಚಿಮ ಘಟ್ಟದಲ್ಲಿರುವ ಒಂದೊಂದು ಮರವೂ ಈ ಹೊತ್ತಿನಲ್ಲಿ ಬಹಳ ಮುಖ್ಯ. ಆದ್ದರಿಂದ ಆ ಭಾಗದಲ್ಲಿ ಯಾವ ಯೋಜನೆಗಳನ್ನೂ ಜಾರಿಗೊಳಿಸಬಾರದು ಹಾಗೂ ಜಾರಿಗೊಳಿಸಲು ಉದ್ದೇಶಿರುವ ಯೋಜನೆಗಳನ್ನು ತಕ್ಷಣ ರದ್ದು ಮಾಡುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಜಾಗತಿಕ ತಾಪಮಾನ ನಿಯಂತ್ರಿಸುವ ಶಕ್ತಿ ಹೊಂದಿರುವ ಪಶ್ಚಿಮ ಘಟ್ಟಗಳ ಅರಣ್ಯ ಉಳಿಸುವ ಜತೆಗೆ ಅರಣ್ಯ ಪ್ರದೇಶ ಹೆಚ್ಚು ಮಾಡುವ ಕಾರ್ಯಯೋಜನೆ ರೂಪಿಸಿ, ಇಡೀ ಜಗತ್ತಿಗೇ ಮಾದರಿಯಾಗುವ ಅಪೂರ್ವ ಅವಕಾಶವಿದೆ ಎಂದು ಪತ್ರ ಮೂಲಕ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಲಾಗಿದೆ.

ಜೈವಿಕ ಹಾನಿ ಅಪಾರ:  ಕೊಡಗಿನಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ದಟ್ಟಾರಣ್ಯ ಪ್ರದೇಶದಲ್ಲಾದ ಜೈವಿಕ ಹಾನಿ ಅಳೆಯಲು ಸಾಧ್ಯವಿಲ್ಲ. 1,060 ಹೆಕ್ಟೇರ್‌ಗಳಷ್ಟು ಪ್ರದೇಶ ಭೂಕುಸಿತಕ್ಕೆ ಒಳಗಾಗಿದೆ ಎಂದು ಉಪಗ್ರಹ ವರದಿಗಳು ತಿಳಿಸಿವೆ. ಈ ಮಟ್ಟದ ದುರಂತ ಸಂಭವಿಸಲು ಮಾನವ ನಿರ್ಮಿತ ಚಟುವಟಿಕೆಗಳು ಮುಖ್ಯ ಕಾರಣ ಎಂಬುದು ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರ ಹಾಗೂ ಹಲವು ಹತ್ತು ಸಂಸ್ಥೆಗಳ ನಿಖರ ಅಭಿಪ್ರಾಯ.
ಕಾಡು ಕಡಿಮೆ ಬರಗಾಲಕ್ಕೆ ಕಾರಣ:  ರಾಜ್ಯದ ಶೇ.77ರಷ್ಟು ಪ್ರದೇಶ ಒಣ ಅಥವಾ ಅರೆ ಒಣ ಪ್ರದೇಶವಾಗಿದ್ದು, ಶೇ.54ರಷ್ಟು ಪ್ರದೇಶ ಸದಾ ಬರಗಾಲಕ್ಕೆ ತುತ್ತಾಗುತ್ತಿದೆ. ಬರಪೀಡಿತ ರಾಜ್ಯಗಳಲ್ಲಿ ದೇಶದ ಎರಡನೇ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿದೆ. ರಾಜ್ಯದ ಅರಣ್ಯ ಪ್ರದೇಶ ಶೇ.20ಕ್ಕಿಂತ ಕಡಿಮೆ ಇರುವುದು ಬರಗಾಲಕ್ಕೆ ಮೂಲ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪಶ್ಚಿಮಘಟ್ಟ ಜಗತ್ತಿನ ಆಸ್ತಿ:  ಕೊಡಗು ಮಾತ್ರವಲ್ಲದೆ, ದ.ಕ, ಉಡುಪಿ, ಚಿಕ್ಕಮಗಳೂರು, ಉ.ಕ., ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ಪಶ್ಚಿಮ ಘಟ್ಟಗಳು ಇಡೀ ಜಗತ್ತಿನ ಅತ್ಯಂತ ಪ್ರಮುಖ ಜೈವಿಕ ತಾಣವಾಗಿದೆ. ಎಲ್ಲ ನದಿಗಳ ಮೂಲವೂ ಇದೇ ಪಶ್ಚಿಮ ಘಟ್ಟಗಳು. ಗುಡ್ಡಗಳಲ್ಲಿ ಇಂಗುವ ನೀರು ವರ್ಷಪೂರ್ತಿ ಬಯಲು ನಾಡಿಗೆ ನೀರುಣಿಸುವ ಮೂಲಗಳು. ಅಲ್ಲದೆ ಇಡೀ ದೇಶದ ಮಳೆ ಸ್ವರೂಪ ನಿಗದಿ ಮಾಡುವ ಮಹತ್ವದ ಕೆಲಸವನ್ನೂ ಈ ಮಳೆಕಾಡುಗಳು ಮಾಡುತ್ತವೆ. ಜಗತ್ತಿನ ಆಸ್ತಿಯೂ ಆದ ಈ ಅತಿಸೂಕ್ಷ್ಮ ಘಟ್ಟಗಳನ್ನು ಉಳಿಸಿಕೊಳ್ಳುವುದರ ಜತೆಗೆ ಸ್ಥಳೀಯರ ಆಶೋತ್ತರಗಳನ್ನು ವಾಸ್ತವದ ನೆಲೆಯಲ್ಲಿ ಅರ್ಥ ಮಾಡಿಕೊಂಡು ಪೂರೈಸಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪಶ್ಚಿಮ ಘಟ್ಟ ಯಾವ ರೀತಿ ಇರಬೇಕು ಎಂಬುದನ್ನು ಪತ್ರದಲ್ಲಿ ವಿವರಿಸಲಾಗಿದೆ. ಗಿಡ ನೆಡುವುದನ್ನು ಬಿಟ್ಟು ಇರುವ ಮರಗಳನ್ನು ಉಳಿಸಿಕೊಳ್ಳಬೇಕು. ಪಶ್ಚಿಮ ಘಟ್ಟದ ಕುದುರೆಮುಖ, ಆಗುಂಬೆಯಂತಹ ಕಾಡುಗಳು ಒಮ್ಮೆ ಅಳಿದು ಹೋದರೆ ಮತ್ತೆ ಮರುಸೃಷ್ಟಿ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೆ ಇ-ಮೇಲ್ ಮೂಲಕ ಪತ್ರ ಕಳುಹಿಸಲಾಗಿದ್ದು, ವೈಯಕ್ತಿಕವಾಗಿ ಭೇಟಿಯಾಗಿ ಪತ್ರ ನೀಡುವ ಅವಕಾಶ ಇನ್ನೂ ಸಿಕ್ಕಿಲ್ಲ.
– ಸಹದೇವ್ ಶಿವಪುರ, ಪಶ್ಚಿಮ ಘಟ್ಟ ರಕ್ಷಣಾ ವೇದಿಕೆ ಕಾರ್ಯಕರ್ತ

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...