ವಿಜಯವಾಣಿ ಸುದ್ದಿಜಾಲ ಧಾರವಾಡ
ಧರ್ಮ ಹಾಗೂ ಅಧ್ಯಾತ್ಮಕ್ಕೆ ವ್ಯತ್ಯಾಸವಿದೆ. ಅದನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳುವುದು ಅಗತ್ಯ ಎಂದು ಬೀದರ ಮಾಣಿಕಪ್ರಭು ಸಂಸ್ಥಾನದ ಶ್ರೀ ಜ್ಞಾನರಾಜ ಮಹಾರಾಜರು ಹೇಳಿದರು.
ನಗರದ ಗಾಂಧಿಚೌಕ್ನ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಾಠಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಜನರು ತಮಗೆ ತಿಳಿದಂತೆ ಧರ್ಮ, ಅಧ್ಯಾತ್ಮ, ಆತ್ಮ ಮೊದಲಾದ ಶಬ್ದ ಬಳಸುತ್ತಾರೆ. ಶಬ್ದಗಳ ಸರಿಯಾದ ಅರ್ಥ ತಿಳಿದು ಬಳಸಿದರೆ ಹೇಳಿದ್ದು ಪರಿಣಾಮಕಾರಿಯಾಗುತ್ತದೆ. ಧರ್ಮ ಸಾಮೂಹಿಕವಾಗಿದ್ದರೆ, ಅಧ್ಯಾತ್ಮ ವೈಯಕ್ತಿಕವಾಗಿರುತ್ತದೆ. ಧರ್ಮವನ್ನು ಕಂಡುಹಿಡಿಯಲು ಸಾಧ್ಯವಾದರೆ, ಅಧ್ಯಾತ್ಮ ಕಂಡುಹಿಡಿಯಲಾಗುವುದಿಲ್ಲ. ವ್ಯಕ್ತಿ ಯಾವ ಪ್ರಮಾಣದಲ್ಲಿ ಅಧ್ಯಾತ್ಮ ಸಾಧನೆ ಮಾಡಿದ್ದಾನೆ ಎಂದು ತಿಳಿಯಲಾಗುವುದಿಲ್ಲ. ನಮ್ಮೊಳಗಿನ ನಾನು ಎಂಬ ಭಾವವೇ ಅಧ್ಯಾತ್ಮ. ಆತ್ಮದ ಜ್ಞಾನವೇ ಆಧ್ಯಾತ್ಮವಾಗಿದೆ ಎಂದರು.
ಪಂ. ವೇಣಿಮಾಧವಶಾಸ್ತ್ರಿ ರಚಿಸಿದ 2 ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಡಾ. ಮಧುಸೂಧನ ಶಾಸ್ತ್ರಿ ಕೃತಿಗಳನ್ನು ಪರಿಚಯಿಸಿದರು. ಪಂ. ಚಂದ್ರಶೇಖರ ಶಾಸ್ತ್ರಿ ಪಾಠಶಾಲೆ ವರದಿ ವಾಚಿಸಿದರು. ಪಾಠಶಾಲೆ ಅಧ್ಯಕ್ಷ ರಾಜೀವ ಪಾಟೀಲ ಕುಲಕರ್ಣಿ ಸ್ವಾಗತಿಸಿದರು.
ಅರ್ಥ ಅರಿತು ಶಬ್ದಗಳ ಬಳಕೆ ಮಾಡಲಿ
You Might Also Like
ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …
ಬೆಂಗಳೂರು: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?
ಬೆಂಗಳೂರು: ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…