25.7 C
Bangalore
Monday, December 16, 2019

ಆಟ ಆಡೋಣ ಬನ್ರೋ…

Latest News

ಜಾಮಿಯಾ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಇಂಡಿಯಾ ಗೇಟ್​ನಲ್ಲಿ ಪ್ರಿಯಾಂಕಾ ಗಾಂಧಿ ಸಾಂಕೇತಿಕ ಪ್ರತಿಭಟನೆ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಚಾರ್ಜ್​ ವಿರೋಧಿಸಿ ಕಾಂಗ್ರೆಸ್ ಪಕ್ಷದ ಜನರಲ್ ಸೆಕ್ರಟರಿ...

ಸರ್ಕಾರದ ಸಾಧನೆಗಳ ಅನಾವರಣ

ವಿಜಯಪುರ: ನೆರೆ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಂಡ ಛಾಯಾಚಿತ್ರ ಪ್ರದರ್ಶನಕ್ಕೆ...

ಅವಶ್ಯಕ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ

ವಿಜಯಪುರ: ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯ ಭೂ ಒಡೆತನ ಯೋಜನೆಯಡಿ ಅವಶ್ಯಕವಿರುವ ಅನುದಾನ-ಜಮೀನು ಕುರಿತು ವಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲು ಕ್ರಮ...

ಕ್ರೀಡೆ, ಯೋಗಕ್ಕೆ ಆದ್ಯತೆ ನೀಡಿ

ಹುನಗುಂದ: ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸ ನೀಡುವ ಕ್ರೀಡೆ ಹಾಗೂ ಯೋಗ ಮಾಡಲು ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ವಿಜಯ ಮಹಾಂತೇಶ...

ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ತಮ್ಮ ಪ್ರಜೆಗಳನ್ನು ವಾಪಸ್​ ಕರೆಯಿಸಿಕೊಳ್ಳಲು ಸಿದ್ಧ ಎಂದ ಬಾಂಗ್ಲಾದೇಶ

ಢಾಕಾ: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ವಾಪಸ್ ಪಡೆಯಲು ಸಿದ್ದವಿರುವುದಾಗಿ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೆಮೊನ್ ಹೇಳಿದ್ದಾರೆ. ಪೌರತ್ವ ಕಾಯ್ದೆ...

ಮಕ್ಕಳಿಗೀಗ ಆಟ ಅಂದ್ರೆ ಆನ್​ಲೈನ್ ಆಟವೇ ಎಂಬಂತಾಗಿಬಿಟ್ಟಿದೆ. ಮೊಬೈಲ್ ಫೋನ್, ಟ್ಯಾಬ್, ಲ್ಯಾಪ್​ಟಾಪ್​ನಲ್ಲಿ ಆಡುವ ಗೇಮ್ಳೇ ಆಟ ಎನಿಸಿಬಿಟ್ಟಿದೆ. ಎಲ್ಲ ಆಟವೂ ಒಳಾಂಗಣದಲ್ಲೇ ಆಗಿಬಿಟ್ಟರೆ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಬೆಳೆಯುವುದು ಹೇಗೆ? ಕಣ್ಣಾಮುಚ್ಚಾಲೆ, ಲಗೋರಿ, ಕಬಡ್ಡಿ ಮುಂತಾದ ದೈಹಿಕ ಶ್ರಮದ ಆಟಗಳಿಗೆ ಮಕ್ಕಳು ಹತ್ತಿರವಾಗಬೇಕಿದೆ. ಮನೆಯಂಗಳದಲ್ಲಿ, ಮೈದಾನದಲ್ಲಿ ಧೂಳೆಬ್ಬಿಸಬೇಕಾಗಿದೆ.

| ಸುರೇಶ್ ಮರಕಾಲ ಸಾೖಬರಕಟ್ಟೆ

ಆಟ ಎನ್ನುವ ಪದವೇ ಎಷ್ಟೊಂದು ಸುಂದರ ಅಲ್ಲವೆ? ಮಕ್ಕಳಿಗೂ ಆಟಗಳಿಗೂ ಅವಿನಾಭಾವ ಸಂಬಂಧ. ಈ ಆಟಗಳ ಸೆಳೆತ ಹೇಗಿರುತ್ತದೆ ಎಂದರೆ ಅವರು ಆಟಕ್ಕೆ ಬಿದ್ದರೆ ಅಪ್ಪ ಅಮ್ಮನ ಗದರಿಕೆಗೂ ಬಗ್ಗುವುದಿಲ್ಲ. ಪುಸ್ತಕ ಓದುತ್ತಾ ಆಗುವ ಕಲಿಕೆಗಿಂತ ಹತ್ತಾರು ಪಟ್ಟು ಹೊಸ ಅನುಭವಗಳು ಚಿಣ್ಣರಿಗೆ ಆಟವಾಡುವಾಗ ಸಿಗುತ್ತವೆ. ಆಟದ ಲೋಕದೊಳಗೆ ಪ್ರವೇಶಿಸಿದ ಮಕ್ಕಳು ತಮ್ಮನ್ನು ತಾವು ಮರೆತು ಇತರರ ಜತೆ ಬರೆಯುತ್ತಾರೆ. ಹೀಗಾಗಿ ಆಟಗಳು ಮಗುವಿನ ಶಾರೀರಿಕ ಬೆಳವಣಿಗೆಗೆ ಸದಾ ಪೂರಕ.

ಆದರೆ ಇಂದಿನ ಆಧುನಿಕ ಯುಗದಲ್ಲಿ ಪಟ್ಟಣಗಳಲ್ಲಿ ಮಾತ್ರವಲ್ಲ, ಗ್ರಾಮಗಳಲ್ಲೂ ಮಕ್ಕಳು ಆಡುವ ಆಟದ ಸ್ವರೂಪ ಸಂಪೂರ್ಣ ಬದಲಾಗುತ್ತಿದೆ. ಇಷ್ಟೇ ಆಗಿದ್ದರೆ ಇದಕ್ಕಾಗಿ ಇಷ್ಟೊಂದು ಚಿಂತಿಸಬೇಕಿರಲಿಲ್ಲ. ಆದರೆ ಯಾವ ಆಟಗಳು ಮಗುವಿನ ಮಾಂಸಖಂಡಗಳನ್ನು ಬಲಪಡಿಸಬೇಕಿತ್ತೋ, ಅಂತಹ ಆಟಗಳೆಲ್ಲ ಮೂಲೆ ಸೇರುತ್ತಿರುವುದು ನಿಜಕ್ಕೂ ದುಃಖಕರ. ‘ನನ್ನ ಮಗ ನಮಗಿಂತ ಎಷ್ಟೊಂದು ಫಾಸ್ಟಾಗಿ ಸ್ಮಾರ್ಟ್​ಫೋನ್ ಆಪರೇಟ್ ಮಾಡುತ್ತಾನೆ ಗೊತ್ತಾ?’ ಎಂದು ಕೆಲವು ಅಪ್ಪ-ಅಮ್ಮಂದಿರು ಹೆಮ್ಮೆಯಿಂದ ಬೀಗುತ್ತಾರೆ. ಆದರೆ ಅದರಲ್ಲಿ ಮುಳುಗಿಹೋಗುವ ಕಂದ ದೈಹಿಕ ಕಸರತ್ತಿಲ್ಲದೆ ದಿನದಿಂದ ದಿನಕ್ಕೆ ಕುಂದಿ ಹೋಗುತ್ತಾನೆ ಎಂಬುದನ್ನು ಅವರು ಗಮನಿಸುವುದೇ ಇಲ್ಲ. ಇದಕ್ಕೆ ಪರಿಹಾರ ಇಲ್ಲವೆ? ಖಂಡಿತ ಇದೆ. ಬೇಕಿರುವುದು ಸ್ವಲ್ಪ ವಿರಾಮ, ಮಕ್ಕಳ ಭವಿಷ್ಯದ ಬಗೆಗೆ ಕಾಳಜಿ, ಜತೆಗೆ ಅಪಾರ ತಾಳ್ಮೆ. ಮಕ್ಕಳನ್ನು ಮೊಬೈಲ್-ಲ್ಯಾಪ್​ಟಾಪ್​ಗಳ ಕೃತ್ರಿಮ ಜಗತ್ತಿನಿಂದ ಹೊರತಂದು ಮೈದಾನದ ಗರಡಿಯಲ್ಲಿ ದೈಹಿಕವಾಗಿ ಪಳಗಿಸಲು ಪೋಷಕರು ಮನಸ್ಸು ಮಾಡಬೇಕು. ಆ ರೀತಿ ಹೊರಾಂಗಣದಲ್ಲಿ ಆಡುವ ಕೆಲವು ಆಟಗಳ ಪರಿಚಯ ಇಲ್ಲಿದೆ ನೋಡಿ.

ಖೋಖೋ

ಭಾರತದ ಆಟಗಳ ವೈಶಿಷ್ಟ್ಯೆಂದರೆ ಸ್ವಲ್ಪವೂ ಖರ್ಚಿಲ್ಲದೆ ದೈಹಿಕ-ಮಾನಸಿಕ ತ್ರಾಣವನ್ನು ಒದಗಿಸುವುದು! ಖೋಖೋ ಆಟ ಇದಕ್ಕೆ ಒಂದು ನಿದರ್ಶನ. ಆಯತಾಕಾರದ ಮೈದಾನದ ಎರಡೂ ಕಡೆಯ ಫ್ರೀಜೋನ್​ನ ಸೆಂಟರ್ ಲೇನ್​ನಲ್ಲಿ ನುಣುಪಾದ, ಲಂಬವಾಗಿ ಭೂಮಿಯಲ್ಲಿ ಹುಗಿದಿರುವ ಸುಮಾರು ಒಂದೂಕಾಲು ಮೀಟರ್ ಎತ್ತರದ ಒಂದೊಂದು ಮರದ ಕಂಬವಿರುತ್ತದೆ. ಈ ಆಟದ ನಿಯಮಗಳು ತುಸು ಸಂಕೀರ್ಣ. ಆಯತಾಕಾರದ ಅಂಕಣದಲ್ಲಿ ದಾಳಿಯ ತಂಡದ 8 ಆಟಗಾರರು ಎರಡು ಕಂಬಗಳ ಮಧ್ಯದ ಚೌಕಗಳಲ್ಲಿ ಒಬ್ಬರ ನಂತರ ಇನ್ನೊಬ್ಬರಂತೆ ಎದುರುಬದುರಾಗಿ ಕುಳಿತಿದ್ದು, 9ನೇ ಆಟಗಾರನು ಎದುರಾಳಿಯ ಮೂವರು ಆಟಗಾರರ ಮೇಲೆ ದಾಳಿಯನ್ನು- ಎಂದರೆ ಅವರನ್ನು ಓಡಿಸಿಕೊಂಡು ಹೋಗಿ ಮುಟ್ಟುವ ಪ್ರಯತ್ನ ಮಾಡುತ್ತಾನೆ. ದಾಳಿ ಮಾಡುವ ಕ್ರೀಡಾಳುವು ತಾನು ಕುಳಿತುಕೊಳ್ಳುವ ಮೊದಲು ಈಗಾಗಲೇ ಲೈನಿನ ಮೇಲೆ ಕುಳಿತಿರುವ ತನ್ನ ಜತೆಗಾರನೊಬ್ಬನನ್ನು ಮೆಲ್ಲಗೆ ತಟ್ಟಿ ಜೋರಾಗಿ ಖೋ… ಎನ್ನಬೇಕು. ನಿಗದಿತ ಕಾಲಾವಧಿಯಲ್ಲಿ ಹೆಚ್ಚು ಔಟ್ ಮಾಡಿದ ತಂಡ ಗೆಲ್ಲುತ್ತದೆ.

ಮರಕೋತಿಯಾಟ

ಮಂಗನಿಂದ ಮಾನವ ಎಂಬುದಕ್ಕೆ ಆಟದ ಮೂಲಕ ಮಕ್ಕಳು ತೋರಿಸುವ ಪುರಾವೆಯಿದು. ಮರಗಳೇ ಈ ಆಟದ ಮೂಲಕ್ಷೇತ್ರ. ಒಬ್ಬ ನೆಲದ ಮೇಲಿದ್ದು, ಮರದ ಮೇಲಿರುವವರನ್ನು ಮುಟ್ಟಬೇಕು. ಅವರು ರೆಂಬೆಯಿಂದ ರೆಂಬೆಗೆ ಜಿಗಿಯುತ್ತಾ ತಪ್ಪಿಸಿಕೊಳ್ಳಬೇಕು. ನೆಲದ ಮೇಲಿರುವವನು ತಾನೂ ಮರದ ಮೇಲೇರಿ ಅವರನ್ನು ಹಿಡಿಯುಲು ಯತ್ನಿಸುತ್ತಿರುತ್ತಾನೆ. ಒಂದೊಮ್ಮೆ ಮರದ ಮೇಲಿರುವವನನ್ನು ಮುಟ್ಟಿದನೆಂದರೆ, ಮುಂದಿನ ಕ್ಷಣದಲ್ಲಿ ನೆಲದ ಮೇಲಿದ್ದವ ಕೋತಿಯಾಗಿ ವಕ್ಷಿುರವೇರುತ್ತಾನೆ. ಸಿಕ್ಕಿಬಿದ್ದವ ನೆಲಕ್ಕೆ ಬರುತ್ತಾನೆ. ಹೀಗೆಯೇ ಆಟ ಮುಂದುವರಿಯುತ್ತದೆ. ಇಂತಿಷ್ಟೇ ಆಟಗಾರರಿರಬೇಕೆಂಬ ನಿಯಮವಿಲ್ಲ. ಪಟ್ಟಣಗಳಲ್ಲಿ ಉಸಿರಾಡುವುದಕ್ಕೇ ಮರಗಳಿಲ್ಲದಿರುವಾಗ ಮರಕೋತಿಯಾಟವೆಲ್ಲಿ ಎಂಬ ಚಿಂತೆ ಸಹಜ. ಪೋಷಕರ ಒಪ್ಪಿಗೆ ಪಡೆದು ಹತ್ತಿರದ ಪಾರ್ಕ್​ಗೆ ಲಗ್ಗೆ ಹಾಕಬಹುದು. ರ್ಪಾನವರ ಸಮ್ಮತಿಯೂ ಅಗತ್ಯ. ಮನಸ್ಸಿದ್ದರೆ ಮಾರ್ಗ!

ಲಗೋರಿ ಗಮ್ಮತ್ತು

ಲಗೋರಿ ಆಟವನ್ನು ಗಂಡು-ಹೆಣ್ಣೆಂಬ ಭೇದವಿಲ್ಲದೆ ಇದನ್ನು ಆಡಬಹುದು. ಆಟಗಾರರ ಸಂಖ್ಯೆಗೆ ಮಿತಿಯಿಲ್ಲ. ಎರಡು ತಂಡ ಮಾಡಿಯೂ ಆಡಬಹುದು. ಇಬ್ಬರೇ ಇದ್ದರೂ ಆಡಬಹುದು. ಚಪ್ಪಟೆಯಾಕಾರದ ಚಿಕ್ಕಚಿಕ್ಕ ಕಲ್ಲು ಅಥವಾ ಹೆಂಚಿನ ಚೂರುಗಳನ್ನು ಒಂದರ ಮೇಲೊಂದು ಒಪ್ಪವಾಗಿ ನೆಲದ ಮೇಲೆ ಜೋಡಿಸಿಡಬೇಕು. ಒಬ್ಬಾತ ಸ್ವಲ್ಪ ದೂರದಲ್ಲಿ ನಿಂತು ಅದಕ್ಕೆ ಚೆಂಡನ್ನು ಬೀಸಿ ಹೊಡೆಯಬೇಕು. ಚೆಂಡು ತಾಗಿ ಕಲ್ಲುಗಳು ಬಿದ್ದರೆ ಬೀಳಿಸಿದವನೇ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಅವುಗಳನ್ನು ಮತ್ತೆ ಮೊದಲಿದ್ದಂತೆ ಲಗುಬಗೆಯಿಂದ ಜೋಡಿಸಬೇಕು. ಅಷ್ಟರಲ್ಲಿ ಎದುರಾಳಿಯು ಚೆಂಡನ್ನು ಎತ್ತಿಕೊಂಡು, ಕಲ್ಲು ಜೋಡಿಸುತ್ತಿರುವವನತ್ತ ಎಸೆಯತೊಡಗುತ್ತಾನೆ. ಬೀಸಿ ಬರುವ ಚೆಂಡನ್ನು ತಪ್ಪಿಸಿಕೊಳ್ಳುತ್ತಲೇ ಕಲ್ಲುಗಳನ್ನು ಮೊದಲಿದ್ದ ಹಾಗೆ ಜೋಡಿಸಿದರೆ ಆತ ಗೆದ್ದಂತೆ. ಕಲ್ಲು ಜೋಡಿಸುವ ಮೊದಲೇ ಚೆಂಡು ಈತನಿಗೆ ತಾಗಿದರೆ ಈತ ಸೋತಂತೆ. ಇದರಲ್ಲಿ ಗುರಿಯಿಟ್ಟು ಹೊಡೆಯುವ, ಎದುರಾಳಿಯ ಚೆಂಡಿನೇಟನ್ನು ತಪ್ಪಿಸಿಕೊಳ್ಳುವ, ಬೇಗ ಬೇಗ ಕಲ್ಲುಗಳನ್ನು ಜೋಡಿಸುವ ಕಲೆಯನ್ನು ಆಟಗಾರರು ಕಲಿಯುತ್ತಾರೆ.

ಕುಂಟೆಬಿಲ್ಲೆ

ಕುಂಟೆಬಿಲ್ಲೆ ಆಟವನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ ವಿವಿಧ ಸ್ವರೂಪಗಳಲ್ಲಿ ಆಡುತ್ತಿದ್ದರೂ, ಇದರ ಮೂಲ ಭಾರತ. ಸ್ಥಳೀಯವಾಗಿ ಸಿಗುವ ಸೀಮೆಸುಣ್ಣ ಅಥವಾ ಇದ್ದಿಲಿನಿಂದ ನೆಲದ ಮೇಲೆ ಎಳೆದ ನಾಲ್ಕಾರು ಕೋಣೆಗಳು, ಚಪ್ಪಟೆಯಾಗಿರುವ ಹೆಂಚಿನ ಅಥವಾ ಕಲ್ಲಿನ ಚೂರು- ಇದಿಷ್ಟೇ ಈ ಆಟದ ಬಂಡವಾಳ. ಮಗು ಒಂಟಿಕಾಲಿನಲ್ಲಿ ದೇಹವನ್ನು ಸಮತೋಲನ ಮಾಡಿಕೊಂಡು, ನಿಯಮಾನುಸಾರ ಕೋಣೆಯಿಂದ ಕೋಣೆಗೆ ಜಿಗಿದಾಡುವಾಗ ಇಂದಿನ ಜಿಮ್ಲ್ಲಿ 3 ಗಂಟೆ ಕಸರತ್ತು ಮಾಡಿದ್ದಕ್ಕಿಂತ ಹೆಚ್ಚು ವ್ಯಾಯಾಮವಾಗಿರುತ್ತದೆ!

ಚಿಣ್ಣರ ಚಿನ್ನಿದಾಂಡು

ಮುಷ್ಟಿಯಲ್ಲಿ ಹಿಡಿಯುವಷ್ಟು ದಪ್ಪದ, ಸುಮಾರು ಒಂದೂಕಾಲು ಅಡಿ ಉದ್ದದ ದಾಂಡು ಹಾಗೂ ಅರ್ಧ ಅಡಿ ಉದ್ದದ ಚಿಕ್ಕ ಕಡ್ಡಿ ಬೇಕು. ಚಿಕ್ಕ ಕಡ್ಡಿಯ ಎರಡೂ ತುದಿಗಳನ್ನು ಚೂಪಾಗಿ ಕೆತ್ತಲಾಗಿರುತ್ತದೆ. ಆಟಗಾರರು ದೊಡ್ಡ ದಂಡದಿಂದ ಚಿಕ್ಕ ಕಡ್ಡಿಯ ಚೂಪುಬದಿಗೆ ಬಡಿದು, ಪುಟನೆಗೆಯುವ ಆ ಚಿಕ್ಕಕಡ್ಡಿಗೆ ಕ್ಷಣಮಾತ್ರದಲ್ಲಿ ಗಾಳಿಯಲ್ಲೇ ಮತ್ತೊಂದು ಜೋರಾದ ಏಟು ನೀಡುತ್ತಾರೆ. ಹೀಗೆ ಹಾರಿ ಬರುವ ಕಡ್ಡಿಯನ್ನು ಎದುರಾಳಿಗಳು ಹಿಡಿಯಲು ಯತ್ನಿಸುತ್ತಾರೆ. ಸಿಗದಿದ್ದರೆ ಹೊಡೆದ ತಂಡವು ಚಿಕ್ಕ ಕಡ್ಡಿಯು ಹಾರಿದ ದೂರವನ್ನು ಉದ್ದದ ದಂಡದಿಂದ ನೆಲದಲ್ಲಿ ಅಂಕದಂತೆ ಎಣಿಸುತ್ತಾರೆ. ಹೀಗೆ ಆಟ ಮುಂದುವರೆಯುತ್ತದೆ. ಯಾವ ತಂಡ ಹೆಚ್ಚು ಅಂಕ ಪಡೆಯುತ್ತದೋ ಅದು ಗೆದ್ದಂತೆ. ಚಿನ್ನಿದಾಂಡಿನಲ್ಲಿ ಕಣ್ಣಿನ ಬಗ್ಗೆ ಎಚ್ಚರಿಕೆ ಅತ್ಯಗತ್ಯ.

ಕಣ್ಣಾಮುಚ್ಚೆ ಕಾಡೇಗೂಡೆ

ಈ ಆಟದಲ್ಲಿ ಒಬ್ಬನು ಕಣ್ಣು ಮುಚ್ಚಿಕೊಂಡು ’ಕಣ್ಣಾಮುಚ್ಚೆ, ಕಾಡೇ ಗೂಡೆ, ಉದ್ದಿನ ಮೂಟೆ ಉರುಳೇ ಹೋಯ್ತು, ನನ್ನಯ ಹಕ್ಕಿ ಬಿಟ್ಟೇ ಬಿಟ್ಟೆ, ನಿಮ್ಮಯ ಹಕ್ಕಿ ಮುಚ್ಚಿಕೊಳ್ಳಿ…’ ಎಂದು ಹಾಡುತ್ತಾನೆ. ಅದು ಮುಗಿಯುವಷ್ಟರಲ್ಲಿ ಉಳಿದವರು ಓಡಿ ಹೋಗಿ ಅಡಗಿಕೊಳ್ಳುತ್ತಾರೆ. ಸುಲಭವಾಗಿ ಸಿಕ್ಕಿಬೀಳದಂತೆ ಅಡಗುವವರು ಎತ್ತರದ ಮರ, ಪೊಟರೆಗಳನ್ನು ಆರಿಸಿಕೊಳ್ಳುತ್ತಾರೆ. ಅಡಗಿಕೊಂಡವನು ಸಿಕ್ಕಿಬಿದ್ದರೆ, ಕಣ್ಣಾಮುಚ್ಚೆ ಹೇಳುವ ಸರದಿ ಅವನದಾಗುತ್ತದೆ. ಇಷ್ಟರವರೆಗೆ ಕಣ್ಣಾಮುಚ್ಚೆ ಹೇಳುತ್ತಿದ್ದವನು ಅಡಗುವವರ ಗುಂಪಿನೊಳಗೆ ಸೇರಿಕೊಳ್ಳುತ್ತಾನೆ.

ಕಬಡ್ಡಿ

ಭಾರತದಲ್ಲಿ ಹುಟ್ಟಿದ ಕಬಡ್ಡಿ ಇಂದು ಜಗತ್ತಿನಾದ್ಯಂತ ಪಸರಿಸಿದೆ. ಹತ್ತು ಗಂಟೆ ಸಾಮು ಮಾಡಿದರೂ ಬಾರದ ದೈಹಿಕ ಕ್ಷಮತೆ ಈ ಆಟದಿಂದ ಕೇವಲ 40 ನಿಮಿಷಗಳಲ್ಲಿ ದೊರೆಯುತ್ತದೆ. ಯಾವುದೇ ಆಟೋಪಕರಣಗಳ ಅವಶ್ಯಕತೆ ಇಲ್ಲ. ನೆಲದ ಮೇಲೆ ಎರಡು ಅಂಕಣಗಳನ್ನು ರಚಿಸಲಾಗುತ್ತದೆ. ಎರಡು ತಂಡಗಳಲ್ಲಿ ತಲಾ 7 ಆಟಗಾರರು ಇರುತ್ತಾರೆ, ಐವರು ಕಾಯ್ದಿರಿಸಿದ ಆಟಗಾರರಿರುತ್ತಾರೆ. ಪ್ರತಿ ತಂಡದಿಂದ ಒಮ್ಮೆಗೆ ಒಬ್ಬ ಆಟಗಾರ ಕಬಡ್ಡಿ ಕಬಡ್ಡಿ ಎನ್ನುತ್ತ ಎದುರಾಳಿ ಅಂಕಣದೊಳಗೆ ಬರಬೇಕು. ಎದುರಾಳಿ ತಂಡ ಆತನನ್ನು ಹಿಡಿಯಲು ಯತ್ನಿಸುತ್ತದೆ. ಹಿಡಿದಾಗ ಆತ ಅಂಕಣಗಳ ಮಧ್ಯದಲ್ಲಿರುವ ಗೆರೆಯನ್ನು ಮುಟ್ಟಿದರೆ ಪಾಸ್. ಜತೆಗೆ ಆತನನ್ನು ಎಷ್ಟು ಜನ ಹಿಡಿದಿದ್ದರೋ ಅವರೆಲ್ಲ ಔಟ್. ಒಂದು ವೇಳೆ ಮಧ್ಯದ ಗೆರೆ ಮುಟ್ಟಲು ಆತನಿಗೆ ಸಾಧ್ಯವಾಗದಿದ್ದರೆ ಆತನೇ ಔಟ್. ಹೀಗೆ ಆಟ ಮುಂದುವರಿಯುತ್ತದೆ. ತಂಡದ ಎಲ್ಲಾ 7 ಆಟಗಾರರೂ ಔಟಾದಾಗ ಅದನ್ನು ಲೋನಾ ಎನ್ನುತ್ತಾರೆ. ಎದುರಾಳಿ ತಂಡಕ್ಕೆ 2 ಅಂಕ ದೊರೆಯುತ್ತವೆ. ತಂಡದಲ್ಲಿ 6-7 ಆಟಗಾರರಿರುವಾಗ ರೈಡರ್ ಗೆರೆಯನ್ನು ದಾಟಿದರೆ ಎದುರಾಳಿ ತಂಡಕ್ಕೆ ಬೋನಸ್ ಅಂಕ ದೊರೆಯುತ್ತದೆ. ಯಾವ ತಂಡಕ್ಕೆ ಹೆಚ್ಚು ಅಂಕವಿದೆಯೋ ಆ ತಂಡ ಗೆದ್ದಂತೆ.

- Advertisement -

Stay connected

278,757FansLike
589FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...