ವಿಜಯಪುರ : ತಿಕೋಟಾ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿ ಮೊದಲ ವಾರದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ತಿಳಿಸಿದರು.
ತಿಕೋಟಾ ಪಟ್ಟಣದ ಕಸಾಪ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತಿಕೋಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಿ, ಅರ್ಥಪೂರ್ಣವಾದ ಆಚರಣೆಗೆ ಸಂಕಲ್ಪ ಮಾಡಲಾಯಿತು.
ಸಾನ್ನಿಧ್ಯ ವಹಿಸಿದ್ದ ಪ್ರವಚನಕಾರ ಬಾಬುರಾವ ಮಹಾರಾಜ ಮಾತನಾಡಿ, ಎಲ್ಲ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಿ ಪ್ರಥಮ ಸಾಹಿತ್ಯ ಸಮ್ಮೇಳನ ಆಚರಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕನ್ನಡ ನಾಡು -ನುಡಿ. ನೆಲ-ಜಲ ಕಾಪಾಡುವ ದೃಷ್ಟಿಯಿಂದ ಗೋಷ್ಠಿಗಳನ್ನು ಏರ್ಪಡಿಸೋಣ. ಸ್ಥಳಿಯ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲರ ಗಮನಕ್ಕೆ ತಂದು ಕಾರ್ಯಕ್ರಮ ಯಶಸ್ವಿ ಮಾಡೋಣ ಎಂದರು.
ಪದಾಧಿಕಾರಿಗಳಾದ ಎಸ್.ಬಿ. ಬಿರಾದಾರ, ಶಿಲ್ಪಾ ಹಂಜಿ, ಗಣಪತಿ ಗಳವೆ, ಗೌರಿಶಂಕರ ಹಿರೇಮಠ, ರಮೇಶ ಖ್ಯಾಡಿ, ಎಸ್.ಎಸ್. ಕುಂಬಾರ, ಎನ್.ಬಿ. ಕೋಟಿ, ನಿಂಗರಾಜ ಪಾಟೀಲ, ಶರಣು ಕಂಠಿ, ಎಚ್.ಎಲ್. ಕುಡಚಿ, ಧರೆಪ್ಪ ಎಚ್ಚಿ ಮತ್ತಿತರರಿದ್ದರು.