ಅಥಣಿ: ರಾಜ್ಯದಲ್ಲಿ 18 ಲಕ್ಷಕ್ಕೂ ಹೆಚ್ಚು ಸಮಗಾರ ಸಮುದಾಯದವರಿದ್ದು, ಜಿಲ್ಲೆಯಲ್ಲಿ 1.57 ಲಕ್ಷ ಕುಟುಂಬಗಳಿವೆ. ತಾಲೂಕಿನಲ್ಲಿ 18 ಸಾವಿರ ಜನಸಂಖ್ಯೆಯಿದ್ದು ವಿವಿಧ ನಿಗಮ, ಮಂಡಳಿಗಳಿಂದ ಸಿಗುವ ಸೌಲಭ್ಯ ಸದುಪಯೋಗ ಪಡೆಯಬೇಕು ಎಂದು ಚರ್ಮಕಾರ ಮಹಾಒಕ್ಕೂಟದ ರಾಜ್ಯಾಧ್ಯಕ್ಷ ಅನಿಲ ಸೌದಾಗರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಚರ್ಮಕಾರ ಸಮುದಾಯ ಮಹಾಒಕ್ಕೂಟದ ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರ, ಮಹಿಳಾ ಘಟಕಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಲಿಡಕರ್ ನಿಗಮದಿಂದ ಪಾದರಕ್ಷೆಗಳ ಮಾರಾಟ, ಚರ್ಮದ ವಸ್ತುಗಳಿಗೆ ಬಾರಿ ಬೇಡಿಕೆ ಇದೆ. ಕುಶಲಕರ್ಮಿಗಳು ಸಂಘದ ಸದಸ್ಯತ್ವ ಪಡೆದು ವ್ಯಾಪಾರ ವೃದ್ಧಿಸಿಕೊಳ್ಳಬೇಕು. ಬೆಳಗಾವಿ ಮಹಾಮಂಡಲದ ಸದಸ್ಯತ್ವ ಪಡೆಯಬೇಕು. ಗುಣಮಟ್ಟದ ಪಾದರಕ್ಷೆ ತಯಾರಿಕೆಗೆ ಅಥಣಿ ತಾಲೂಕು ಹೆಸರುವಾಸಿಯಾಗಿದೆ. ಸಣ್ಣ ಪ್ರಮಾಣದ ಕಾರ್ಖಾನೆ ಆರಂಭಿಸಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸಮುದಾಯದವರು ಮುಂದಾಗಬೇಕು ಎಂದರು.
ನಂದು ಶ್ರೀಖಂಡೆ, ಮಹಾದೇವ ಕಾಂಬಳೆ, ಪರಶುರಾಮ ಭಂಡಾರಿ, ತುಕಾರಾಮ ಭಂಡಾರಿ, ಶಿವಾನಂದ ಸೌದಾಗರ, ಗಜಾನನ ಮರಾಠಿ, ತಿರುಪತಿ ಸನ್ನಕ್ಕಿ, ರಾಜು ಹರಳೆ, ಚಂದ್ರಕಾಂತ ಸುನಾಮಿ, ಕುಮಾರಸ್ವಾಮಿ ಸನ್ನಕ್ಕಿ, ಕಿಶನ್ ಸೌದಾಗರ ಇತರರಿದ್ದರು.