ನಾವು ನಿಮ್ಮ ಮನೆ ಮಕ್ಕಳು ಹೌದೋ ಅಲ್ವೋ ಈ ಚುನಾವಣೆಯಲ್ಲಿ ನಿರ್ಧಾರ ಮಾಡಿ ಎಂದ ಸಿಎಂ ಎಚ್​ಡಿಕೆ

ಪಾಂಡವಪುರ: ಕಳ್ಳೆತ್ತು ಬಗ್ಗೆ ಬ್ಯಾಡಪ್ಪ, ಅವ್ ಹೋಯ್ತವೆ, ಇನ್ನೆರಡು ದಿನ ಅಷ್ಟೆ. ಮುಂದೆ ಐದು ವರ್ಷ ಬಿಟ್ಟು ಬರಬಹುದು ಅಷ್ಟೆ ಎಂದು ಕಾರ್ಯಕರ್ತರು ಕಳ್ಳೆತ್ತು ಬಗ್ಗೆ ಮಾತನಾಡೋಕೆ ಹೇಳಿದಾಗ ಸಿಎಂ ಎಚ್​.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಪಾಂಡವಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಅಧಿಕಾರ ಇದ್ರೆ ನಿಮಗೆ ಏನಾದರು ಕೆಲಸ ಮಾಡಬಹುದು, ಇಲ್ಲದಿದ್ರೆ ಕೇವಲ ಭಾಷಣ ಮಾಡಬೇಕಷ್ಟೆ. ನಾಲ್ಕು ವರ್ಷ ಏನು ಮಾಡಿದರೂ ಸರ್ಕಾರ ಉರುಳಿಸಲು ಸಾಧ್ಯವಿಲ್ಲ ಎಂದರು.

ನಾನು ಸಿಎಂ ಆಗ್ತೀನಿ ಎಂದು ಮಂಡ್ಯದಲ್ಲಿ ಏಳೂ ಸ್ಥಾನ ಗೆಲ್ಲಿಸಿಕೊಟ್ರಿ, ಅದೇ ಕಾರಣಕ್ಕೆ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಿದ್ದೇನೆ. ಡಿಸ್ನಿ ಲ್ಯಾಂಡ್ ಗೆ ಯಾವುದೇ ಭೂಮಿ ವಶಪಡಿಸಿಕೊಳ್ಳೋದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಎಲ್ಲಿ ಸಾಲಮನ್ನಾ ಮಾಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಹೇಳಿದ್ದಾರೆ. ಸಾಲಮನ್ನಾಕ್ಕೆ ಹಣ ಇಲ್ಲ ಎಂದು ಇವರ ಪತಿ ಬಳಿ ಹೇಳಿದ್ರಂತೆ. ಎಷ್ಟು ಸುಳ್ಳು ಹೇಳ್ತಿದ್ದಾರೆ. ಮಂಡ್ಯ ಜಿಲ್ಲೆ ಒಂದರಲ್ಲೇ 400 ಕೋಟಿ ರೂ. ಸಾಲಮನ್ನಾ ಆಗಿದೆ ಎಂದರು.

ಪುಟ್ಟರಾಜು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ರು, ಅನುಕಂಪದ ಅಲೆಯಲ್ಲಿ ಪುಟ್ಟರಾಜು ಸೋತೆ ಹೋಗ್ತಾರೆ ಎಂದರು. ಆದರೆ ಮೇಲುಕೋಟೆ ಜನ ಪುಟ್ಟರಾಜು ಅವರನ್ನ ಗೆಲ್ಲಿಸಿದ್ರು. ಅಂದು ಸೋತು ಹೋದವರು ಈಗ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದಾರೆ ಎಂದು ದರ್ಶನ್​ ವಿರುದ್ಧ ವಾಗ್ದಾಳಿ ನಡೆಸಿದ್ರು.

ನಾವು ನಿಮ್ಮ ಮನೆ ಮಕ್ಕಳು ಹೌದೋ ಅಲ್ವೋ ಈ ಚುನಾವಣೆಯಲ್ಲಿ ನಿರ್ಧಾರ ಮಾಡಿ ಎಂದ ಸಿಎಂ ಎಚ್​ಡಿಕೆ ನಿಖಿಲ್ ಹಾಸನದವರು ಎಂದು ಹೇಳಿಕೆ ಕೊಟ್ಟಿದ್ದಾರೆ. ನಿಖಿಲ್ ಮಂಡ್ಯ ಜಿಲ್ಲೆಯ ಮಗನಾಗಿ ಚುನಾವಣೆಗೆ ನಿಂತಿದ್ದಾರೆ. ನಾಟಿಮಾಡೋದು, ಗದ್ದೆ ಉಳುಮೆ ಮಾಡೋದು ಎಲ್ಲ ಕೆಲಸವನ್ನು ರೈತರು ಕಲಿಸಿಕೊಟ್ಟಿದ್ದಾರೆ. ನಿಖಿಲ್ ರೈತನ ಮಗ, ದೇವೇಗೌಡರ ಮೊಮ್ಮಗ ಎಂದರು.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *