More

  ಮಾರಕ ಕಾಯಿಲೆ ತಡೆಗಟ್ಟಲು ಪ್ರವೃತ್ತರಾಗಿ

  ಬೆಳಗಾವಿ: ಇಂದಿನ ಕೋವಿಡ್-19 ತುರ್ತು ಸಂದರ್ಭದಲ್ಲಿ ಎಲ್ಲ ಕಾಯಿಲೆಗಳಿಗೆ ಆರಂಭದಲ್ಲಿಯೇ ಸೂಕ್ತ ಚಿಕಿತ್ಸೆ ನೀಡಿ ಔಷಧೋಪಚಾರ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಕರೊನಾ ಸೋಂಕು ನಿಯಂತ್ರಣದಲ್ಲಿ ವೈದ್ಯಕೀಯ ಸಂಸ್ಥೆಗಳು ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎಂದು ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ರಿಸರ್ಚ್‌ನ ಕುಲಸಚಿವ ಪ್ರೊ. ವಿ.ಎ. ಕೋಟಿವಾಲೆ ಅಭಿಪ್ರಾಯ ವ್ಯಕ್ತಪಡಿಸಿದರು.

  ನಗರದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜ್ ಸಭಾಂಗಣದಲ್ಲಿ ‘ಸಾಂಕ್ರಾಮಿಕ ರೋಗಗಳಿಂದ ಮುಂಬ ರುವ ಆರೋಗ್ಯ ಸಮಸ್ಯೆ’ ಕುರಿತು ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವೆಬಿನಾರ್ ಉದ್ಘಾಟಿಸಿ ಮಾತನಾಡಿ ಡೆಂೆ, ನಿಫಾ ಮತ್ತು ಕರೊನಾದಂತಹ ಮಾರಕ ಕಾಯಿಲೆಗಳಿಗೆ ಸೂಕ್ತ ಲಸಿಕೆ ಹಾಗೂ ಚಿಕಿತ್ಸೆ ಕಂಡುಕೊಂಡು ತಡೆಗಟ್ಟುವಲ್ಲಿ ವೈದ್ಯಕೀಯ ಸಿಬ್ಬಂದಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಹೇಳಿದರು. ಪ್ರಾಚಾರ್ಯ ಡಾ.ಎನ್.ಎಸ್. ಮಹಾಂತಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಾದೇಶಿಕ ಹಿರಿಯ ನಿರ್ದೇಶಕ ಡಾ.ರವಿಕುಮಾರ, ವೈದ್ಯಕೀಯ ಅಧೀಕ್ಷಕ ಡಾ. ಆರ್.ಎಸ್. ಮುಧೋಳ, ಜೆಎನ್‌ಎಂಸಿ ಉಪ ಪ್ರಾಚಾರ್ಯ ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಡಾ.ಶಿವಸ್ವಾಮಿ ಎಂ.ಎಸ್., ಡಾ.ಸುಧೀರ ಪ್ರಭು, ಡಾ.ಶಾಮಣ್ಣ ಬಿ.ಆರ್., ಡಾ.ಎಡ್ಮಂಡ್ ಫರ್ನಾಂಡೀಸ್ ಪಾಲ್ಗೊಂಡಿದ್ದರು. 12 ರಾಜ್ಯಗಳ ಸುಮಾರು 700 ಪ್ರತಿನಿಧಿಗಳು ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು. ಡಾ.ಕ್ರಿಷ್ಟಿನಾ ಮತ್ತು ಡಾ.ವರ್ಷಾ ನಿರೂಪಿಸಿದರು. ಡಾ.ಅವಿನಾಶ ಕೆ. ವಂದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts