ಮಾತುಗಳು ವಚನಗಳಾಗಲಿ

ggl 19-1

ಗಲಗಲಿ: ನಮ್ಮ ಮಾತುಗಳು ವಚನಗಳಾದಾಗ ಮಾತ್ರ ಸಾಮರಸ್ಯದ ಹಾಗೂ ಪರಸ್ಪರ ವಿಶ್ವಾಸದ ಬದುಕು ಸಾಧ್ಯವಾಗಬಲ್ಲದು ಮತ್ತು ಸಹಕಾರ ತತ್ವಗಳು ಪಾಲನೆಯಾಗಬಲ್ಲವು ಎಂದು ಹಿರಿಯ ಸಾಹಿತಿ ಪ.ಗು. ಸಿದ್ದಾಪೂರ ಅಭಿಪ್ರಾಯಪಟ್ಟರು.

ಗಲಗಲಿಯ ಬಸವೇಶ್ವರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ವತಿಯಿಂದ ಏರ್ಪಡಿಸಿದ್ದ ಅಭಿವಂವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹಕಾರದ ಪರಿಕಲ್ಪನೆ 12ನೇ ಶತಮಾನದಲ್ಲಿ ಪ್ರಾರಂಭಗೊಂಡಿತ್ತು. ಸಹಕಾರದ ಬೀಜ ನೆಟ್ಟವ ಬಸವಣ್ಣ. ಆ ಮಹಾನುಭಾವನನ್ನು ಸಹಕಾರಿಯ ಮಹಾಪಿತಾಮಹ ಎಂದು ಬಣ್ಣಿಸಿದರೆ ತಪ್ಪಾಗಲಿಕ್ಕಿಲ್ಲ ಎಂದರು.

ಸಂಘದ ನೂತನ ಅಧ್ಯಕ್ಷ ನಿಂಗಣ್ಣ ಗೋಳಿಪಲ್ಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಹಾಗೂ ಮಮದಾಪುರದಲ್ಲಿ ಸಂಘದ ನೂತನ ಶಾಖೆ ತೆರೆಯಲಾಗುವುದು ಎಂದರು.
ಸಂಘದ ನೂತನ ಆಡಳಿತ ಮಂಡಳಿ ಸದಸ್ಯರಿಗೆ ವಿವಿಧ ಸಂಘ- ಸಂಸ್ಥೆಯವರು ಹಾಗೂ ಸಾರ್ವಜನಿಕರು ಸನ್ಮಾನಿಸಿದರು.

ಮರೇಗುದ್ದಿಯ ಶ್ರೀ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಿದರಿಯ ಶ್ರೀಗಳು, ಸಂಘದ ಉಪಾಧ್ಯಕ್ಷ ಕರೆಯಪ್ಪ ಬಾಚಕ ಹಾಗೂ ಸರ್ವ ನಿರ್ದೇಶಕರು ಇದ್ದರು. ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಣಮಂತ ಸೋರಗಾವಿ ಪ್ರಾರ್ಥಿಸಿದರು. ನಿರ್ದೇಶಕ ಅರುಣ ಕೊಟ್ರಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕಾಂತ ಬಾಳಶೆಟ್ಟಿ ಸ್ವಾಗತಿಸಿದರು. ಎಚ್.ವೈ. ಜಿರಾಳಿ ನಿರೂಪಿಸಿ, ವಂದಿಸಿದರು.

Share This Article

ಐಸ್​​ಕ್ಯೂಬ್​​ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ! ತಜ್ಞರು ಏನು ಹೇಳುತ್ತಾರೆ? Ice cube Remedy

Ice cube Remedy : ಮುಖ ಸುಂದರವಾಗಿ ಕಾಣಲು ಅನೇಕ ಜನರು ವಿವಿಧ ಸಲಹೆಗಳನ್ನು ಅನುಸರಿಸುತ್ತಾರೆ.…

ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon

watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು  ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…