ಹುಕ್ಕೇರಿ: ಕೇಂದ್ರ ಸರ್ಕಾರವು ಪಿಕೆಪಿಎಸ್‌ಗಳು ಸದೃಢವಾಗುವಂತೆ ಉದ್ಯೋಗ ಕೈಗೊಳ್ಳಲು ಪೆಟ್ರೋಲ್ ಪಂಪ್, ಜೆನರಿಕ್ ಮೆಡಿಸಿನ್ ಸ್ಟೋರ್ ಪ್ರಾರಂಭಿಸಲು ಅನುಮತಿ ನೀಡುತ್ತಿದೆ. ಸಹಕಾರಿಗಳು ಯೋಜನೆಯ ಲಾಭ ಪಡೆಯಬೇಕೆಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ತಾಲೂಕಿನ ನೇರಲಿ ಗ್ರಾಮದ ಬಸವೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಪತ್ತು ವಿತರಣೆ ಮತ್ತು 11 ನೇ ವಾರ್ಷಿಕ ಸರ್ವ ಸಾಧಾರಣ ಸಭೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಬದುಕಲು ಸ್ವಸಹಾಯ ಸಂಘ ರಚಿಸಿಕೊಂಡು ಗೃಹ ಉದ್ಯೋಗ ಪ್ರಾರಂಭಿಸುತ್ತಿರುವುದು ಸಂತಸದ ಸಂಗತಿ. ತಾಲೂಕಿನ ಸ್ತ್ರೀ ಸ್ವಸಹಾಯ ಸಂಘಗಳಲ್ಲಿ ಹೆಚ್ಚು ಆರ್ಥಿಕ ಲಾಭ ಮತ್ತು ಸಾಲ ಪಡೆದ ಹಿರಿಮೆ ನೇರಲಿ ಗ್ರಾಮಕ್ಕೆ ಸಲ್ಲುತ್ತದೆ ಎಂದರು.
ಸಂಘದ ಅಧ್ಯಕ್ಷೆ ಸುಜಾತಾ ಪಾಟೀಲ ಮಾತನಾಡಿ, ಸಂಘ ಗೋದಾಮು ಸಹಿತ ಸ್ವಂತ ಕಟ್ಟಡ ಹೊಂದಿದೆ. 450 ಸದಸ್ಯರು 18.68 ಲಕ್ಷ ರೂ. ಷೇರು ಬಂಡವಾಳ, 1.7 ಕೋಟಿ ರೂ. ಠೇವಣಿ, 3 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಪ್ರಸಕ್ತ ವರ್ಷ 2.5 ಲಕ್ಷ ರೂ. ನಿವ್ವಳ ಲಾಭ ಗಳಿಸಿ, 1.26 ಕೋಟಿ ರೂ. ಸಾಲ ವಿತರಿಸಿದೆ ಎಂದರು.
ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಬಸಗೌಡ ಪಾಟೀಲ, ಸಂಘದ ಉಪಾಧ್ಯಕ್ಷ ಸುಭಾಷ ಹಿರೇಮಠ, ನಿರ್ದೇಶಕರಾದ ವೀರನಗೌಡ ಪಟೀಲ, ಕಲಗೌಡ ಪಾಟಿಲ, ಪರಗೌಡ ಖೋತ, ಪಾಂಡುರಂಗ ಖೋತ, ಶ್ರೀನಿವಾಸ ನಾಶಿಪುಡಿ, ಶೈಲಾ ಪಾಟೀಲ, ಲಕ್ಷ್ಮೀಬಾಯಿ ನಂಜನ್ನವರ, ಶೀದಾಬೇಗಂ ಮುಲ್ಲಾ, ಪೀರಪ್ಪ ನಡುಮನಿ, ಬ್ಯಾಂಕ್ ನಿರೀಕ್ಷಕ ಮಂಜುನಾಥ ಹಡಾಡಿ, ರವಿ ಪಾಟೀಲ, ಸಿಇಒ ಸಿ.ಎಸ್.ದೇಸಾಯಿ ಇತರರಿದ್ದರು.