More

    ನದಿಜೋಡಣೆ ಬಗ್ಗೆ ಅಧ್ಯಯನವಾಗಲಿ

    ದೇಶದಲ್ಲಿ ಹರಿಯುವ ಕೆಲ ದೊಡ್ಡ ನದಿಗಳ ಜೋಡಣಾ ಯೋಜನೆ ಅನುಷ್ಠಾನದತ್ತ ಮುಂದಡಿ ಇಟ್ಟಿದೆ. ನದಿಗಳು ನಮ್ಮ ಪ್ರಕೃತಿ&ಪರಿಸರದ ಅವಿಚ್ಛಿನ್ನ ಭಾಗ. ಜೊತೆಗೆ ಸಂಸತಿ, ಪರಂಪರೆಯೊಂದಿಗೂ ತಳುಕು ಹಾಕಿಕೊಂಡು ನಾಗರಿಕತೆಯೊಂದಿಗೆ ಅನನ್ಯ ಸಂಬಂಧ ಹೊಂದಿವೆ.

    ನದಿಗಳ ಹರಿಯುವಿಕೆಗೆ ಅದರದ್ದೇ ಆದ ಮಾರ್ಗಗಳಿವೆ. ಸಣ್ಣ ಸಣ್ಣ ತೋಡು, ತೊರೆ&ಹಳ್ಳಗಳ ಮೂಲಕ ನೀರು ನದಿಯನ್ನು ಸೇರಿ, ಆನಂತರ ನದಿಯು ಸಾಗರ ಸೇರುವ ವಿಧಾನ ಪರಂಪರಾಗತವಾದದ್ದು ಮತ್ತು ತನ್ನದೇ ಆದ ಹಿನ್ನೆಲೆ ಹೊಂದಿದ್ದು ಜನಜೀವನ/ಜೀವರಾಶಿ ರೂಪಿಸಿಕೊಳ್ಳಲು ಕಾರಣವಾಗಿವೆ. ಇನ್ನು ನದಿಜೋಡಣೆಯಿಂದ ಭೂಕಂಪ, ಪರಿಸರನಾಶಗಳಂಥ ಪ್ರಾಕೃತಿಕ ದುರಂತಗಳ ಸಂಭವನೀಯತೆ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಹೀಗಿರುವಾಗ ಸಮಗ್ರವಾಗಿ ಪರೀಶಿಲಿಸಿ ಜನಜೀವನ, ಪ್ರಕೃತಿಗೆ, ಇನ್ನಿತರ ಸಕಲ ಜೀವರಾಶಿಗಳಿಗೆ ತೊಂದರೆಯಾಗದಂತೆ ಈ ಯೋಜನೆಯ ಅನುಷ್ಠಾನ ಒಳಿತು.

    | ಸಂದೀಪ್​ ನಾಯಕ್​ ಸುಜೀರ್​ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts