20.4 C
Bangalore
Monday, December 9, 2019

ಪರಿಸರಕ್ಕೆ ಪೂರಕವಾಗಿ ನಡೆದುಕೊಳ್ಳುವ ಅರಿವು ನಮ್ಮದಾಗಲಿ

Latest News

ಬೈ ಎಲೆಕ್ಷನ್ ರಿಸಲ್ಟ್​| ವಿಜಯನಗರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ ಬಿಜೆಪಿಯ ಆನಂದ್ ಸಿಂಗ್​…

ಬಳ್ಳಾರಿ: ಗಣಿನಾಡಿನ ವಿಜಯನಗರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ...

ಮೊದಲ ಸುತ್ತಿನ ಮತಎಣಿಕೆ: ಹೊಸಕೋಟೆಯಲ್ಲಿ ಪಕ್ಷೇತರ ಶರತ್​ ಬಚ್ಚೇಗೌಡ, ಯಶವಂತಪುರದಲ್ಲಿ ಜೆಡಿಎಸ್​ ಜವರಾಯಿಗೌಡ ಮುನ್ನಡೆ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತಎಣಿಕೆ ಪಕ್ರಿಯೆ ಮುಗಿದಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿರುದ್ಧ ಪಕ್ಷೇತರ...

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ನಮ್ಮ ಬೀದಿಯ ಎರಡೂ ಕಡೆಗಳಲ್ಲಿ ಅಪಾರ್ಟ್​ವೆುಂಟ್​ಗಳಿವೆ. ಎಲ್ಲದರಲ್ಲೂ ಹಿರಿಯ ಜೀವಗಳಿವೆ. ಕೆಲವರಿಗೆ ಮನೆಮಕ್ಕಳು, ಸೊಸೆಯಂದಿರು ನೋಡಿಕೊಳ್ಳುವ ಅದೃಷ್ಟವಿದ್ದರೆ ಇನ್ನು ಕೆಲವರಿಗೆ ಪೇಡ್​ನರ್ಸ್ ವ್ಯವಸ್ಥೆ. ಮುಷ್ಟಿ ಅನ್ನವೋ ಗಂಜಿಯೋ ಉಂಡು ಮುಷ್ಟಿಗಟ್ಟಲೇ ಮಾತ್ರೆಗಳನ್ನು ನುಂಗಿ ಮಧ್ಯಾಹ್ನ ಎರಡು ಗಂಟೆಯಿಂದ ಮೂರೂವರೆಯವರೆಗೆ ಈ ಹಿರಿಯರೆಲ್ಲ ನಿದ್ರಿಸುತ್ತಾರೆ. ಎಲ್ಲ ಮನೆಗಳೂ ತಣ್ಣಗಿರುತ್ತವೆ. ಮೂರೂವರೆಯಿಂದ ಹೇಗೂ ಶಾಲೆಯ ಮಕ್ಕಳು ಪುಟುಪುಟು ಬೊಬ್ಬೆ ಮಾಡುತ್ತ ಬರುವ ಸಮಯಕ್ಕೆ ಇಡೀ ಅಪಾರ್ಟ್​ವೆುಂಟ್ ನಳನಳಿಸುತ್ತದೆ. ಹಿರಿಯ ಜೀವಗಳಿಗೂ ಜೀವಸಂಚಾರವಾಗುತ್ತದೆ. ಮೊಮ್ಮಗುವಿನ ಶಾಲೆಯ ಪರಾಕ್ರಮ ಕೇಳಲು ಎದ್ದು ಬಂದು ಹಾಲ್ನಲ್ಲಿ ಕೂತಿರುತ್ತಾರೆ. ಸಾಲು ಫ್ಲಾ್ಯಟ್​ಗಳಿಗೆ ಗೇಟು, ವಾಚ್ಮನ್, ಅದರೆದುರು ಡಾಂಬರು ಹಾಕಿದ ಸ್ವಚ್ಛ ಖಾಸಗಿ ರಸ್ತೆ. ಬಗೆ ಬಗೆಯ ಮರಗಳ ನೆರಳು. ಮಧ್ಯಾಹ್ನದ ನಿಶ್ಶಬ್ಧ ದಿನಚರಿ. ನಾನು ಬಾಲ್ಕನಿಯಲ್ಲಿ ಕುರ್ಚಿ ಹಾಕಿ ಪ್ರತಿಷ್ಠಾಪನೆ ಮಾಡಿಕೊಂಡು ಓದುವ ನಿರಾತಂಕ ದಿನಚರಿ ರೂಢಿಸಿಕೊಂಡಿದ್ದೇನೆ.

ಕೆಲ ದಿನಗಳ ಹಿಂದೆ ಮಧ್ಯಾಹ್ನ ಎರಡು ಗಂಟೆಗೆಲ್ಲ ಅಪಾರ್ಟ್​ವೆುಂಟ್​ಗಳಲ್ಲಿ ಊಟವಾಗಿ ವಯಸ್ಸಾದವರೆಲ್ಲ ವಿಶ್ರಾಂತಿಗೆ ಜಾರಿದ್ದರು. ಅಷ್ಟರಲ್ಲಿ ನಮ್ಮೆದುರಿನ ಖಾಸಗಿ ಡಾಂಬರು ರಸ್ತೆ ತುಂಬ ಐದಾರು ಬೈಕುಗಳು ಭರಭರ ಬಂದಿಳಿದವು. ಪ್ರತಿ ಬೈಕಿಗೂ ಒಬ್ಬ ಹುಡುಗ ಹಿಂಬದಿ ಒಬ್ಬ ಹುಡುಗಿ. ನೋಡಿದರೆ ಕಾಲೇಜು ವಿದ್ಯಾರ್ಥಿಗಳಂತೆ ಕಾಣುತ್ತಿದ್ದರು. ಬಂದಿದ್ದೇ ಕೇಕೆ ಹಾಕಿ ಬೊಬ್ಬೆ ಶುರು ಹಚ್ಚಿಕೊಂಡರು. ಮಾತಿಗೂ ಮುನ್ನ ನಗು, ಕೇಕೆ. ಹುಡುಗಿಯರ ಪೈಕಿ ಒಬ್ಬಳು ಗರಿಗರಿ ಪಿಳಿಪಿಳಿ ಡ್ರೆಸ್ ಹಾಕಿದ್ದರಿಂದ ಅವಳ ಬರ್ತ್​ಡೇ ಇರಬೇಕು ಎಂದುಕೊಂಡೆ. ನನ್ನ ಸಂಶಯ ನಿಜವಾಯಿತು. ಕೂದಲಿಗೆ ವಿಪರೀತ ಅಸಡ್ಡಾಳ ಬಣ್ಣ ಬಳಿದುಕೊಂಡ ಹುಡುಗನೊಬ್ಬ ದೊಡ್ಡದೊಂದು ಕೇಕ್​ಪ್ಯಾಕೆಟ್ ಹಿಡಿದು ಇನ್ನೊಂದು ಬೈಕಿನಲ್ಲಿ ಬಂದಿಳಿದ. ಎಲ್ಲ ಬೈಕುಗಳನ್ನು ಟೇಬಲ್ಲಿನ ರೀತಿಯಲ್ಲಿ ಜೋಡಿಸಿ ಕೇಕ್ ಕಟ್ ಮಾಡಿ ‘ಹ್ಯಾಪಿ ಬರ್ತಡೇ ಟು ಯೂ ಡಿಯರ್…’ ಎಂದು ದೊಡ್ಡದಾಗಿ ಒದರಿದರು. ಅಪಾರ್ಟ್​ವೆುಂಟುಗಳ ಎಲ್ಲರಿಗೂ ಕೇಳುವ ಬೊಬ್ಬೆ. ಮನೆಯಲ್ಲೇ ಇರುವ ಹಿರಿಯರು ಕಿಟಕಿಯಿಂದ ಬಗ್ಗಿ ಬಗ್ಗಿ ನೋಡತೊಡಗಿದರು. ಎದುರಿನ ರಸ್ತೆಯಲ್ಲಿ ಜಮಾಯಿಸಿದ್ದ ದ್ವಿಚಕ್ರ ವಾಹನಗಳನ್ನು ಕಂಡು ಯಾರದ್ದೋ ಮನೆಗೆ ಬಂದಿರಬಹುದೆಂದುಕೊಂಡು ಸುಮ್ಮನಾದರು. ಸ್ವಲ್ಪ ಹೊತ್ತಿಗೆ ಕೇಕ್ ಕತ್ತರಿಸುವ ಬೀದಿ ಡಾನ್ಸ್ ನಡೆಯಿತು. ಚಪ್ಪರದಂತೆ ಮರಗಳಿದ್ದ ಈ ಸ್ವಚ್ಛ ರಸ್ತೆ ಅವರಿಗೆ ರ್ಪಾನಲ್ಲಿ ಅಥವಾ ಕಾಲೇಜಿನಲ್ಲಿ ದೊರೆಯದ ಏಕಾಂತವನ್ನು ಸೃಷ್ಟಿಸಿತ್ತು. ಕಾಲೇಜುಗಳಲ್ಲಿ ತರಗತಿಗಳ ಒಳಗೆ ಕೇಕ್ ಕಟ್ ಮಾಡುವುದನ್ನು, ಡ್ಯಾನ್ಸ್ ಮಾಡುವುದನ್ನು ನಿಷೇಧಿಸಲಾಗಿದೆ. ಆದರೂ ಪಾರ್ಕಗಳಲ್ಲಿ ಲೈಬ್ರರಿಯ ಹಿಂದೆ ನಡೆಯುವ ಇಂತಹ ಬರ್ತ್ ಡೇ ಕೂಟಗಳನ್ನು ನಾನು ನೋಡಿದ್ದೇನಾದ್ದರಿಂದ ಹೆಚ್ಚು ಆಶ್ಚರ್ಯ ಎನಿಸಲಿಲ್ಲ. ಏನೋ ಯುವಜನತೆಯ ಉತ್ಸಾಹ, ಒಂದಿಷ್ಟು ಹೊತ್ತು ಬೊಬ್ಬೆ ಮಾಡಿ ಕುಣಿದು ಹೋಗಬಹುದು ಎಂದುಕೊಂಡೆ. ಪಾಪ ಹಿರಿಯರೆಲ್ಲ ವಿಶ್ರಾಂತಿಯ ನಿದ್ದೆಯನ್ನು ಬಿಡಬೇಕಾಗಿ ಬಂದು ಕಿಟಕಿಯ ಬಳಿ ಬಾಲ್ಕನಿಯಲ್ಲಿ ಕೂತು ಯುವ ಮನರಂಜನೆಯನ್ನು ನೋಡತೊಡಗಿದ್ದರು. ಕೇಕನ್ನು ಹುಡುಗಿಯ ತಲೆಗೆ ತಿಕ್ಕಲಾಯಿತು, ಮುಖಕ್ಕೆಲ್ಲ ಬಳಿದರು. ‘ಹ್ಯಾಪಿ ಬರ್ತ್ ಡೇ’ ಹಾಡಿದರು. ಈಗ ಕೇಕ್ ತಿನ್ನುವ ಸರದಿ. ನೋಡುತ್ತೇನೆ, ಯಾವುದೋ ನೋಟ್ಬುಕ್ ತೆಗೆದು(ಅರ್ಥಶಾಸ್ತ್ರದ ನೋಟ್​ಬುಕ್ ಇರಬಹುದೇ ದೇವರೇ) ಒಂದೊಂದಾಗಿ ಹಾಳೆಯನ್ನು ಒಬ್ಬ ವಿದ್ಯಾರ್ಥಿ ಹರಿದು ಹರಿದು ಕುಣಿಯುತ್ತಲೇ ಹಂಚಿ ಮುಗಿಸಿದ. ಹುಡುಗಿಯೋರ್ವಳು ಕಟ್ ಮಾಡಿಟ್ಟ ಕೇಕಿನ ತುಂಡುಗಳನ್ನು ಆ ಕ್ಲಾಸ್ ನೋಟ್​ಬುಕ್ಕಿನ ಹರಿದ ಹಾಳೆಗಳ ಮೇಲೆ ಇಡತೊಡಗಿದಳು. ಮತ್ತೆ ಗದ್ದಲ, ಮತ್ತೆ ನಗು, ಮತ್ತೆ ಕೋಲಾಹಲ. ಅಂತೂ ಕೇಕ್ ತಿಂದು ಮುಗಿಸಿದರು. ಕೈ ಒರೆಸಿಕೊಳ್ಳಲು ಪುನಃ ಇನ್ನೋರ್ವ ವಿದ್ಯಾರ್ಥಿಯ ನೋಟ್​ಬುಕ್ ಹೊರಗೆ ಬಂತು. ನಾವು ಅಧ್ಯಾಪಕರು ಜೋಪಾನವಾಗಿ ನೋಡುವ ನೋಟ್​ಬುಕ್ ಎಂಬ ವಸ್ತು ಹೀಗೆ ತಿನ್ನಲು, ಕೈ ಒರೆಸಲು ಬಳಸಲ್ಪಡುವುದನ್ನು ನೋಡಿ ನನಗ್ಯಾಕೋ ಹೊಟ್ಟೆಯೊಳಗೆ ಸಂಕಟವಾಯಿತು. ಇಷ್ಟರಲ್ಲಿ ತಾಸೆರಡು ಕಳೆದಿರಬಹುದು. ಯಾರಿಗೂ ಎಲ್ಲಿಗೂ ಹೋಗುವ ಅವಸರವಿದ್ದಂತೆ ತೋರುತ್ತಿರಲಿಲ್ಲ. ತಿಂದ ಮೇಲೆ ಆ ಕಾಗದದ ಮುದ್ದೆಗಳನ್ನು ಒಂದು ಬ್ಯಾಗಿನಲ್ಲಿ ಹಾಕಿಕೊಂಡು ಹೋಗಬಹುದೆಂದು ನಿರೀಕ್ಷಿಸಿದ್ದೆ. ಆದರೆ ಅತ್ಯಂತ ಸಹಜವೆಂಬಂತೆ ಕಾಲು ಬುಡದಲ್ಲಿಯೇ ಆ ಮುದ್ದೆ ಕಾಗದಗಳನ್ನು ಬಿಸಾಡಿದ ಯುವಜನತೆ ಕೋಲಾಹಲ ಮುಂದುವರಿಸಿದರು. ಸ್ವಚ್ಛವಾಗಿದ್ದ ನಮ್ಮೆದುರಿನ ಕಪ್ಪು ಡಾಂಬರು ರಸ್ತೆ ಈಗ ಬಿಳಿ ಕಸದ ಮುದ್ದೆಗಳಿಂದ ತುಂಬಿ ಹೋಯಿತು. ನನಗೆ ಒಮ್ಮೊಮ್ಮೆ ಅಪರೂಪಕ್ಕೆ ಪಿತ್ತ ಕೆರಳುವ ಕಾಯಿಲೆ ಇದೆ ಎಂದು ಮಗಳು ಹೇಳುತ್ತಿರುತ್ತಾಳೆ. ಈ ದೃಶ್ಯ ನೋಡಿದ ಕೂಡಲೇ ನನ್ನ ಪಿತ್ತ ಕೆರಳುವಿಕೆ ಜಾರಿಗೆ ಬಂತು. ನಾನು ಮೊದಲನೇ ಮಹಡಿಯ ಬಾಲ್ಕನಿಯಲ್ಲಿ ಇದ್ದಿದ್ದರಿಂದ ರಸ್ತೆಯಲ್ಲಿರುವವರಿಗೆ ನಾನು ಮಾತಾಡಿದ್ದು ಸರಾಗವಾಗಿ ಕೇಳುತ್ತಿತ್ತು. ಅವರು ಬಿಸಾಡಿದ ಕಸವನ್ನು ಎತ್ತಿಕೊಂಡು ಒಯ್ಯುವ ಯಾವ ಲಕ್ಷಣವೂ ಕಾಣಲಿಲ್ಲ. ಒಂದೊಂದು ಜೋಡಿ ಬೈಕ್ ಏರಲು ಪ್ರಾರಂಭ ಮಾಡಿತು. ನಾನು ತಡೆದುಕೊಳ್ಳಲಾರದೆ ‘ಎಕ್ಸೂ್ಕ್ಯಸ್ ಮಿ ಜೆಂಟಲ್ಮಾ್ಯನ್ ನೀವು ಸ್ಟೂಡೆಂಟ್ಸ್ ಇರಬಹುದಲ್ಲವೇ? ನೀವು ತಿಂದು ಹಾಕಿದ ಕಸವನ್ನು ಯಾರು ಎತ್ತಬೇಕು? ನಮ್ಮ ಶಾಂತ, ಸ್ವಚ್ಛ ಪರಿಸರಕ್ಕೆ ಬಂದು ಗದ್ದಲ ಎಬ್ಬಿಸಿ ಹಾಳು ಮಾಡಿದ್ದಲ್ಲದೆ ಕಸದ ರಾಶಿಯನ್ನು ಸುರಿದಿದ್ದೀರಿ. ಎತ್ತಿಕೊಂಡು ಹೋಗಿ ಮೂಲೆಯಲ್ಲಿರುವ ಡಸ್ಟ್​ಬಿನ್ನಿಗೆ ಹಾಕಿದಿರೋ ಸರಿ. ಇಲ್ಲವಾದರೆ ನಿಮ್ಮೆಲ್ಲ ಬೈಕುಗಳ ಫೋಟೋ ತೆಗೆದಿದ್ದೇನೆ, ನಂಬರ್ ಸಮೇತ ಕಂಪ್ಲೇಂಟ್ ಕೊಡುತ್ತೇನೆ’ ಎಂದು ಅಬ್ಬರಿಸಿದೆ. ಅನಿರೀಕ್ಷಿತ ದಾಳಿಯಿಂದ ಎಚ್ಚೆತ್ತುಕೊಂಡ ಯುವಕರು ಬಾಯಿ ಮುಚ್ಚಿಕೊಂಡು ಬೈಕಿನಿಂದ ಕೆಳಗಿಳಿದು ಕೇಕ್​ಡಬ್ಬಿ ಹಾಗೂ ಕಾಗದದ ಮುದ್ದೆಗಳನ್ನು ಎತ್ತಿಕೊಂಡು ಹೊರಟರು. ರಭಸವಾಗಿ ಹೊರಟ ಬೈಕೊಂದರ ಹುಡುಗ ನನ್ನತ್ತ ದುರುದುರು ನೋಡಿದಾಗ ನಾನು ನಗುತ್ತ ಖುಷಿಯಿಂದ ಟಾಟಾ ಎಂದು ಕೈ ಬೀಸಿದೆ. ಇದನ್ನು ನಿರೀಕ್ಷಿಸದಿದ್ದ ಯುವಕರು ಕಕ್ಕಾಬಿಕ್ಕಿಯಾಗಿ ಹೊರಟೇ ಹೋದರು. ನಮ್ಮ ರಸ್ತೆಯ ಎದುರಿನ ಓಣಿಯ ಹೆಸರೇ ಸ್ಟೂಡೆಂಟ್ಸ್ ಲೇನ್. ವಿದ್ಯಾರ್ಥಿಗಳು ಓದಲು ಕುಳಿತುಕೊಳ್ಳಬಹುದಾದ ಕಟ್ಟೆಗಳು, ನೆರಳು ನೀಡುವ ಮರಗಳು ಎಲ್ಲ ಇವೆ. ಆದರೆ ವಿದ್ಯಾರ್ಥಿಗಳಿಗೆ ಆ ಜಾಗದ ಸ್ವಚ್ಛತೆಯ ಬಗ್ಗೆ ಆಸ್ಥೆ ಇಲ್ಲ!

ಮಂಗಳೂರು ರಾಮಕೃಷ್ಣಾಶ್ರಮದ ಸ್ವಾಮಿಗಳು ಮಂಗಳೂರಿನ ತೊಂಬತ್ತು ಭಾಗ ಜನರಲ್ಲಿ ಸ್ವಚ್ಛತೆ ಬಗ್ಗೆ ಸ್ವಯಂಜಾಗೃತಿ ಮೂಡಿಸಿ ಅನೇಕ ಕಸದ ತೊಪ್ಪೆ, ಕೊಚ್ಚೆಕೂಪಗಳನ್ನು ಸ್ವಚ್ಛಗೊಳಿಸಿದ್ದಾರೆ. ಪ್ರತಿ ಭಾನುವಾರ ಒಂದೊಂದು ಬಡಾವಣೆಯಲ್ಲಿ ಸ್ವಯಂಸೇವಕರೊಂದಿಗೆ ಸೇರಿ ಇಡೀ ವಠಾರಗಳನ್ನು ಶುಚಿಗೊಳಿಸಿದ್ದಾರೆ. ಬಿದ್ದು ಹೋದ ಬೋರ್ಡಗಳಿದ್ದರೆ ಅವನ್ನು ಎತ್ತಿ, ಅದಕ್ಕೆ ಬಣ್ಣ ಬಳಿದು ಸರಿಯಾದ ಅಕ್ಷರಗಳನ್ನು ಬರೆದು ಹೋಗುವ ಈ ಸೇವಾವೃತ್ತಿಯ ಕುರಿತು ಈ ಅಕ್ಷರಸ್ಥ ಯುವಕರಿಗೆ ಅರಿವೇ ಇಲ್ಲವೇ? ಅವರ ಕಾಲೇಜು ಯಾವುದಿರಬಹುದು? ಅವರ ಕಾಲೇಜಿನಲ್ಲಿ ಸ್ವಚ್ಛತೆ ಕುರಿತು ಪಠ್ಯದ ಜತೆಗೆ ವಿವರಿಸಿ ಹೇಳುವ ಅಧ್ಯಾಪಕರು ಇಲ್ಲವೇ ಎಂದೆಲ್ಲ ಮನಸ್ಸು ಚಡಪಡಿಸಿತು.

ಇದಾದ ಮರುದಿನವೇ ನಾನು ಬೆಂಗಳೂರಿಗೆ ಹೋಗಿ ಬಿಟ್ಟೆ. ದೀಪಾವಳಿಯ ದಿನಗಳು. ನನ್ನ ಹಳ್ಳಿಯ ದೀಪಾವಳಿಯನ್ನು ನೆನಪಿಸಿಕೊಳ್ಳುತ್ತ ಬಾಲ್ಕನಿಯಲ್ಲಿ ದೀಪ ಹಚ್ಚಿಟ್ಟು ಒಳಗೆ ಬಂದಿದ್ದೆನಷ್ಟೇ. ನಮ್ಮ ಸಾಲು ಮನೆಗಳ ಒಳಗಿನಿಂದ ಯುವಕ-ಯುವತಿಯರು, ವಯಸ್ಸಾದವರು, ಚಿಕ್ಕಮಕ್ಕಳು ಹೀಗೆ ಎಲ್ಲರೂ ಗುಂಪು-ಗುಂಪಾಗಿ ಮನೆಯಿಂದ ಹೊರರಸ್ತೆಗೆ ಬರತೊಡಗಿದರು. ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ಮೂಟೆ ಪಟಾಕಿ! ತಿಳಿದು ಹೋಯಿತು, ಇದು ಪಟಾಕಿಯೆಂಬ ದುಡ್ಡು ಸುಡುವ ಕಾರ್ಯಕ್ರಮ. ಇಡೀ ಬಡಾವಣೆ ಅಲ್ಲಿ ನೆರೆದಿತ್ತು. ಸುಡುಮದ್ದು ಪ್ರದರ್ಶನ ಪ್ರಾರಂಭವಾಯಿತು. ಢಂಢಮಾರ್ ಸಿಡಿಮದ್ದುಗಳು ಸಿಡಿಯತೊಡಗಿದವು. ಸರ ಪಟಾಕಿಗಳು ಒಂದು ಮೂಲೆಯಿಂದ ಇನ್ನೊಂದು ಮೂಲೆತನಕ ಸಿಡಿಯುತ್ತಲೇ ಹೋಗಿ ಎಲ್ಲರ ಕಿವಿಗಳನ್ನು ತೂತು ಮಾಡಿದವು. ಸುರುಸುರು ಬತ್ತಿ, ನೆಲಚಕ್ರ, ಹೂಕುಂಡ ಹೊಗೆ ಕಾರುವ ಬೆಳಕಿನ ಮಾಯಾಲೋಕ ಅಲ್ಲಿ ಸೃಷ್ಟಿಯಾಗಿತ್ತು. ಅದರಿಂದ ಹೊರಸೂಸುವ ದುರ್ಗಂಧ ಮತ್ತು ಹೊಗೆ ತಮ್ಮ ಮಕ್ಕಳ ಶ್ವಾಸಕೋಶದೊಳಗೇ ಹೋಗುತ್ತಿರುವುದನ್ನು ಅರಿಯದವರಂತೆ ಮಹಿಳೆಯರೂ ಕೇಕೆ ಹಾಕಿ ಕುಣಿಯುವುದನ್ನು ನೋಡಿದಾಗ ನಮ್ಮ ಊರಿನ ಆ ವಿದ್ಯಾರ್ಥಿಗಳ ಅಜ್ಞಾನಕ್ಕೂ ಇವರ ಅಜ್ಞಾನಕ್ಕೂ ವ್ಯತ್ಯಾಸ ತೋರಿ ಬರಲಿಲ್ಲ. ಎರಡು ತಾಸಿಗೂ ಮಿಕ್ಕು ಪಟಾಕಿ ಸುಡುವ ಕ್ರಿಯೆಯಲ್ಲಿ ನೇರವಾಗಿ ದುಡ್ಡನ್ನೇ ಸುಡುತ್ತಿರುವುದಲ್ಲದೆ ಸುತ್ತಮುತ್ತಲಿನ ಪರಿಸರದ ಆರೋಗ್ಯವನ್ನು ಸುಡುವ ‘ಪುಣ್ಯ’ದ ಕೆಲಸದಲ್ಲಿ ನೆರೆಹೊರೆಯವರು ಮಗ್ನರಾಗಿದ್ದರು. ಬೀದಿ ನಮ್ಮದಲ್ಲದಿದ್ದರೂ ನಮ್ಮ ಆರೋಗ್ಯ ನಮ್ಮದಲ್ಲವೆ? ಪರಿಸರದ ಬಗೆಗಿನ ಅವಗಣನೆ ಹೀಗೆ ಮುಂದುವರಿದರೆ ಅದಕ್ಕೆ ನಾವೇ ಬೆಲೆ ತೆರಬೇಕಾಗುತ್ತದೆ ಎಂಬ ಅರಿವು ತುಂಬ ಮುಖ್ಯ. ಈ ಅರಿವು ಮೂಡಿಸಿಕೊಂಡು, ಪರಿಸರಕ್ಕೆ ಪೂರಕವಾಗಿ ನಡೆದುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂಬುದನ್ನು ಮರೆಯದಿರೋಣ.

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...