ಮೂಡಲಗಿ: ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆ ಮತ್ತು ಆಧುನಿಕತೆಯಿಂದ ನಾಡಿನ ಸಂಪ್ರದಾಯ ಮತ್ತು ಆಚರಣೆಗಳೆಲ್ಲ ಅಪಾಯದ ಅಂಚಿನಲ್ಲಿವೆ ಎಂದು
ಕಬ್ಬೂರ ಜಾನಪದ ಗಾಯಕ ಎಸ್.ಪಿ. ಹೊಸಪೇಟಿ ಹೇಳಿದರು.
ಇಲ್ಲಿನ ಮೂಡಲಗಿ ಶಿಣ ಸಂಸ್ಥೆಯ ಶಿವಬೋಧರಂಗ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಜನರು ಜನಪದ, ನಾಡಿನ ಸಂಸತಿ ಉಳಿಸಿಕೊಂಡು ಹೋಗಲು ಸುಗ್ಗಿ ಸಂಭ್ರಮ ಆಯೋಜಿಸಿ ಜಾಗತಿ ಮೂಡಿಸಿದ್ದು ಶ್ಲಾನೀಯ ಎಂದರು. ಸಂಸ್ಥೆಯ ಅಧ್ಯ ವೆಂಕಟೇಶ ಸೋನವಾಲಕರ ಮಾತನಾಡಿ ವಿದ್ಯಾರ್ಥಿಗಳು ಅಧ್ಯಯನದ ಜತೆಗೆ ಸಾಂಸತಿಕ ಮತ್ತು ಜಾನಪದ ವಿಷಯಗಳಲ್ಲಿ ಆಸಕ್ತರಾಗಬೇಕು. ಅವು ಸರ್ವಾಂಗೀಣ ವಿಕಾಸಕ್ಕೆ ಸಹಕಾರಿ ಎಂದು ಹೇಳಿದರು.
ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಲಾವಣಿ, ಗೀಗಿ ಹಾಡು, ಭಜನೆ, ಸುಗ್ಗಿ ಹಾಡು, ಕೋಲಾಟಗಳಿಗೆ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಂಸ್ಥೆಯ ನಿರ್ದೇಶಕ ವಿಜಯಕುಮಾರ ಸೋನವಾಲಕರ, ನಿವತ್ತ ಪ್ರಾಚಾರ್ಯ ಎಸ್.ಡಿ. ತಳವಾರ, ಬಾಲಶೇಖರ ಬಂದಿ, ಪ್ರಾಚಾರ್ಯ ಎಂ.ಎಸ್. ಪಾಟೀಲ, ಎಸ್.ಕೆ. ಹಿರೇಮಠ, ಬಿ.ಜಿ. ಗಡಾದ, ಎಲ್.ಆರ್. ಧರ್ಮಟ್ಟಿ, ಡಾ.ಆರ್.ಪಿ. ಬಿರಾದಾರ, ಎಸ್.ಎಸ್. ಹಿರೇಮಠ, ಎಂ.ಜಿ. ಹೆಬ್ಬಳ್ಳಿ, ಆರ್.ಎಚ್. ಯಕ್ಕುಂಡಿ, ಎಸ್.ಪಿ. ಸಣ್ಣಮೇತ್ರಿ, ಆರ್.ಎಸ್. ಹಾದಿಮನಿ, ಎಚ್.ಎಂ. ಹತ್ತರಕಿ, ಎನ್.ಪಿ. ಗುಳೇದಗುಡ್ಡ, ಎಸ್.ವೆ. ಖಾನಪ್ಪಗೋಳ, ಎಸ್.ಕೆ. ಹಿರೇಮಠ, ಇಮಾಮ್ ನದ್ಾ ಮತ್ತು ಭಾಗ್ಯಶ್ರೀ ಹೊಸಟ್ಟಿ ಇದ್ದರು.