
ತಾಳಿಕೋಟೆ: ಭಾರತೀಯ ಯೋಧರು ಪಾಪಿ ಪಾಕಿಸ್ತಾನವನ್ನು ಭೂಪಟದಿಂದಲೇ ಅಳಿಸಿ ಹಾಕಲು ಎಲ್ಲ ರೀತಿಯಿಂದಲೂ ಸಮರ್ಥರಿದ್ದು, ಯಾವುದೇ ಕಾರಣಕ್ಕೂ ಯುದ್ಧ ನಿಲ್ಲಿಸಬಾರದೆಂಬದು ಬಿಜೆಪಿ ಅಲ್ಪ ಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ನದೀಂ ಕಡು ಹೇಳಿದ್ದಾರೆ.
ಭಯೋತ್ಪಾದನೆಯನ್ನು ಹುಟ್ಟು ಹಾಕುವ ಫ್ಯಾಕ್ಟರಿಯಾಗಿಸಿಕೊಂಡಿರುವ ಪಾಕಿಸ್ತಾನದ ಕಣ್ಣೀರಿನ ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಲೆ ಕೊಡಬಾರದು. ಪಾಕಿಸ್ತಾನ ಸಂಪೂರ್ಣ ನಿರ್ಮೂಲನೆಯಾದಾಗ ಭಯೋತ್ಪಾದನೆ ಎಂಬುದು ಸಂಪೂರ್ಣ ನಿಂತು ಹೋಗಲಿದೆ ಎಂದು ತಿಳಿಸಿದರು.
ಇಡೀ ಭಾರತ ದೇಶದ ಜನರು ಜಾತಿ, ಧರ್ಮ ಎಲ್ಲವನ್ನೂ ಬದಿಗೊತ್ತಿ ನಾವೆಲ್ಲರೂ ಭಾರತೀಯರೆಂಬ ಭಾವನೆಯೊಂದಿಗೆ ಮೋದಿಜಿ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಭಾರತಕ್ಕೆ ಸೇರಬೇಕಿದ್ದ ಪಿಒಕೆಯನ್ನು ಸಂಪೂರ್ಣ ವಶಕ್ಕೆ ಪಡೆದುಕೊಳ್ಳಬೇಕು. ಈಗಾಗಲೇ ಭಾರತೀಯ ಸೈನ್ಯ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಟ್ಟಿದ್ದು, ಯಾವುದೇ ಕಾರಣಕ್ಕೂ ಯುದ್ಧ ನಿಲ್ಲಿಸಬಾರದು ಎಂದು ಹೇಳಿದರು.