ದೇವದುರ್ಗ: ಏಮ್ಸ್ ಮಂಜೂರಾತಿಗಾಗಿ ರಾಯಚೂರಿನಲ್ಲಿ ನಡೆಯುತ್ತಿರುವ ಹೋರಾಟ ಮೂರು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಆಡಳಿತ ಸೌಧ ಮುಂದೆ ಏಮ್ಸ್ ಹೋರಾಟ ಸಮಿತಿ ತಾಲೂಕು ಘಟಕ ಮಂಗಳವಾರ ಪ್ರತಿಭಟನೆ ನಡೆಸಿತು.

ಇದನ್ನೂ ಓದಿ:ಏಮ್ಸ್ ಹೋರಾಟ ಸಾವಿರ ದಿನಕ್ಕೆ ಪಾದರ್ಪಣೆ!
ಡಾ.ನಂಜುಂಡಪ್ಪ ವರದಿಯಂತೆ ರಾಜ್ಯದಲ್ಲಿ ರಾಯಚೂರು ಜಿಲ್ಲೆ ಆರ್ಥಿಕ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಏಮ್ಸ್ ಸಂಸ್ಥೆ ಮಂಜೂರಾತಿಗಾಗಿ ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಸಿದರೂ ಕೇಂದ್ರ ಸರ್ಕಾರ ಸ್ಪಂದಿಸದೆ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು. ರಾಯಚೂರು ಏಮ್ಸ್ ಸಂಸ್ಥೆಗೆ ಬೇಕಾದ ಭೂಮಿ, ನೀರು, ವಿದ್ಯುತ್ ಸೌಲಭ್ಯ ಹೊಂದಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ತಂಡ ಭೇಟಿ ನೀಡಿ ಇಲ್ಲಿನ ಸೌಲಭ್ಯ ಪರಿಗಣಿಸಿ ಏಮ್ಸ್ ಸಂಸ್ಥೆ ಮಂಜೂರು ಮಾಡಬೇಕು. ರಾಜ್ಯ ಸರ್ಕಾರದ ಶಿಫಾರಸಿನಂತೆ ಕರ್ನಾಟಕದ ಎಲ್ಲ ಸಂಸದರು ಪಕ್ಷಭೇದ ಮರೆತು ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು. ಬಳಿಕ ಗ್ರೇಡ್-2 ತಹಸೀಲ್ದಾರ್ ಸತ್ಯಮ್ಮಗೆ ಮನವಿ ಸಲ್ಲಿಸಿದರು.
ಹೋರಾಟ ಸಮಿತಿ ತಾಲೂಕು ಸಂಚಾಲಕ ಎಚ್.ಶಿವರಾಜ, ಪ್ರಮುಖರಾದ ಶಿವರಾಜ ರುದ್ರಾಕ್ಷಿ, ರಾಚಣ್ಣ ಟೇಲರ್, ಇಕ್ಬಾಲ್‌ಸಾಬ್ ಅರಕೇರಾ, ವೆಂಕಟರೆಡ್ಡಿ ಅಳ್ಳುಂಡಿ, ಮಲ್ಲಯ್ಯ ಸ್ವಾಮಿ ಕ್ವಾಟಿ, ಮಲ್ಲಪ್ಪ ಪೂಜಾರಿ, ಶಿವಪುತ್ರ ಉಪ್ಪಾರ ಇತರರಿದ್ದರು.