ನರಗುಂದ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪುರಸಭೆಯ ಎಸ್ಎಫ್ಸಿ ಹಾಗೂ 15ನೇ ಹಣಕಾಸು ಯೋಜನೆಯಡಿ 1.39 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪುರಸಭೆ ವತಿಯಿಂದ 15ನೇ ಹಣಕಾಸು ಹಾಗೂ ಎಸ್ಎಫ್ಸಿ ಯೋಜನೆಯಡಿ ಕೈಗೊಳ್ಳಲಾಗುವ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರವಿದ್ದಾಗ ಗ್ರಾಮೀಣ ಪ್ರದೇಶಗಳಲ್ಲಿ ಕಾಮಗಾರಿ ಕೈಗೊಳ್ಳಲು 5ರಿಂದ 10 ಕೋಟಿ ರೂ. ಗಳನ್ನು ನೀಡಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರವು 1.39 ಕೋಟಿ ರೂ.ಗಳನ್ನಷ್ಟೆ ಕಾಮಗಾರಿಗಳಿಗೆ ಬಿಡುಗಡೆಗೊಳಿಸಿದೆ. ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರೊಡನೆ ರ್ಚಚಿಸಲಾಗುವುದು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಪ್ರಕಾಶಗೌಡ ತಿಕರಕನಗೌಡ್ರ, ಎಸ್.ಆರ್. ಪಾಟೀಲ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣಾ ಯಲಿಗಾರ, ಉಪಾಧ್ಯಕ್ಷೆ ಕಾಶಮ್ಮ ಮಳಗಿ, ವಿಠಲ ಹವಾಲ್ದಾರ, ಹನುಮಂತ ಹವಾಲ್ದಾರ, ರಾಚನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಸುನೀಲ ಕುಷ್ಟಗಿ, ಪುರಸಭೆ ಸದಸ್ಯೆ ನೀಲಮ್ಮ ವಡ್ಡಿಗೇರಿ, ರೇಣುಕಾ ಕಲ್ಲಾರಿ, ಸಿದ್ದೇಶ ಹೂಗಾರ, ಭಾವನಾ ಪಾಟೀಲ, ಅನಿಲ ಜಮಖಂಡಿ, ಹಸನ್ ಗೋಟೂರ, ಸಿದ್ದಪ್ಪ ಯಲಿಗಾರ, ಬಸವರಾಜ ಮಳಗಿ, ಪ್ರಶಾಂತ ಜೋಶಿ, ಸೋಮು ಸೋನಾವಣೆ, ಬಸೀರ್ ಅಹ್ಮದ್ ಕಿಲ್ಲೇದಾರ, ರಾಜು ಮುಳಿಕ, ಇತರರಿದ್ದರು. ಆರ್.ಬಿ. ಚಿನಿವಾಲರ ನಿರ್ವಹಿಸಿದರು.