ಸಕಲೇಶಪುರ: ತಾಲೂಕಿನಲ್ಲಿ ಉಂಟಾಗಿರುವ ಮಳೆ ಹಾನಿಗೆ ರಾಜ್ಯ ಸರ್ಕಾರ ಕೂಡಲೇ ವಿಶೇಷ ಪರಿಹಾರ ಪ್ಯಾಕೆಜ್ ಘೋಷಣೆ ಮಾಡಬೇಕೆಂದು ಶಾಸಕ ಸಿಮೆಂಟ್ ಮಂಜು ಒತ್ತಾಯಿಸಿದರು.
ಪಟ್ಟಣದಲ್ಲಿ ತುಂಬಿ ಹರಿಯುತ್ತಿರುವ ಹೇಮಾವತಿ ನದಿ ಹಾಗೂ ಹೊಳೆ ಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಸಕಲೇಶಪುರ ತಾಲೂಕಿನಲ್ಲಿ ಎಡೆಬಿಡದೆ ಸುರಿದಿರುವ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಬೆಳೆಗಾರರು ಬೆಳೆದ ಕಾಫಿ, ಮೆಣಸು ಅಡಕೆ ಭತ್ತ ಮುಂತಾದ ಬೆಳೆಗಳು ಮಳೆಯ ರಭಸಕ್ಕೆ ನೆಲಕಚ್ಚಿವೆ. ತಾಲೂಕಿನಲ್ಲಿ ಹಲವಾರು ಕಿರು ಸೇತುವೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ರಸ್ತೆಗಳು ಸಂಪೂರ್ಣ ಹಾಳಾಗಿವೆ. ನೂರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ನಮ್ಮ ತಾಲೂಕಿನಲ್ಲಿ ಹೆಚ್ಚು ಮಳೆ ಸುರಿದಿರುವುದರಿಂದ ಬಯಲುಸೀಮೆ ರೈತರಿಗೆ ಅನುಕೂಲವಾದರೆ ಮಲೆನಾಡು ಭಾಗದಲ್ಲಿ ಪ್ರತಿವರ್ಷ ನಷ್ಟ ಉಂಟಾಗುತ್ತಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಸಕಲೇಶಪುರಕ್ಕೆ ವಿಶೇಷ ಪ್ಯಾಕೇಜ್ ಘೊಷಿಸಿಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಬೃಹತ್ ನೀರಾವರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಮನವಿ ಮಾಡಿದ್ದೇನೆ. ಇಂದಿನಿಂದ ಕ್ಷೇತ್ರದ ಎಲ್ಲ ಭಾಗಕ್ಕೂ ಪ್ರವಾಸ ಮಾಡಿ ಮಳೆಯಿಂದ ಉಂಟಾಗಿರುವ ಹಾನಿ ನಷ್ಟದ ಬಗ್ಗೆ ಮಾಹಿತಿ ಪಡೆದು ವರದಿ ಸಲ್ಲಿಸಿ ಪರಿಹಾರ ಬಿಡುಗಡೆ ಮಾಡಲು ಒತ್ತಾಯಿಸಲಾಗುವುದು ಎಂದರು. ಮಳೆನಿಂತರೂ ನಿಲ್ಲದ ಅವಾಂತರ : ಹದಿನೈದು ದಿನಗಳಿಂದ ಸುರಿಯುತ್ತಿದ್ದ ಮಳೆ ಶನಿವಾರ ಪೂರ್ತಿ ಬಿಡುವು ನೀಡಿದ್ದರೂ ಮಳೆಯ ಅವಘಡಗಳು ಇನ್ನೂ ನಿಂತಿಲ್ಲ. ಶುಕ್ರವಾರ ರಾತ್ರಿಯಿಂದ ಹೇಮಾವತಿ ನದಿಯ ಹರಿವು ಹೆಚ್ಚಾದ ಪರಿಣಾಮ ಪಟ್ಟಣದ ಅಜಾದ್ ರಸ್ತೆಯಲ್ಲಿ 50ಕ್ಕೂ ಹೆಚ್ಚು ಅಂಗಡಿ ಹಾಗೂ ಮನೆಗಳ ಒಳಗೆ ನೀರು ನುಗ್ಗಿದೆ.
ಯಡೆಕುಮೆರಿ ಕಡಗರವಳ್ಳಿ ನಡುವಿನ 63ನೇ ಕಿ.ಮೀ. ರೈಲ್ವೆ ಹಳಿಯ ಮೇಲೆ ಗುಡ್ಡದ ಮಣ್ಣು ಕುಸಿದ ಪರಿಣಾಮ ಶುಕ್ರವಾರ ರಾತ್ರಿಯಿಂದ ರೈಲ್ವೆ ಸಂಚಾರ ರದ್ದು ಪಡಿಸಲಾಗಿದೆ. ರೈಲ್ವೆ ಹಳಿಯ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ರಾಷ್ಟ್ರಿಯ ಹೆದ್ದಾರಿ 75 ರ ದೊಡ್ಡ ತಪ್ಪಲುವಿನಲ್ಲಿ ಮತ್ತೆ ಗುಡ್ಡ ಕುಸಿದು ಕೆಲ ಗಂಟೆಗಳ ಕಾಲ ಸಂಚಾರ ನಿಭರ್ಂದಿಸಲಾಗಿತ್ತು. ಪರ್ಯಾಯವಾಗಿ ವಾಹನಗಳನ್ನು ಕಾಡುಮನೆ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಅವಾಂತರದಿಂದ ಗುಲಗಳೆಯ ಮೂರು ಮನೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ ಪರಿಣಾಮ ಮನೆಯಲ್ಲಿ ಸಾಮಗ್ರಿಗಳು ನೀರುಪಾಲಾಗಿವೆ. ಕೆಲಗಳಲೆ ಗ್ರಾಮದಲ್ಲಿ ಕಿರು ಸೇತುವೆ ಮಳೆಯಿಂದಾಗಿ ಕೊಚ್ಚಿ ಹೋಗಿರುವ ಪರಿಣಾಮ ಸುಮಾರು ಗ್ರಾಮದ ರೈತರ 400 ಎಕರೆಯಷ್ಟು ಗದ್ದೆ ಹಾಗೂ ತೋಟಗಳಿಗೆ ತೆರಳುವ ಸಂಪರ್ಕ ಕಡಿತಗೊಂಡಿದೆ. ದೇವಾಲದಕೆರೆ ಗ್ರಾಮದಲ್ಲಿ ಸುಮಾರು 50 ಎಕರೆ ಭತ್ತದ ಗದ್ದೆ ಜಲಾವೃತಗೊಂಡಿದೆ. ಸಂಕಾಲಪುರ-ಕಾಡುಮನೆ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಓಡಳ್ಳಿ ಸೋಮವಾರಪೇಟೆ ರಾಜ್ಯ ಹೆದ್ದಾರಿ ನಡುಭಾಗದಲ್ಲಿ ಬಿರುಕು ಬಿಟ್ಟಿದೆ. ಯಸಳೂರು ಹೋಬಳಿ ಮತ್ತೂರು ಗ್ರಾಮದ ಕರೆ ಕಟ್ಟೆ ಒಡೆದು ನೂರಾರು ಎಕರೆ ಭತ್ತದ ಗದ್ದೆಗಳಿಗೆ ನೀರು ಹರಿದಿದೆ.
ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಲಿ
You Might Also Like
ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars
Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…
ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream
Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…
ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items
Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…