More

  ಮಹಿಳಾ ಸಾಹಿತ್ಯ ನೋಡುವ ದೃಷ್ಠಿಕೋನ ಬದಲಾಗಲಿ

  ವಿಜಯವಾಣಿ ಸುದ್ದಿಜಾಲ ಧಾರವಾಡ
  ಮಹಿಳೆಯರು ಇಲ್ಲದ ಸಮಾಜ ಸಾಧ್ಯವಿಲ್ಲ ಎಂಬುದನ್ನು 12ನೇ ಶತಮಾನದಲ್ಲಿ ಶರಣರು ಸಾರಿದ್ದಾರೆ. ಸಾಹಿತ್ಯದ ಮೂಲಕ ಸಮಾಜಕ್ಕೆ ಎಂತಹ ಸಂದೇಶ ನೀಡಬೇಕು ಎಂಬುದನ್ನು ಅರಿತುಕೊಳ್ಳಬೇಕಾಗಿದೆ ಎಂದು ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಂಟಿ ಹೇಳಿದರು.
  ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಿಳಾ ಸಾಹಿತ್ಯ ಸಮಾವೇಶ ಹಾಗೂ 2022ನೇ ಸಾಲಿನ ಮಾತೋಶ್ರೀ ರತ್ಮಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
  ಇಂದು ಯಾವುದೇ ಚಳವಳಿಗಳಿಲ್ಲ. ಇಂತಹ ಸಂದರ್ಭದಲ್ಲಿ ಮುಂದಿನ ಪಿಳಿಗೆಯನ್ನು ಯಾವ ರೀತಿ ಸಾಮಾಜದ ಮುಖ್ಯ ವಾಹಿನಿಗೆ ತರಬೇಕು ಎಂಬ ಸಂಕಷ್ಟಗಳು ಕಾಡುತ್ತಿವೆ. ಅದಕ್ಕಾಗಿ ಸಾಹಿತ್ಯ ಕ್ಷೇತ್ರದಲ್ಲಿ ಜಾಗೃತಿಗಳು ನಡೆಯಬೇಕು. ಹಿಡಿಯಾದ ಗ್ರಂಥಗಳನ್ನು ಓದುವ ತಾಳ್ಮೆ ನಮ್ಮ ಮಕ್ಕಳಲ್ಲಿ ಇಲ್ಲವಾಗಿದೆ. ಸಾಹಿತಿಗಳು ಇದನ್ನು ಅರಿತು ಬರವಣಿಗೆ ಮುಂದುವರೆಸಬೇಕಾಗಿದೆ. ಮಹಿಳಾ ಸಾಹಿತ್ಯ ನೋಡುವ ದೃಷ್ಠಿಕೋನ ಬದಲಾಗಬೇಕು. ಇಲ್ಲವಾದಲ್ಲಿ ಮಹಿಳಾ ಸಾಹಿತ್ಯಕ್ಕೆ ಸಿಗಬೇಕಾದ ನ್ಯಾಯ ದೊರಕುವುದಿಲ್ಲ. ಎಲ್ಲಿಯವರೆಗೆ ಸಾಮಾಜಿಕ ವಾಸ್ತವ ಸತ್ಯ ಅರಿಯುವುದಿಲ್ಲವೊ ಅಲ್ಲಿಯವರೆಗೆ ಸಾಹಿತ್ಯದ ಮೂಲಕ ಸಾಮಾಜಿಕ ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ ಎಂದರು.
  ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂ ನಿರಂತರವಾಗಿ ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದೆ. ಮಹಿಳಾ ಮಂಟಪದ ಮೂಲಕ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಕಳೆದ 2 ವರ್ಷಗಳಿಂದ ಸಂದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸ್ಥಾನ ಸಿಗುತ್ತಿದೆ ಎಂದರು.
  ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನವನ್ನು ಭದ್ರಾವತಿಯ ದೀಪ್ತಿ ಭದ್ರಾವತಿ, ತುಮಕೂರಿನ ಡಾ. ಕಮಲಾ ನರಸಿಂಹ, ಮೈಸೂರಿನ ಉಷಾ ನರಸಿಂಹನ್​ ಹಾಗೂ ತುಮಕೂರಿನ ಡಾ. ಗೀತಾ ವಸಂತ ಅವರಿಗೆ ಪ್ರದಾನ ಮಾಡಲಾಯಿತು.
  ಸಂದ ಅಧ್ಯ ಚಂದ್ರಕಾಂತ ಬೆಲ್ಲದ, ಡಾ. ಶಾಂತಾ ಇಮ್ರಾಪುರ, ಎಸ್​ಡಿಎಂಇ ಸೊಸೈಟಿ ಕಾರ್ಯದಶಿರ್ ಜೀವಂಧರಕುಮಾರ, ಡಾ. ಶರಣಮ್ಮ ಗೊರೇಬಾಳ, ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ, ವಿಶ್ವೇಶ್ವರಿ ಹಿರೇಮಠ, ಇತರರು ಉಪಸ್ಥಿತರಿದ್ದರು.
  ನಂತರ ನಡೆದ ಸಾಹಿತ್ಯ ಗೋಷ್ಠಿಯಲ್ಲಿ ಮಹಿಳಾ ಸಾಹಿತಿಗಳು ವಿವಿಧ ವಿಷಯಗಳನ್ನು ಮಂಡನೆ ಮಾಡಿದರು. ಹಿರಿಯ ಸಂಶೋಧಕಿ ಹನುಮಾಕ್ಷಿ ಗೋಗಿ ಅಧ್ಯತೆ ವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts