ತರೀಕೆರೆ: ಪ್ರಾಮಾಣಿಕತೆ ಜೀವನದ ಅತ್ಯಮೂಲ್ಯವಾದ ಮೌಲ್ಯ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ದಾಸ ಸಾಹಿತ್ಯ ಮತ್ತು ಶರಣ ಸಾಹಿತ್ಯದ ಅನುಸಂಧಾನ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದುಕಿನ ಲಾಲಿತ್ಯಕ್ಕೆ ಸಾಹಿತ್ಯ ತುಂಬಾ ಉಪಯುಕ್ತವಾಗಿದ್ದು, ಸಾಹಿತ್ಯ ಜೀವನದ ಒಂದು ಭಾಗವಾಗಿದ್ದು, ಅದು ಮನುಷ್ಯನನ್ನು ಉತ್ತೇಜಿಸುವ ಕೆಲಸ ಮಾಡಲಿದೆ. ಇಂದು ಮನುಷ್ಯ ಒತ್ತಡದ ನಡುವೆ ಜೀವಿಸುವ ಅನಿವಾರ್ಯತೆ ಎದುರಾಗಿದ್ದು, ಇದರಿಂದ ಹೊರಬರಲು ಸಮಯ ಸಿಕ್ಕಾಗ ಸಾಹಿತ್ಯ ಓದುವುದನ್ನು ರೂಢಿಸಿಕೊಳ್ಳಬೇಕು ಎಂದರು.
12ನೇ ಶತಮಾನದಲ್ಲಿ ಶರಣರು ಮೌಲ್ಯಯುತ ಜೀವನ ನಡೆಸಿದರೆ, ದಾಸರು ಬದುಕಿನ ವಾಸ್ತವತೆ ಅರಿತು ಬಾಳುತ್ತಿದ್ದರು. ಕನಕದಾಸರು ಬಯಲು ಆಲಯದೊಳಗೊ,ಆಲಯವು ಬಯಲೊಳಗೊ ಎಂಬ ತತ್ವ ನುಡಿ ಮೂಲಕ ದಾಸ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಮಾತೆಂಬುದು ಜ್ಯೋರ್ತಿಲಿಂಗ ಎಂದು ಶರಣರು ಹೇಳಿರುವಂತೆ ಮಾತು ಮಾಲಿನ್ಯವಾಗದೆ, ಆಡುವ ಮಾತಿನ ಮೇಲೆ ಹಿಡಿತವಿರಬೇಕು ಅದು ಎಲ್ಲರಿಗೂ ಒಪ್ಪಿಗೆಯಾಗುವಂತಿರಬೇಕು ಎಂದು ಹೇಳಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ದಾದಾಪೀರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿ ದಳವಾಯಿ, ಪ್ರಧಾನ ಕಾರ್ಯದರ್ಶಿ ತ.ಮ.ದೇವಾನಂದ್, ಜಿಲ್ಲಾ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ, ನೌಕರರ ಸಂಘದ ಅಧ್ಯಕ್ಷ ಸಿ.ಆರ್.ಅನಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಧರಣೇಶ್, ಶಿಕ್ಷಕ ಚೇತನ್‌ಗೌಡ, ಪ್ರಮುಖರಾದ ನಾಗೇನಹಳ್ಳಿ ಎಚ್.ತಿಮ್ಮಯ್ಯ, ಎ.ದಾದಾಪೀರ್, ಶಶಿಧರ್, ಜಯಸ್ವಾಮಿ, ದೇವರಾಜು ಮತ್ತಿತರರಿದ್ದರು.
ಮಕ್ಕಳಿಗೆ ಮಹಾನೀಯರ ಜೀವನ ಆದರ್ಶವಾಗಲಿ

You Might Also Like
ಈ 3 ರಾಶಿಯವರು ಹಣ ಉಳಿಸುವಲ್ಲಿ, ಗಳಿಸುವಲ್ಲಿ ಭಾರಿ ನಿಪುಣರು! ನಿಮ್ಮ ರಾಶಿ ಯಾವುದು? Zodiac Signs
Zodiac Signs : ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಹಣವು ಪ್ರಮುಖ ಪಾತ್ರ ವಹಿಸುತ್ತದೆ. ಹಣದ ಬೇಡಿಕೆಯು…
ನರ ದೌರ್ಬಲ್ಯಕ್ಕೆ ನೆಲ್ಲಿಕಾಯಿಯೇ ರಾಮಬಾಣ! ಇದರ ಅನೇಕ ಪ್ರಯೋಜನಗಳ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುತ್ತೆ | Gooseberry
Gooseberry : ಪ್ರಕೃತಿಯಲ್ಲಿ ಹಲವು ರೀತಿಯ ಔಷಧಿಗಳಿವೆ. ಅವು ನಮ್ಮ ಕಣ್ಣಿಗೆ ಗೋಚರಿಸುತ್ತಿದ್ದರೂ ಅವುಗಳಲ್ಲಿರುವ ವಿಶೇಷ…
ಕೊರಿಯನ್ನರು, ಚೀನಿಯರು, ಜಪಾನಿಯರು ರಾತ್ರಿ ಹೊತ್ತು ಸ್ನಾನ ಮಾಡೋದೇಕೆ?ಅಚ್ಚರಿಯ ಮಾಹಿತಿ ಇಲ್ಲಿದೆ..! Bathing
Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…