More

  ಸರ್ಕಾರಿ ಶಾಲೆಗಳು ಸಮಾಜಕ್ಕೆ ಮಾದರಿಯಾಗಲಿ

  ತಿ.ನರಸೀಪುರ: ಸರ್ಕಾರಿ ಶಾಲೆಗಳು ಸಮಾಜಕ್ಕೆ ಮಾದರಿಯಾಗಬೇಕೆಂದರೆ ಅವುಗಳ ಉಳಿವಿಗೆ ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಹೇಳಿದರು.

  ತಾಲೂಕಿನ ಸಿ.ಬಿ.ಹುಂಡಿ ಕ್ಲಸ್ಟರ್ ವ್ಯಾಪ್ತಿಯ ಚಂದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಮಕ್ಕಳನ್ನು ಬೆಳೆಸಬೇಕಿದ್ದು, ಸರ್ಕಾರಿ ಶಾಲೆಗಳನ್ನು ಸಮಾಜದಲ್ಲಿ ಮಾದರಿಯಾಗಿಸಲು ಶಿಕ್ಷಕರು, ಪಾಲಕರ ಸಹಕಾರ ಅತ್ಯಗತ್ಯ ಎಂದರು.

  ಮಕ್ಕಳಿಗೆ ಪಠ್ಯ ಚಟುವಟಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬರುವಂತಹ ವಾತಾವರಣ ನಿರ್ಮಿಸಬೇಕು. ಇದು ಸಾಧ್ಯವಾಗಬೇಕಾದರೆ ಮೊಬೈಲ್‌ಮತ್ತು ಟಿವಿಯಿಂದ ದೂರವಿಡಬೇಕು. ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವವರು, ಸಾಧನೆ ಮಾಡಿರುವವರು, ವಿಜ್ಞಾನಿಗಳು ಸರ್ಕಾರಿ ಶಾಲೆಗಳ ಹಿನ್ನೆಲೆಯಿಂದಲೇ ಬಂದವರು. ಹಾಗಾಗಿ ಕೀಳರಿಮೆ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಸಲಹೆ ನೀಡಿದರು.

  ಇದೇ ವೇಳೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನಾಗೇಶ್, ಮುಖ್ಯ ಶಿಕ್ಷಕ ಕೊಂಗಯ್ಯ, ಬಿಆರ್‌ಪಿಗಳಾದ ರಾಜಶೇಖರ್, ಸಿರಿದೇವಿ, ಸಿಆರ್‌ಪಿ ಚಲುವರಾಜು, ಸಹ ಶಿಕ್ಷಕರಾದ ಸೂರ್ಯಕುಮಾರ್, ಜಯರಾಮ್, ಸಾಂಸ್ಕೃತಿಕ ಸಮಿತಿ ಸದಸ್ಯರಾದ ಜ್ಯೋತಿ, ಶಾಂಭವಿ, ಗೀತಾ, ಎಸ್‌ಡಿಎಂಸಿ ಅಧ್ಯಕ್ಷ ನಂಜುಂಡಯ್ಯ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts