ಚಳ್ಳಕೆರೆ: ಸಂವಿಧಾನಬದ್ಧ ಮೀಸಲು ಕ್ಷೇತ್ರಗಳಲ್ಲಿ ಅರ್ಹ ಸಮುದಾಯಗಳಿಗೆ ರಾಜಕೀಯ ಸ್ಥಾನಮಾನ ಸಿಗಬೇಕು ಎಂಬುದು ಸಂಘಟನೆ ಉದ್ದೇಶ ಎಂದು ನಗರಸಭಾ ಮಾಜಿ ಸದಸ್ಯ ಟಿ.ಜೆ.ವೆಂಕಟೇಶ್ ಹೇಳಿದರು.
ರಾಜ್ಯ ಮಾದಿಗ ಯುವಸೇನೆ, ಮಾದಿಗ ದಂಡೋರ ಸಂಘಟನೆಗಳಿಂದ ಅ.1ರಂದು ನಗರದಲ್ಲಿ ಹಮ್ಮಿಕೊಂಡಿರುವ ಜನಪ್ರತಿನಿಧಿಗಳ ಗೌರವ ಸಮರ್ಪಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಬಹುಸಂಖ್ಯಾತ ಮಾದಿಗ ಸಮುದಾಯದ ಸ್ಥಳೀಯ ವ್ಯಕ್ತಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು. ಹೊರ ಜಿಲ್ಲೆಯ ಹಣವಂತರು, ಪ್ರಭಾವಿಗಳಿಗೆ ಮಣೆ ಹಾಕಬಾರದು ಎಂದು ಒತ್ತಾಯಿಸಿದರು.
ಪುರಸಭಾ ಮಾಜಿ ಸದಸ್ಯ ಡಿ.ಕೆ.ಸೋಮಶೇಖರ್ ಮಾತನಾಡಿ, ಸಾಮಾಜಿಕ ನ್ಯಾಯ ಪರಿಪಾಲಿಸುವ ಕಾಂಗ್ರೆಸ್ ಪಕ್ಷ ಈ ಬಾರಿ ಸ್ಥಳೀಯ ವ್ಯಕ್ತಿಗೆ ಟಿಕೆಟ್ ನೀಡಲಿದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಜಾಗೃತಿ ಕರಪತ್ರವನ್ನು ಈ ಸಂದರ್ಭ ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಓಬಳೇಶ್, ಪುರಸಭಾ ಮಾಜಿ ಸದಸ್ಯ ಎಂ.ಚೇತನ್‌ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್, ಪ್ರಶಾಂತ್ ನಾಯಕ, ನಗರಂಗೆರೆ ಬಾಬು, ಜಗದೀಶ್, ಮೂಡಲಗಿರಿಯಪ್ಪ, ಕೆ.ಟಿ.ಮೋಹನ್‌ಕುಮಾರ್, ತೋಪರಮಾಳಿಗೆ ರುದ್ರಮುನಿ, ಭರಮಪುರ ಮಹಾಂತೇಶ್ ಮತ್ತಿತರರು ಇದ್ದರು.