ಕುಶಾಲನಗರ: ಬಾಂಗ್ಲಾದೇಶದಲ್ಲಿನ ಹಿಂದುಗಳ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡ ಬಿ.ಬಿ.ಭಾರತೀಶ್ ಆಗ್ರಹಿಸಿದರು.
ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸೋಮವಾರ ಹಿಂದು ಪರ ಸಂಘಟನೆಗಳು ನಡೆಸಿದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಒಂದು ವಾರದಿಂದ ಬಾಂಗ್ಲಾದೇಶದಲ್ಲಿ ಹಿಂದು ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ, ನಡೆಯುತ್ತಿದೆ. ವಿಶ್ವಸಂಸ್ಥೆಯೊಂದಿಗೆ ಕೇಂದ್ರ ಸರ್ಕಾರ ಮಾತನಾಡಿ ಬಿಕ್ಕಟ್ಟು ಪರಿಹರಿಸಬೇಕು. ಅಲ್ಲಿಯ 2 ಪಕ್ಷಗಳ ನಡುವೆ ನಡೆಯುವ ಹೋರಾಟಕ್ಕೆ ಹಿಂದುಗಳು ಬಲಿ ಅಗುತ್ತಿದ್ದಾರೆ. ಅಲ್ಲಿ ಜಿಹಾದಿ ಸಂಸ್ಕೃತಿ ಹೆಚ್ಚಾಗಿರುವ ಕಾರಣ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಸ್ಸಾಂ ನಿವಾಸಿಗಳು ಎಂದು ಬಿಂಬಿಸಿಕೊಂಡು ಜಿಲ್ಲೆಯಲ್ಲಿ ವಾಸ ಮಾಡುತ್ತಿರುವ ಬಾಂಗ್ಲಾ ವಾಸಿಗಳನ್ನು ಪೊಲೀಸರು ಹುಡುಕಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕೊಡಗಿನಲ್ಲಿ ಜಿಹಾದಿಗಳು ಹುಟ್ಟಿಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂದರು.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಅಖಂಡ ಭಾರತ ನಿರ್ಮಾಣ ಮಾಡಲು ಇದು ಸುಸಮಯ. ಪೂರ್ವ, ದಕ್ಷಿಣ ಪಾಕಿಸ್ತಾನ, ಬಾಂಗ್ಲಾ ಸೇರಿದಂತೆ ಅಫ್ಘಾನಿಸ್ಥಾನ ಸೇರಿಸಿಕೊಂಡು ಪಡೆದುಕೊಳ್ಳಬೇಕು. ಆಗ ಮಾತ್ರ ಅಲ್ಲಿ ನೆಲೆಸಿರುವ ಹಿಂದುಗಳ ರಕ್ಷಣೆ ಸಾಧ್ಯ ಎಂದರು.
ಬಿಜೆಪಿ ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ, ನಗರಾಧ್ಯಕ್ಷ ಚರಣ್, ಕಾರ್ಯದರ್ಶಿ ಮಧುಸೂದನ್, ಮುಖಂಡರಾದ ಸಂತೋಷ್, ಎಂ.ಡಿ.ಕೃಷ್ಣಪ್ಪ, ಡಿ.ಸಿ.ಮಂಜುನಾಥ್, ಭರತ್, ಎಂ.ವಿ.ನಾರಾಯಣ ಇತರರಿದ್ದರು. ಬಾಂಗ್ಲಾದೇಶದಲ್ಲಿ ಮೃತಪಟ್ಟ ಹಿಂದುಗಳ ಶಾಂತಿಗಾಗಿ 2 ನಿಮಿಷ ಮೌನಾಚರಣೆ ಸಲ್ಲಿಸಲಾಯಿತು.