blank

ಅಪಘಾತ, ಅಪರಾಧ ಪ್ರಮಾಣ ತಗ್ಗಲಿ

blank

ಗೋಕರ್ಣ: ಪ್ರವಾಸೋದ್ಯಮ ಕೇಂದ್ರಗಳಲ್ಲಿ ಮೂಲಸೌರ್ಯಗಳ ಅಭಿವೃದ್ಧಿ ಹೇಗೆ ಮುಖ್ಯವೋ ಅದೇ ರೀತಿ ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಕುರಿತಾದ ಸಮಗ್ರ ಮಾಹಿತಿಯೂ ಅಷ್ಟೇ ಮುಖ್ಯವಾಗಿದೆ. ಪ್ರವಾಸಿಗರಿಗೆ ಮಾಹಿತಿ ಒದಗಿಸುವುದರಿಂದ ಸಂಭವಿಸಬಹುದಾದ ಅಪಘಾತ ಮತ್ತು ಅಪರಾಧಗಳನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ಹೇಳಿದರು.

blank

ಇಲ್ಲಿನ ಪ್ರವೇಶ ದ್ವಾರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಪುನರಾರಂಭಿಸಲಾದ ಪೊಲೀಸ್ ಮಾಹಿತಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಗೋಕರ್ಣಕ್ಕೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಈ ಕ್ಷೇತ್ರ, ಇಲ್ಲಿನ ಬೆಟ್ಟ ಗುಡ್ಡ, ವಿವಿಧ ಬೀಚ್‌ಗಳ ಬಗ್ಗೆ ಸ್ಥಳೀಯವಾಗಿ ಮಾಹಿತಿಯ ಕೊರತೆಯಿಂದ ಪ್ರತಿ ವರ್ಷ ಪ್ರವಾಸಿಗರು ವಿವಿಧ ಅಪಘಾತಗಳಿಗೆ ಮತ್ತು ಮಾದಕ ದ್ರವ್ಯಗಳಂತಹ ಅಪರಾಧಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ. ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರವಾಸಿ ಮತ್ತು ಯಾತ್ರಿಕರಿಗೆ ಅಗತ್ಯವಿರುವ ಮಾಹಿತಿಯನ್ನು ಪ್ರವೇಶ ದ್ವಾರದಲ್ಲಿಯೇ ಒದಗಿಸಲು ಕೇಂದ್ರವನ್ನು ಪುನರಾರಂಭಿಸಲಾಗಿದೆ ಎಂದರು.

ರಾಜ್ಯ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ನಿವೇದಿತ್ ಆಳ್ವಾ ಮಾತನಾಡಿ, ನೈಸರ್ಗಿಕವಾಗಿ ಆಕರ್ಷಣೀಯ ಪರಿಸರವನ್ನು ಪಡೆದಿರುವ ಗೋಕರ್ಣಕ್ಕೆ ಇದಕ್ಕೆ ತಕ್ಕುದಾದ ವಿವಿಧ ಅಭಿವೃದ್ಧಿ ಕಾರ್ಯಗಳು ಆಗಬೇಕಾದ ಅವಶ್ಯವಿದೆ. ಇದಕ್ಕೆ ಸಹಕಾರಿಯಾಗಿ ಪೊಲೀಸ್ ಇಲಾಖೆ ಮುಂದಾಳತ್ವದಲ್ಲಿ ಪುನರಾರಂಭವಾಗಿರುವ ಮಾಹಿತಿ ಕೇಂದ್ರದ ಪ್ರಯತ್ನ ಶ್ಲಾಘನೀಯವಾದುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಶುಭ ಕೋರಿದರು.

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಂಜುನಾಥ ನಾವಿ, ಕಾನೂನು ಸುವ್ಯವಸ್ಥೆ ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ, ಅಪರಾಧ ವಿಭಾಗದ ಹೆಚ್ಚುವರಿ ಎಸ್‌ಪಿ ಜಗದೀಶ ನಾಯಕ, ನಿವೃತ್ತ ಪೊಲೀಸ್ ವರಿಷ್ಠ ಎನ್.ಟಿ. ಪ್ರಮೋದ ರಾವ್, ಆನುವಂಶೀಯ ಉಪಾಧಿವಂತ ಮಂಡಳ ಅಧ್ಯಕ್ಷ ರಾಜಗೋಪಾಲ ಅಡಿ ಗುರೂಜಿ, ಪ್ರದೀಪ ನಾಯಕ, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗ ಘಟಕದ ಖಜಾಂಚಿ ಮಹೇಶ ಶೆಟ್ಟಿ, ತೊರ್ಕೆ ಗ್ರಾಪಂ ಅಧ್ಯಕ್ಷ ಆನಂದ ಕವರಿ ಮಾತನಾಡಿದರು. ಹೊನ್ನಾವರ ಎಸಿಎಫ್ ಕೃಷ್ಣಯ್ಯ ಗೌಡ ಸ್ಥಳೀಯ ಉಪಾಧಿವಂತ ಮಂಡಳದ ಕಾರ್ಯದರ್ಶಿ ಬಾಲಕೃಷ್ಣ ಜಂಭೆ ಉಪಸ್ಥಿತರಿದ್ದರು.

ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಜೀವರಕ್ಷಕರನ್ನು ಸನ್ಮಾನಿಸಲಾಯಿತು. ರಾಜಗೋಪಾಲ ಅಡಿ ಗುರೂಜಿ ಪುಣ್ಯಾಶ್ರಮದ ವತಿಯಿಂದ ದೇಣಿಗೆ ನೀಡಲಾದ ಪೊಲೀಸ್ ಚೌಕಿಗಳು ಮತ್ತು ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ತಾಣಗಳ ಬ್ರೋಷರ್‌ಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ಭಟ್ಕಳ ಡಿಎಸ್‌ಪಿ ಮಹೇಶ ಎಂ.ಕೆ.ಸ್ವಾಗತಿಸಿದರು. ಪೊಲೀಸ್ ಇನಸ್ಪೆಕ್ಟರ್ ಶ್ರೀಧರ ಎಸ್.ಆರ್., ಕಾನೂನು ವಿಭಾಗದ ಪಿಎಸ್‌ಐ ಖಾದರ ಬಾಷಾ, ಅಪರಾಧ ವಿಭಾಗದ ಪಿಎಸ್‌ಐ ಶಶಿಧರ, ಪತ್ರಕರ್ತ ಸುಭಾಷ ಕಾರೇಬೈಲು ಮತ್ತಿತರರು ನಿರ್ವಹಿಸಿದರು.

Share This Article
blank

ಮಳೆ ಬಂದಾಗ ಸ್ನಾನ ಮಾಡುವುದು ಅಪಾಯಕಾರಿ! ಮೊದಲು ಈ ಕುರಿತು ತಿಳಿದುಕೊಳ್ಳಿ… lifestyle

lifestyle : ಮಳೆ ಬಂದಾಗ   ಗುಡುಗು ಮತ್ತು ಮಿಂಚಿನೊಂದಿಗೆ ಬಂದರೆ, ನಾವು ಜಾಗರೂಕರಾಗಿರಬೇಕು. ಮಳೆ ಬರುತ್ತಿರುವಾಗ…

ಮಳೆಗಾಲದಲ್ಲಿ ಪಪ್ಪಾಯಿ ಉತ್ತಮ; ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲ ಪ್ರಯೋಜನ ಗೊತ್ತೇ? ಇಲ್ಲಿದೆ ಮಾಹಿತಿ | Papaya

Papaya Benefits: ನಾವು ತಿನ್ನುವ ಹಣ್ಣುಗಳಲ್ಲಿ ಪಪ್ಪಾಯಿ ಕೂಡ ಬಹಳ ವಿಶೇಷವಾದುದು. ಈ ಹಣ್ಣಿನ ಬಗ್ಗೆ…

blank