ಕಲಕೇರಿ” ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ತಮ್ಮಲ್ಲಿನ ಪ್ರತಿಭೆ ತೋರಿಸಬೇಕೆಂದು ಸ್ಥಳೀಯ ಗುರುಮರುಳಾದ್ಯರ ಸಂಸ್ಥಾನ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಹೇಳಿದರು.
ಗ್ರಾಮದ ಎಸ್.ಎಂ.ವಿ.ವಿ ಸಂಘದ ಅನುದಾನಿತ ಬಸವೇಶ್ವರ ಪಪೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಉಪನ್ಯಾಸಕರು ಪಾಠ ಬೋಧನೆ ಜತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಬೇಕಿದೆ ಎಂದರು.
ಸಂಸ್ಥೆ ನಿರ್ದೇಶಕ ಶಿವಪುತ್ರಪ್ಪ ಕಡಕೋಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸೂಕ್ತ ಸಮಯದಲ್ಲಿ ಉತ್ತಮ ನಿಧಾರ ತೆಗೆದುಕೊಳ್ಳಬೇಕು. ಇದು ಪ್ರತಿಯೊಬ್ಬರ ಜೀವನದ ಬದಲಾವಣೆಗೆ ನಾಂದಿಯಾಗುತ್ತದೆ ಎಂದು ತಿಳಿಸಿದರು.
ಚಿಕ್ಕಸಿಂದಗಿಯ ಕಾಯಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರವಿಸ್ವಾಮಿ ಹತ್ತರಕಿಹಾಳಮಠ, ಸಂಸ್ಥೆ ಅಧ್ಯಕ್ಷ ಶಾಂತಗೌಡ ಪಾಟೀಲ, ಕಾರ್ಯದರ್ಶಿ ಮಲ್ಲಿಕಾರ್ಜುನ್ ಜೋಗುರ, ಉಪನ್ಯಾಸಕ ಬಿ. ಜಿ. ಚನಗೊಂಡ ಮಾತನಾಡಿದರು.
ಸಂಸ್ಥೆಯಲ್ಲಿ 35 ವರ್ಷ ಸೇವೆ ಸಲ್ಲಿಸಿದ ಪ್ರಾಚಾರ್ಯ ಸಿ.ಎಸ್. ಹಿರೇಮಠ, ಇಂಗ್ಲಿಷ್ ಉಪನ್ಯಾಸಕ ಎಸ್.ಎಸ್. ಕಲಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಅಲ್ಲದೆ, ಕ್ರೀಡಾ ಸಾಧಕರು, ಗಣ್ಯರನ್ನು ಸನ್ಮಾನಿಸಲಾಯಿತು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಷಣ್ಮುಕಪ್ಪ ಝಳಕಿ, ಜಿ. ಎಂ. ಗುಮಶೆಟ್ಟಿ, ಸಂಗಾರೆಡ್ಡಿ ದೇಸಾಯಿ, ವಿ. ಆರ್. ಝಳಕಿ, ಎಸ್. ಸಿ. ಚಳ್ಳಗಿ, ದೇವಿಂದ್ರ ಗುಮಶೆಟ್ಟಿ, ಕುಮಾರಧನಿ ದೇಸಾಯಿ, ಆರ್. ಜಿ. ಗುಮಶೆಟ್ಟಿ, ಎಸ್. ಎಸ್. ಧುರ್ಗಿ, ಬಿ.ಜಿ. ಶಿವಕುಮಾರ ಚಿಕ್ಕಮಠ, ಬೋರಮ್ಮ ಗೋಟಗೊಣಕಿ, ಗುರುಬಾಯಿ ಕರಗಾರ ಇತರರಿದ್ದರು. ಡಾ. ಜಿ. ಜಿ. ಮೇಡೆದಾರ, ಬಿ. ಎಂ. ಕುಂಬಾರ ನಿರೂಪಿಸಿದರು. ಆರ್. ಎಂ. ಗುಮಶೆಟ್ಟಿ ವಂದಿಸಿದರು.