ಅಥಣಿ ಗ್ರಾಮೀಣ: ರೈತರಿಗೆ ಸಹಕಾರಿ ಸಂಘದಿಂದ ಶೂನ್ಯ ಬಡ್ಡಿದರದಲ್ಲಿ ಸಾಲದ ಜತೆಗೆ ಡಿಸಿಸಿ ಬ್ಯಾಂಕ್ ಮುಖಾಂತರ ವಾಹನ ಸಾಲ, ವ್ಯಾಪಾರ ಸಾಲ ಕೂಡ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಥಣಿ ಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಧಿಕಾರಿ ಶಂಕರ ನಂದೇಶ್ವರ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಡಿಸಿಸಿ ಬ್ಯಾಂಕ್ ವತಿಯಿಂದ ಶುಕ್ರವಾರ 5 ಕೋಟಿ ರೂ. ಮೊತ್ತದ ಕಬ್ಬು ಕಟಾವು ಯಂತ್ರ, ಜೆಸಿಬಿ ಮತ್ತು 15 ಕಾರು ವಿತರಿಸಿ ಮಾತನಾಡಿದರು.
ನಿರೀಕ್ಷಕ ಚೇತನ ದಳವಾಯಿ, ಶಿವಾನಂದ ಡವಳೇಶ್ವರ, ವ್ಯವಸ್ಥಾಪಕ ಮಹಾದೇವ ಕುಂಬಾರ, ಪಿಕೆಪಿಎಸ್ ಅಧ್ಯಕ್ಷ ಅಣ್ಣಪ್ಪ ಖೋತ, ಉಪಾಧ್ಯಕ್ಷ ಸಂಗಪ್ಪ ಅಡಹಳ್ಳಿ, ವೀರೇಂದ್ರ ಹಳಕಿ, ಮಹಾಂತೇಶ ಅಥಣಿ, ಮಲ್ಲಪ್ಪ ಕಾಶಿದ, ಸಂಜು ಮುದಕಣ್ಣವರ, ಭರಮಪ್ಪ ಬಣಜ, ಕಾಡಪ್ಪ ಕಾಳಾಪಾಟೀಲ ಇತರರಿದ್ದರು.