blank

ಸಿದ್ಧಗಂಗಾ ಶ್ರೀ ಆದರ್ಶ ಪ್ರೇರಣೆಯಾಗಲಿ

blank

ನಂಜನಗೂಡು: ನಂಜನಗೂಡಿನ ವಿದ್ಯಾನಗರದ ಸಮೃದ್ಧಿ ಗೆಳೆಯರ ಬಳಗ ಮತ್ತು ಕದಳಿ ಮಹಿಳಾ ವೇದಿಕೆ ಹಾಗೂ ವೈರಾಗ್ಯನಿಧಿ ಅಕ್ಕಮಹಾದೇವಿ ಮಹಿಳಾ ಸೌಹಾದರ್ ಸಹಕಾರ ಸಂಘದಿಂದ ವಿಶ್ವ ಗುರು ಬಸವೇಶ್ವರ ವೃತ್ತದಲ್ಲಿ ಜಗದ ಜಂಗಮ ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪನ್ಯಾಸಕ ಸಿದ್ದಮಲ್ಲಿಕಾರ್ಜುನ ಸ್ವಾಮಿ, ನಾನು ಮತ್ತು ನಮ್ಮಂತಹ ಸಾವಿರಾರು ವಿದ್ಯಾರ್ಥಿಗಳು ಶಿಸ್ತಿನ ಜೀವನ ರೂಪಿಸಿಕೊಳ್ಳಲು ಸಿದ್ಧಗಂಗಾ ಸ್ವಾಮೀಜಿಯೇ ಆದರ್ಶ. ಶ್ರೀಮಠಕ್ಕೆ ಬರುವ ಎಲ್ಲರನ್ನೂ ಒಂದೇ ಸಮನಾಗಿ ನೋಡುತ್ತಿದ್ದ ಶ್ರೀಗಳು ಲಕ್ಷಾಂತರ ಜನರ ಬದುಕು ರೂಪಿಸಿಕೊಳ್ಳಲು ಧರೆಗೆ ಅವತರಿಸಿ ಬಂದ ಕಾರಣಿಕ ಪುರುಷರಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮೃದ್ಧಿ ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷ ಕಲ್ಮಳ್ಳಿ ನಟರಾಜು, ಜಗತ್ತಿಗೆ ಮಾನವ ಧರ್ಮವನ್ನು ಕೊಟ್ಟ ಬಸವಣ್ಣ ಮತ್ತು ಸಮಕಾಲೀನ ಶರಣರನ್ನು ನಾವು ನೋಡಿಲ್ಲ. ಚರಿತ್ರೆಯಿಂದ ಓದಿ ತಿಳಿದಿದ್ದೇವೆ. ಆದರೆ ಸಿದ್ಧಗಂಗಾ ಸ್ವಾಮೀಜಿ ಪ್ರಸ್ತುತ ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಕಣ್ಣಾರೆ ನೋಡಬಹುದು ಎಂದರು.

ಪ್ರಾರಂಭದಲ್ಲಿ ಬದನವಾಳು ಶ್ರೀ ಬಸವೇಶ್ವರ ಭಜನಾ ತಂಡದವರು ವಚನ ಗಾಯನ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ 7 ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮೀನಾಕ್ಷಿ ಬಸವಣ್ಣ, ವೈರಾಗ್ಯ ನಿಧಿ ಅಕ್ಕಮಹಾದೇವಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಮಾವತಿ, ಮಹಾದೇವ ಸ್ವಾಮಿ, ನಿರ್ದೇಶಕರಾದ ಗೀತಾ ನಟರಾಜು, ಕವಿತಾ ಪರಮೇಶ್, ಸೌಮ್ಯಾ, ಗಿರೀಶ್, ಆಸರೆ ಗೆಳೆಯರ ಬಳಗದ ಅಧ್ಯಕ್ಷ ಹೊನ್ನಪ್ಪ, ಕುರಹಟ್ಟಿ ಮುತ್ತು ರಾಜ್, ಪ್ರಭುಸ್ವಾಮಿ ಕಸುವಿನ ಹಳ್ಳಿ, ಮುಳ್ಳೂರು ಶಿವಕುಮಾರ, ಉದ್ಯಮಿ ಸುರೇಶ್ ಕುರುಬರ ಹುಂಡಿ, ಸುರೇಶ್, ಸೋಲಾರ್ ಕೀರ್ತಿ, ಅಂಗಡಿ ರಘು ಸಂಸ್ಕೃತ ಶಿಕ್ಷಕ ಶಿವಲಿಂಗಸ್ವಾಮಿ, ರೇಚಣ್ಣ, ಅರಳಿ ಕಟ್ಟೆ ಶಾಂತ ಮಲ್ಲಪ್ಪ, ಗುರು ಮಲ್ಲಪ್ಪ, ಬಣ್ಣಾರಿ ಅಮ್ಮನ್ ಕಾರ್ಖಾನೆ ನೌಕರರಾದ ಮಹೇಶ್ ಯಕನೂರು, ನಂಜುಂಡಸ್ವಾಮಿ, ನಿವೃತ್ತ ಶಿಕ್ಷಕರಾದ ಮಾದಪ್ಪ, ರಾಜಶೇಖರ್, ತಗಡೂರು ರಾಜಶೇಖರ್, ಮಹದೇವಸ್ವಾಮಿ, ಗ್ರಾಪಂ ಸದಸ್ಯ ಬದನವಾಳು ಮಂಜುನಾಥ್ ಇತರರಿದ್ದರು. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

 

 

 

 

Share This Article

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…