ದ್ರೋಹ ಎಸಗುತ್ತಿರುವವರ ಹೆಸರು ಸಿದ್ದರಾಮಯ್ಯ ಬಹಿರಂಗಪಡಿಸಲಿ: ಎನ್.ರವಿಕುಮಾರ್ ಸವಾಲು

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರಿಗೆ ನಮ್ಮವರೇ ದ್ರೋಹ ಬಗೆದು ಬಲಿ ಹಾಕಿದರು. ಅದೇ ರೀತಿ ನಮ್ಮವರೇ ನನಗೆ ದ್ರೋಹ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದ್ರೋಹ ಎಸಗುತ್ತಿರುವವರು ಯಾರು ? ಹೆಸರು ಬಹಿರಂಗಪಡಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಸವಾಲು ಹಾಕಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಕಿತ್ತೂರು ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿ, ತ್ಯಾಗ-ಬಲಿದಾನವಾದ ವೀರ ಯೋಧ ಸಂಗೊಳ್ಳಿ ರಾಯಣ್ಣ ಅವರೊಂದಿಗೆ ತಮ್ಮನ್ನು ಹೋಲಿಸಿಕೊಂಡಿದ್ದಕ್ಕೆ ಸಿದ್ದರಾಮಯ್ಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಸಂಗೊಳ್ಳಿ ರಾಯಣ್ಣ ಹಾಗೂ ಸಿದ್ದರಾಮಯ್ಯ ಅವರಿಗೆ ಎತ್ತಣಿಂದೆತ್ತ ಹೋಲಿಕೆ. ನಿಸ್ವಾರ್ಥ ಹೋರಾಟಗಾರ ಸಂಗೊಳ್ಳಿ ಅವರೊಂದಿಗೆ ಮುಡಾದಲ್ಲಿ 14 ಸೈಟು ಪಡೆದ ಸ್ವಾರ್ಥಿ ಸಿದ್ದರಾಮಯ್ಯ ಅಜಗಜಾಂತರವಿದೆ. ಕ್ರಾಂತಿವೀರನ ಜತೆಗೆ ತುಲನೆ ಮಾಡಿಕೊಳ್ಖುವಂತಹ ನೈತಿಕತೆ ಸಿದ್ದರಾಮಯ್ಯ ಅವರಿಗೆ ಇಲ್ಲವೆಂದು ಎನ್.ರವಿಕುಮಾರ್ ಟೀಕಿಸಿದರು.

ಸಚಿವರೇ ತತ್ತರ

ಬೃಹತ್ ಬೆಂಗಳೂರು ಮಹಾನಗರ ತೆರಿಗೆ, ವಿವಿಧ ಸೆಸ್ ಗಳ ಭಾರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತತ್ತರಿಸಿದ್ದಾರೆ. ಇನ್ನೂ ಸಾಮನ್ಯ ಜನರ ಗತಿ ಏನು ? ಎಂದು ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಸಪ್ತಗಿರಿಗೌಡ ಕೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‌ ದಿನೇಶ್ ಗುಂಡೂರಾವ್ ಮತ್ತವರ ಪತ್ನಿ ನಿರ್ಮಿಸುತ್ತಿರುವ ಕಟ್ಟಡಕ್ಕೆ ಆ ಸೆಸ್, ಈ ತೆರಿಗೆ ಎಂದು ಹೇಳಿ 45 ಲಕ್ಷ ರೂ ಕಟ್ಟುವಂತೆ ಬಿಬಿಎಂಪಿ ನೀಡಿದ ನೋಟಿಸ್ ವಿರುದ್ಧ ಸಚಿವರೇ ಕೋರ್ಟ್ ಗೆ ಮೊರೆ ಹೋಗಿದ್ದಾರೆ. ಜನ ಸಾಮಾನ್ಯರ ಮೇಲೆ ಬಿಬಿಎಂಪಿ ತೆರಿಗೆ ಹೊರೆ ಹಾಕುತ್ತಿರುವುದಕ್ಕೆ ಈ ಪ್ರಕರಣ ನಿದರ್ಶನ ಎಂದರು.

ತೆರಿಗೆ, ಶುಲ್ಕ ವಸೂಲಿಯಲ್ಲಿ ಬಿಬಿಎಂಪಿಗೆ ಹೆಚ್ಚಿನ ಆಸಕ್ತಿಯಿದೆ. ಆದರೆ, ಮೂಲ ಸವಲತ್ತು ಅಭಿವೃದ್ಧಿ ಒತ್ತಟ್ಟಿಗಿರಲಿ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ‌ ವಿಫಲವಾಗಿದೆ. ಆಯ್ದ ಮುಖ್ಯ ರಸ್ತೆಗಳ ಗುಂಡಿ ಮುಚ್ಚಿದ್ದನ್ನೇ ಡಿಸಿಎಂ ಡಿ.ಕೆ.ಶಿವಕುಮಾರ್ ತೋರಿಸಿ ಎಲ್ಲ ರಸ್ತೆ ಗುಂಡಿ ಮುಚ್ಚಿದ್ದೇವೆ ಎನ್ನುತ್ತಿದ್ದಾರೆ. ಒಳ ರಸ್ತೆಗಳ ದುಃಸ್ಥಿತಿಗೆ ಜನ, ವಾಹನ ಸವಾರರು ಹೈರಾಣಾಗಿದ್ದಾರೆ ಎಂದು ಸಪ್ತಗಿರಿಗೌಡ ಆಕ್ರೋಶ ವ್ಯಕ್ತಪಡಿಸಿದರು.

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…