More

    ಅಧಿಕಾರಿಗಳು ವರ್ತಕರ ಸಮಸ್ಯೆಗಳಿಗೆ ಸ್ಪಂದಿಸಲಿ

    ಕುಷ್ಟಗಿ: ಚ್ಛತಾ ಕಾರ್ಯ ಅಭಿಯಾನಕ್ಕೆ ಸೀಮಿತವಾಗಬಾರದು ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ ಹೇಳಿದರು.

    ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಭಾನುವಾರ ಏರ್ಪಡಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು. ಎಪಿಎಂಸಿ ಪ್ರಾಂಗಣದಲ್ಲಿ ಕಸದ ಸಮಸ್ಯೆ ಹೆಚ್ಚಿದೆ. ಬಹುದಿನಗಳಾದರೂ ಕಸ ವಿಲೇವಾರಿಯಾಗದೆ ಹಂದಿ, ನಾಯಿಗಳ ಕಾಟ ಹೆಚ್ಚಿದೆ.

    ಹಲವು ಸಮಸ್ಯೆ

    ಕಾವಲುಗಾರರಿಲ್ಲದೆ ಅಂಗಡಿಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಕಾಂಪೌಂಡ್ ವ್ಯವಸ್ಥೆ ಸೇರಿ ಹಲವು ಸಮಸ್ಯೆಗಳು ಕಾಡುತ್ತಿವೆ. ಯಾವಾಗಲೋ ಒಮ್ಮೆ ಅಭಿಯಾನ ನಡೆಸಿದರೆ ಸಾಲದು ಸ್ವಚ್ಛಗೊಳಿಸುವ ಕಾರ್ಯ ನಿತ್ಯ ನಡೆಯಬೇಕಿದೆ.

    ಇದನ್ನೂ ಓದಿ: ಸ್ಫೂರ್ತಿ ಕಿರಣ ವಿಶೇಷ ಉಪನ್ಯಾಸ 11ರಂದು

    ಜತೆಗೆ ವರ್ತಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಮಿತಿಯ ಅಧಿಕಾರಿಗಳು ಸ್ಪಂದಿಸಬೇಕಿದೆ ಎಂದರು. ಸಂಪನ್ಮೂಲ ವ್ಯಕ್ತಿ ಶಿಕ್ಷಕ ನಟರಾಜ ಸೋನಾರ ವಿಶೇಷ ಉಪನ್ಯಾಸ ನೀಡಿದರು.

    ಎಪಿಎಂಸಿ ಕಾರ್ಯದರ್ಶಿ ಟಿ.ನೀಲಪ್ಪಶೆಟ್ಟಿ, ಹಮಾಲರ ಸಂಘದ ಅಧ್ಯಕ್ಷ ಮಹಾಂತೇಶ ಪಾಟೀಲ್, ಪ್ರಮುಖರಾದ ಶೇಖರಗೌಡ ಪೊಲೀಸ್ ಪಾಟೀಲ್, ಮಹಾಂತೇಶ ಅಗಸಿಮುಂದಿನ್, ಕರಿಬಸಪ್ಪ ನವಲಹಳ್ಳಿ, ಚಂದ್ರಶೇಖರ ಕುಡತಿನಿ, ಸಂಗಮೇಶ ಶಿವನಗುತ್ತಿ, ಶರಣಪ್ಪ ಲಿಂಗಶೆಟ್ಟರ್, ಪಾಣಯ್ಯ ಹಿರೇಮಠ ಇತರರು ಇದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 22

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts